ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ಆರೋಗ್ಯದ ಕುರಿತ ವೈದ್ಯಕೀಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಕೆಂಗೇರಿ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ನಟ ದರ್ಶನ್ ಆರೋಗ್ಯ ಸ್ಥಿತಿ, ಚಿಕಿತ್ಸೆ ಮಾಹಿತಿಯ ವೈದ್ಯಕೀಯ ವರದಿಯನ್ನು ಬುಧವಾರ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠಕ್ಕೆ ದರ್ಶನ್ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ನ್ಯಾಯಾಲಯದ ಷರತ್ತಿನ ಅನ್ವಯ ಜಾಮೀನು ಪಡೆದು ಒಂದು ವಾರದಲ್ಲಿ ವೈದ್ಯಕೀಯ ವರದಿಯನ್ನು ಸಲ್ಲಿಸಬೇಕಿತ್ತು. ಅದರಂತೆ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ಹೈಕೋರ್ಟ್ ಫೈಲಿಂಗ್ ಕೌಂಟರ್‌ಗೆ ದಾಖಲೆಯನ್ನು ಸಲ್ಲಿಕೆ ಮಾಡಿದ್ದಾರೆ. ಈ ದಾಖಲೆಗಳು ಗುರುವಾರ ನ್ಯಾಯ ಪೀಠವನ್ನು ತಲುಪಲಿದೆ.
ವರದಿಯಲ್ಲಿ ದರ್ಶನ್‌ಗೆ ಬೆನ್ನುಮೂಳೆಯ ಎಸ್4, ಎಲ್ 1ರಲ್ಲಿ ಉಂಟಾಗಿರುವ ಸಮಸ್ಯೆಗೆ ಸಂಬಂಧಿಸಿ ಈಗಿನ ಸ್ಥಿತಿ, ಅವರಿಗೆ ಸಾಂಪ್ರದಾಯಿಕ ಚಿಕಿತ್ಸೆ ಸಾಕೆ, ಅಥವಾ ಶಸ್ತ್ರಚಿಕಿತ್ಸೆ ಆಗಬೇಕೆ ಎಂಬುದು ಸೇರಿದಂತೆ ಎಷ್ಟು ದಿನ ವಿಶ್ರಾಂತಿ ತೆಗೆದುಕೊಳ್ಳಬೇಕಾಗಬಹುದು ಎಂಬುದರ ಮಾಹಿತಿಯನ್ನು ವೈದ್ಯಕೀಯ ವರದಿ ವಿವರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಇದನ್ನು ಓದಿ: 2026ರ ವೇಳೆಗೆ 175 ಕಿ.ಮೀ ನೂತನ ಮೆಟ್ರೋ ಮಾರ್ಗ ಸಾರ್ವಜನಿಕರ ಸೇವೆಗೆ: ಡಿ.ಕೆ.ಶಿವಕುಮಾರ್