ಮೊಹಾಲಿ: ಪಂಜಾಬ್ ಸಿಂಗ್ ಭಗವಂತ್ ಮಾನ್ ತಮ್ಮ 51ನೇ ವರ್ಷದಲ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಅವರ ಹೆಂಡತಿ ಗುರುಪ್ರೀತ್ ಕೌರ್ ಇಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿರುವ ಸಿಎಂ ಮಾನ್, 'ದೇವರು ನನಗೆ ಇಂದು ಹೆಣ್ಣು ಮಗುವಿನ ಉಡುಗೊರೆ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂಬ ಮಾಹಿತಿಯ ಪೋಸ್ಟ್ ಹಾಗೂ ಮಗುವಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ ಗುರುಪ್ರೀತ್ ಕೌರ್ 8 ತಿಂಗಳ ಗರ್ಭಿಣಿಯಾದಾಗ ಕೂಡ ಅವರು ಮಾರ್ಚ್ನಲ್ಲಿ ಸಂತಸ ನಮ್ಮ ಮನೆ ಬಾಗಿಲು ತಟ್ಟಲಿದೆ. ಮಾರ್ಚ್ ಅಂತ್ಯದಲ್ಲಿ ಮಗುವಿನ ಆಗಮನ ಆಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು.
ಈಗಾಗಲೇ ಎರಡು ಮಕ್ಕಳನ್ನು ಹೊಂದಿರುವ ಸಿಎಂ: ಪಂಜಾಬ್ ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಮೊದಲ ಪತ್ನಿಯಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಸೇರಿದಂತೆ ಒಟ್ಟು ಎರಡು ಮಕ್ಕಳನ್ನು ಪಡೆದಿದ್ದಾರೆ. ಇದೀಗ ಭಗವಂತ್ ಮಾನ್ ಮೂರನೇ ಮಗುವಿನ ತಂದೆಯಾಗಿದ್ದಾರೆ.
ಮೊದಲ ಪತ್ನಿ ಇಂದ್ರಪ್ರೀತ್ ಕೌರ್ ಅವರಿಂದ 2015ರಲ್ಲಿ ಸಿಎಂ ವಿಚ್ಛೇದನ ಪಡೆದಿದ್ದಾರೆ. ಇಂದ್ರಪ್ರೀತ್ ಕೌರ್ ಎರಡು ಮಕ್ಕಳೊಂದಿಗೆ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಭಗವಂತ್ ಮಾನ್ ಸಿಎಂ ಆದಾಗ ಇಬ್ಬರು ಮಕ್ಕಳು ಕೂಡ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗಮನ ಸೆಳೆದಿದ್ದರು.
2019ರಲ್ಲಿ ಗುರುಪ್ರೀತ್ ಜೊತೆ ಪ್ರೀತಿ: ಸಿಎಂ ಭಗವತ್ ಮಾನ್ ಎರಡನೇ ಹೆಂಡತಿ ಡಾ. ಗುರುಪ್ರೀತ್ ಕೌರ್ ಹರಿಯಾಣ ಮೂಲದವರಾಗಿದ್ದಾರೆ. ಅವರು ಅಂಬಾಲದ ಮೌಲಾನ ವೈದ್ಯಕೀಯ ಕಾಲೇಜ್ನಲ್ಲಿ ಪದವಿ ಪಡೆದಿದ್ದಾರೆ. 2019ರಲ್ಲಿ ಪಂಜಾಬ್ ಸಿಎಂ ಅವರ ಭೇಟಿಯಾಗಿದ್ದು, 2021ರಲ್ಲಿ ಇವರ ವಿವಾಹ ನಡೆಯಿತು. ಗುರುಪ್ರೀತ್ ಗರ್ಭಣಿಯಾದಾಗ ಈ ಇಬ್ಬರು ಜೋಡಿ ಅಯೋಧ್ಯೆ ರಾಮ ದರ್ಶನ ಸೇರಿದಂತೆ ಅನೇಕ ದೇಗುಲಗಳ ಭೇಟಿಯನ್ನು ಕೂಡಾ ಮಾಡಿದ್ದರು ಎಂಬುದು ಗಮನಾರ್ಹ.
ಇದನ್ನೂ ಓದಿ: ಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್