ETV Bharat / state

ಸುಧಾಕರ್ ಜೊತೆ ಪ್ರಚಾರ ಮಾಡಲ್ಲ, ವೇದಿಕೆ ಹಂಚಿಕೊಳ್ಳೋದಿಲ್ಲ : ಎಸ್. ಆರ್ ವಿಶ್ವನಾಥ್ ತಟಸ್ಥ ನಿಲುವು - S R Vishwanath - S R VISHWANATH

ಡಾ. ಕೆ ಸುಧಾಕರ್ ಪರವಾಗಿ ಪ್ರಚಾರ ಮಾಡುವುದಿಲ್ಲ. ಮೋದಿ ಪರವಾಗಿ ಮತ್ತು ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಶಾಸಕ ಎಸ್. ಆರ್ ವಿಶ್ವನಾಥ್ ಅವರು ತಿಳಿಸಿದ್ದಾರೆ.

ಶಾಸಕ ಎಸ್. ಆರ್ ವಿಶ್ವನಾಥ್
ಶಾಸಕ ಎಸ್. ಆರ್ ವಿಶ್ವನಾಥ್
author img

By ETV Bharat Karnataka Team

Published : Mar 27, 2024, 7:29 PM IST

ಶಾಸಕ ಎಸ್. ಆರ್ ವಿಶ್ವನಾಥ್

ಯಲಹಂಕ (ಬೆಂಗಳೂರು) : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಕೆ ಸುಧಾಕರ್ ವಿರುದ್ಧ ಎಸ್. ಆರ್ ವಿಶ್ವನಾಥ್ ತಟಸ್ಥರಾಗಿದ್ದಾರೆ. ಅವರ ಜೊತೆ ಪ್ರಚಾರ ಮಾಡುವುದಿಲ್ಲ. ವೇದಿಕೆ ಸಹ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಎಸ್. ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಟಿಕೆಟ್ ಕೈತಪ್ಪಿ ಡಾ. ಕೆ ಸುಧಾಕರ್ ಅವರಿಗೆ ಸಿಕ್ಕಿರುವುದು ವಿಶ್ವನಾಥ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಯಲಹಂಕದಲ್ಲಿ ಇಂದು ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸಭೆ ನಡೆಸಿದ ಎಸ್. ಆರ್ ವಿಶ್ವನಾಥ್, ಡಾ. ಕೆ ಸುಧಾಕರ್ ಪರವಾಗಿ ಪ್ರಚಾರ ಮಾಡುವುದಿಲ್ಲ. ಮೋದಿ ಪರವಾಗಿ ಮತ್ತು ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಧಾಕರ್ ಪರವಾಗಿ ನಾವು ಮತ ಕೇಳುವುದಿಲ್ಲ. ಪಕ್ಷದ ಪರವಾಗಿ, ಮೋದಿ ಪರವಾಗಿ ಮತ ಕೇಳುತ್ತೇವೆ. ಇದು ನಮ್ಮ ವೈಯಕ್ತಿಕ ನಿಲುವು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡುವೆ. ಬೂತ್ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದರು.

ಸೋಲು ಗೆಲುವು ಆ ಭಗವಂತನಿಗೆ ಬಿಟ್ಟಿದ್ದು, ಮತದಾರರು ವ್ಯಕ್ತಿಯನ್ನು ನೋಡಿ ಮತ ಹಾಕುತ್ತಾರೆ. ಸೋತರೆ ನಾವು ಜವಾಬ್ದಾರರಲ್ಲ. ಎಂಪಿ ಸೀಟ್ ಸಿಗದೆ ಇದ್ದಿದ್ದಕ್ಕೆ ಬೇಸರವಿಲ್ಲ. 45 ವರ್ಷ ರಾಜಕೀಯ ಮಾಡಿದ ನನಗೆ ರಾಜಕೀಯ ಹಪಾಹಪಿ ಇಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ನಾನು ಮಾಡುವುದಿಲ್ಲ. ಕುಟುಂಬ ರಾಜಕೀಯ ಎಂಬ ಕಾರಣಕ್ಕೆ ನಮಗೆ ಟಿಕೆಟ್ ಕೈತಪ್ಪಿದೆ ಎಂದು ತಿಳಿಸಿದರು.

ಡಾ. ಕೆ ಸುಧಾಕರ್ ದೆಹಲಿ ವರಿಷ್ಠರ ಜೊತೆಗಿನ ಉತ್ತಮ ಸಂಬಂಧವೇ ಅಲೋಕ್ ವಿಶ್ವನಾಥ್ ಅವರಿಗೆ ಟಿಕೆಟ್ ಕೈತಪ್ಪಲು ಕಾರಣವೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೂ ದೆಹಲಿ ವರಿಷ್ಠರೊಂದಿಗೆ ಉತ್ತಮ ಸಂಬಂಧವಿದೆ. ನರೇಂದ್ರ ಮೋದಿಯವರೇ ಅಲೋಕ್ ಜೊತೆ ಮಾತನಾಡಿದ್ದಾರೆ. ಅದಕ್ಕಿಂತ ಸೌಭಾಗ್ಯ ಬೇಕೇ? ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯ ನಾಯಕರು ಸುಧಾಕರ್​ಗೆ ಟಿಕೆಟ್ ಸಿಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಟಿಕೆಟ್ ಸಿಕ್ಕಿರುವುದು ನಮಗೆ ಆಶ್ಚರ್ಯ ಮತ್ತು ಆಘಾತವಾಗಿದೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಂಡಾಯ ಅಂದವರಿಗೆ ಬಡಿಗೆ ತಗೊಂಡು ಹೊಡೆಯುವೆ ಎಂದರು. ನಮ್ಮ ಸಂಘಟನೆಯ ಮೂಲಕವೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದರು.

ಸುಧಾಕರ್ ಮತ್ತು ಅಲೋಕ್ ಹೊರತುಪಡಿಸಿ ಮೂರನೇ ವ್ಯಕ್ತಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕಳೆದ ಮೂರು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಎರಡು ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆ ಇದ್ದು, ನಾಮಪತ್ರ ಸಲ್ಲಿಕೆಯಾಗುವವರೆಗೂ ಕಾದು ನೋಡಲಾಗುವುದು. ಒಂದು ವಾರದಲ್ಲಿ ಚುನಾವಣೆಯ ಪ್ರಚಾರ ಮಾಡಿ ಮುಗಿಸುತ್ತೇವೆ ಎಂದರು.

ಇದನ್ನೂ ಓದಿ : ಡಾ. ಕೆ. ಸುಧಾಕರ್ ವಿರುದ್ಧ ಯಲಹಂಕದಲ್ಲಿ ಗೋ ಬ್ಯಾಕ್​ ಅಭಿಯಾನ: ಟೈರ್​ಗೆ ಬೆಂಕಿ ಹಚ್ಚಿ ಕಾರ್ಯಕರ್ತರ ಆಕ್ರೋಶ - Go Back Campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.