ರಾಯಚೂರು: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಕೇವಲ ಎರಡು ಎಕರೆ ಜಮೀನಿಗಾಗಿ ದಾಯಾದಿಗಳ ಮಧ್ಯೆ ಹೊಡೆದಾಟ ನಡೆದಿದ್ದು, ವ್ಯಕ್ತಿಯೊಬ್ಬರ ಪ್ರಾಣವೇ ಹಾರಿ ಹೋಗಿದೆ. ಈ ಘಟನೆ ಜಿಲ್ಲೆಯ ಜೀನೂರು ಗ್ರಾಮದಲ್ಲಿ ನಡೆದಿದೆ. ಅಷ್ಟೇ ಅಲ್ಲ ದೂರು ಪ್ರತಿ ದೂರು ಸಹ ದಾಖಲಾಗಿವೆ.
ಏನಿದು ಘಟನೆ: ಜಿಲ್ಲೆಯ ಮಾನವಿ ತಾಲೂಕಿನ ಜೀನೂರು ಗ್ರಾಮದಲ್ಲಿ 2 ಎಕರೆ 10 ಗುಂಟೆ ಜಮೀನು ವಿಚಾರಕ್ಕೆ ಬಹಗಳ ದಿನಗಳಿಂದ ಅಣ್ಣ-ತಮ್ಮಂದಿರ ಮಧ್ಯೆ ಜಗಳ ನಡೆಯುತ್ತಿತ್ತು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕಟ್ಟಿಗೆ ಮತ್ತು ಕೊಡಲಿಯಿಂದ ಹೊಲದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಕೊಡಲಿ ಏಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 36 ವರ್ಷದ ರಾಮಣ್ಣ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ.
ರಾಮಣ್ಣನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೂಕಯ್ಯ ಅಲಿಯಾಸ್ ಮುದುಕಯ್ಯ, ನಿಂಗಪ್ಪ, ಮಹೇಶ್, ಸೋಮು, ಶಿವು ಅಲಿಯಾಸ್ ಮೂಕಯ್ಯ, ಲಕ್ಷ್ಮಿ, ನಿಲ್ಲಮ್ಮ, ಸರಸ್ವತಿ ಎಂಬುವರ ಮೇಲೆ ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದಕ್ಕೆ ಪ್ರತಿ ದೂರು ಸಹ ಮಾನವಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಓದಿ: ತೀರ್ಥಹಳ್ಳಿ: ತುಂಗಾ ನದಿಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು - boys drown in Tunga