ತುಮಕೂರು: ಒಂದೇ ದಿನ ರಾತ್ರಿ ಸುರಿದ ಭಾರೀ ಮಳೆಗೆ ಕೊರಟಗೆರೆ, ಮಧುಗಿರಿ ಭಾಗದಲ್ಲಿ ಹರಿಯುವ ಜಯಮಂಗಲಿ ನದಿ ಮೈತುಂಬಿ ಹರಿಯುತ್ತಿದೆ. ಇದರಿಂದ ಮಧುಗಿರಿ ತಾಲೂಕಿನ ವೀರೇನಹಳ್ಳಿ-ಕಾಳೇನಹಳ್ಳಿ ನಡುವಿನ ರಸ್ತೆ ಜಲಾವೃತಗೊಂಡಿದೆ. ತೋಟ-ಹೊಲಗಳು ನೀರಿನಿಂದ ತುಂಬಿದೆ. ರೈತರಲ್ಲಿ ಸಂತಸ ಮೂಡಿದೆ.
ಇನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ನಂದಿಹಳ್ಳಿಯಿಂದ ಗೊಲ್ಲರಹಟ್ಟಿಗೆ ಸಂಪರ್ಕಿಸುವ ರಸ್ತೆಯ ಸೇತುವೆ ಕುಸಿದಿದೆ. ಕೊರಟಗೆರೆ ತಾಲೂಕು ಕೇಂದ್ರ ರಸ್ತೆಯಲ್ಲಿ ಉಕ್ಕಿ ಹರಿದ ನೀರು ರಸ್ತೆಯ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ.
ಇದನ್ನೂ ಓದಿ: ಹಾವೇರಿ: ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ - teppotsava