ETV Bharat / state

ಗೃಹಲಕ್ಷ್ಮಿ ಹಣ ಸದುಪಯೋಗ : ಹಾವೇರಿಯಲ್ಲಿ ರೋಟವೇಟರ್ ಖರೀದಿಸಿದ ಅತ್ತೆ-ಸೊಸೆ - GRIHALAKSHMI SCHEME

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಂಟಗಣಿ ಗ್ರಾಮದ ಅತ್ತೆ ಶಾರದಾ ಮತ್ತು ಸೊಸೆ ಲಕ್ಷ್ಮಿ ಎಂಬುವರು ಗೃಹಲಕ್ಷ್ಮಿ ಹಣದಿಂದ ರೋಟವೇಟರ್ ಖರೀದಿಸಿ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದಾರೆ.

rotavator
ರೋಟವೇಟರ್ ಖರೀದಿಸಿರುವುದು (ETV Bharat)
author img

By ETV Bharat Karnataka Team

Published : Dec 22, 2024, 7:52 PM IST

ಹಾವೇರಿ : ಜಿಲ್ಲೆಯಲ್ಲಿ ಅತ್ತೆ -ಸೊಸೆ ತಮಗೆ ಬಂದ ಗೃಹಲಕ್ಷ್ಮಿ ಹಣದಿಂದ ಕೃಷಿಗೆ ಉಪಯೋಗವಾಗುವ ರೋಟವೇಟರ್ ಖರೀದಿ ಮಾಡಿದ್ದಾರೆ. ಜಿಲ್ಲೆ ಸವಣೂರು ತಾಲೂಕು ಮಂಟಗಣಿ ಗ್ರಾಮದ ಶಾರದಾ ಮತ್ತು ಲಕ್ಷ್ಮಿ ರೋಟವೇಟರ್ ಖರೀದಿಸಿದ ಅತ್ತೆ- ಸೊಸೆ.

ಇಬ್ಬರು ತಮಗೆ ಬಂದ 14 ತಿಂಗಳುಗಳ ತಲಾ 28 ಸಾವಿರ ರೂಪಾಯಿಗಳನ್ನು ಕೂಡಿಸಿ ಒಟ್ಟು 48 ಸಾವಿರ ರೂ.ಗಳನ್ನ ತಮ್ಮ ಪುತ್ರ ಅಜೀತ್​ಗೆ ನೀಡಿದ್ದಾರೆ. ಅಲ್ಲದೆ ಉಳಿದ ಹಣವನ್ನ ಸ್ವಸಹಾಯ ಸಂಘದಿಂದ ಸಾಲ ಪಡೆದು ರೋಟವೇಟರ್ ಕೊಡಿಸಿದ್ದಾರೆ.

ರೋಟವೇಟರ್ ಖರೀದಿಸಿದ ಶಾರದಾ ಹಾಗೂ ಲಕ್ಷ್ಮಿ ಮಾತನಾಡಿದ್ದಾರೆ (ETV Bharat)

ಅಜೀತ್ ಈಗ ಸುಮಾರು 1 ಲಕ್ಷದ 10 ಸಾವಿರ ರೂಪಾಯಿ ಕೊಟ್ಟು ಹೊಸ ರೋಟವೇಟರ್ ತಂದಿದ್ದಾರೆ. ಇದಕ್ಕೆ ಸರ್ಕಾರದಿಂದ ಸಬ್ಸಿಡಿ ಇದ್ದು, ಸೂಕ್ತ ದಾಖಲೆ ನೀಡಿದರೆ ರೋಟವೇಟರ್ ಅಂಗಡಿಯವರು 10 ಸಾವಿರ ರೂಪಾಯಿ ಸಬ್ಸಿಡಿ ನೀಡಲಿದ್ದಾರೆ.

ಈ ಬಗ್ಗೆ ಅಜೀತ್ ತಾಯಿ ಶಾರದಾ ಮಾತನಾಡಿ, 'ನಮ್ಮ ಮಗನಿಗೆ ಮೊದಲಿನಿಂದಲೂ ಟ್ರ್ಯಾಕ್ಟರ್ ತೆಗೆದುಕೊಳ್ಳಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ನಾವು ಈ ಹಣವನ್ನು ನೀಡಿದ್ದೇವೆ. ನಮ್ಮ ಹೊಲದಲ್ಲಿ ಶೇಂಗಾ, ಅಲಸಂದಿಯನ್ನ ಬೆಳೆಯುತ್ತೇವೆ. ಹೀಗಾಗಿ ನಮಗೆ ರೋಟವೇಟರ್ ಅವಶ್ಯಕತೆ ಇತ್ತು. ಅಜೀತ್ ನಮ್ಮ ಜಮೀನಿನಲ್ಲಿ ರೋಟವೇಟರ್ ಉಪಯೋಗಿಸುವುದಲ್ಲದೆ, ಕೆಲಸವಿಲ್ಲದ ದಿನಗಳಲ್ಲಿ ಗ್ರಾಮದ ಬೇರೆ ರೈತರ ಜಮೀನಿಗೆ ಬಾಡಿಗೆಗೂ ಹೋಗುತ್ತಾನೆ. ಸಿದ್ದರಾಮಯ್ಯ ಸರ್ಕಾರದಿಂದ ನಮಗೆ ಬಹಳ ಸಹಾಯವಾಗಿದೆ. ಅವರಿಂದ ಬಹಳ ಅನುಕೂಲವಾಗಿದೆ. ಅವರಿಗೆ ವಂದನೆ ತಿಳಿಸುತ್ತೇವೆ' ಎಂದು ಸಂತಸ ಹಂಚಿಕೊಂಡರು.

rotavator
ರೋಟವೇಟರ್ (ETV Bharat)

ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ದೊಡ್ಮನಿ ಅವರು ಮಾತನಾಡಿ, 'ರಾಜ್ಯ ಸರ್ಕಾರ ಘೋಷಿಸಿದ ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ನಮ್ಮ ಗ್ರಾಮದ ಅತ್ತೆ-ಸೊಸೆ ಸೇರಿ ಒಂದು ರೋಟವೇಟರ್ ಖರೀದಿಸಿದ್ದಾರೆ. ಈ ಮೂಲಕ ಮಗನಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ. ಇದರಿಂದ ನಮಗೆಲ್ಲ ಸಂತೋಷವಾಗಿದೆ' ಎಂದು ಹೇಳಿದರು.

ಅತ್ತೆ-ಸೊಸೆಯರ ಈ ಕಾರ್ಯ ಗ್ರಾಮಸ್ಥರಿಗೆ ಸಂತಸ ತಂದಿದೆ. ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಅತ್ತೆ-ಸೊಸೆ ಈ ರೀತಿ ಸದ್ಭಳಕೆ ಮಾಡಿಕೊಂಡು ಮಾದರಿಯಾಗಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣದಲ್ಲಿ ಖಾರ ಕುಟ್ಟುವ ಯಂತ್ರ ಖರೀದಿಸಿದ ಮಹಿಳೆ: ಭೇಷ್​ ಎಂದ ಲಕ್ಷ್ಮೀ ಹೆಬ್ಬಾಳ್ಕರ್​ - GRIHALAKSHMI SCHEME

ETV Bharat Logo

Copyright © 2025 Ushodaya Enterprises Pvt. Ltd., All Rights Reserved.