ETV Bharat / state

ವಿಧಾನಸೌಧ ಮುತ್ತಿಗೆ ಯತ್ನ, ಫ್ರೀಡಂ ಪಾರ್ಕ್​​ನಲ್ಲೇ ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ - Protest Against State Govt

author img

By ETV Bharat Karnataka Team

Published : Jul 18, 2024, 2:06 PM IST

Updated : Jul 18, 2024, 4:23 PM IST

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದ ಬಳಿ ವಾಲ್ಮೀಕಿ ನಿಗಮ ಜಗರಣ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೋರ್ ಕಮಿಟಿ ಸದಸ್ಯರು, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗಿಯಾಗಿದ್ದರು.

Protest against state govt: Vijayendra along with BJP leaders taken into police custody at Freedom Park
ರಾಜ್ಯ ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕ್​​ನಲ್ಲಿ ಬೃಹತ್ ಪ್ರತಿಭಟನೆ (ANI)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (ETV Bharat)

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕ್​​ನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ವಿಧಾನಸೌಧ ಮುತ್ತಿಗೆಗೆ ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪ್ರತಿಭಟನಾನಿರತರವನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ರಾಜ್ಯದ ಜನ ಗಮನಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ಹಣ ಲೂಟಿ ಹೊಡೆದಿದ್ದರಿಂದ ಜನ ಹೋರಾಟಕ್ಕಿಳಿದಿದ್ದಾರೆ. ಲೂಟಿ ಹೊಡೆದ ಸರ್ಕಾರವನ್ನು ಕಿತ್ತೊಗೆಯಲು ಶಪಥ ಮಾಡಿ ಮಾಡಿದ್ದಾರೆ. 14 ತಿಂಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಎಲ್ಲಾ ಪರಿಶಿಷ್ಟ ಜಾತಿ, ಪಂಗಡದ ಜನ ಸಂತೋಷಪಟ್ಟರು. ಆದರೆ, ಅಹಿಂದ ಹೆಸರಲ್ಲಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯನವರ ಮತ್ತು ಸಚಿವರ ಬಂಡವಾಳ ಬಯಲಾಗಿದೆ. ಯಾರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದರೋ ಅವರಿಗೆ ವಿಶ್ವಾಸ ದ್ರೋಹ ಬಗೆದಿದ್ದಾರೆ. ಆ ಸಮುದಾಯದ ಹಣ ಕೊಳ್ಳೆಹೊಡೆದು ಚುನಾವಣೆಗಾಗಿ ಹೊರ ರಾಜ್ಯಕ್ಕೆ ಕಳಿಸಿದ್ದಾರೆ ಎಂದು ಸಿಎಂ ಮತ್ತು ಡಿಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದರು.

ರಾಜೀನಾಮೆವರೆಗೂ ಹೋರಾಟ: ಇದು ಬೂಟಾಟಿಕೆಗೋಸ್ಕರ ಮಾಡುತ್ತಿರುವ ಹೋರಾಟವಲ್ಲ. ಎಲ್ಲಿಯವರೆಗೂ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲವೋ, ಎಲ್ಲಿಯವರೆಗೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ವಿಜಯೇಂದ್ರ ಗುಡುಗಿದರು.

ಜಿಲ್ಲೆಗಳಲ್ಲಿ ನಿರಂತರ ಹೋರಾಟ: ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಈ ಹಣವನ್ನು ಗ್ಯಾರಂಟಿಗಳಿಗೆ ಬಳಸಲು ಕಾಂಗ್ರೆಸ್​​ನವರಿಗೆ ನಾಚಿಕೆ ಆಗಬೇಕು. ಹಿಂದಿನಿಂದಲೂ ದಲಿತರ ಹೆಸರಿನಲ್ಲಿ ನಾಟಕ ಮಾಡುತ್ತಾ ಬಂದಿದ್ದು ಈಗಲೂ ಅದನ್ನೇ ಮಾಡುತ್ತಿದ್ದೀರಿ. ರಾಜೀನಾಮೆ ಕೊಡುವವರೆಗೂ ಎಲ್ಲ ಜಿಲ್ಲೆಗಳಲ್ಲಿ ನಿರಂತರ ಹೋರಾಟ ಮಾಡಬೇಕೆಂದು ಕರೆ ನೀಡಿದರು.

ಒಂದು ವಿಕೆಟ್ ಮಾತ್ರವಲ್ಲ, ಟೀಂ ಆಲ್ ಔಟ್ ಆಗಬೇಕು: ಮಾಜಿ ಶಾಸಕ ರಾಜುಗೌಡ ಮಾತನಾಡಿ, ಮೊದಲ ವಿಕೆಟ್ ಅಲ್ಲ, ಇಡೀ ಟೀಂ ಆಲೌಟ್ ಆಗಬೇಕು. ಈ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಬೇಕು. 187 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಹಡಗನ್ನೇ ನುಂಗುವ ರೀತಿಯಲ್ಲಿ ದುಡ್ಡು ಲೂಟಿ ಹೊಡೆದಿದ್ದಾರೆ. ಈ ಹೋರಾಟ ಇನ್ನೂ ತೀವ್ರಗೊಳಿಸಬೇಕು. ಪ್ರಕರಣ ಬಯಲಾದರೆ ದದ್ದಲ್ ಒಬ್ಬರೇ ಅಲ್ಲ, ವಿಧಾನಸೌಧ ಅರ್ಧ ಕ್ಯಾಬಿನೆಟ್ ಒಳಗೆ ಹೋಗುತ್ತದೆ ಎಂದರು.

ಹಗರಣಗಳ ಸಿಎಂ: ಮಾಜಿ ಸಿಎಂ ಸದಾನಂದಗೌಡ ಮಾತನಾಡಿ, ರಾಜ್ಯ ಸರ್ಕಾರ ಜನರಿಗೆ ಸುಳ್ಳು ಆಶ್ವಸನೆ ಕೊಟ್ಟು, ಜನರ ದಿಕ್ಕು ತಪ್ಪಿಸಿದೆ. ನೂರಾರು ಹಗರಣಗಳ ಸರಮಾಲೆಯಲ್ಲಿ ಹಿಂದೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಹೇಗೆ ಮುಳುಗಿತ್ತೋ ಹಾಗೆಯೇ ರಾಜ್ಯ ಸಿದ್ದರಾಮಯ್ಯ ಸರ್ಕಾರ ಕೂಡ ಭಾಗಿಯಾಗಿದೆ. ಹಗರಣಗಳ ಸಿಎಂ ಸಿದ್ದರಾಮಯ್ಯ ಅಂತ ಆಗಿದೆ. ಸಿಎಂ ಸ್ಥಾನದಲ್ಲಿ ಕೂರಲು ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ. ಕೂಡಲೇ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್ ರಕ್ತ ಹರಿಯುತ್ತಿದ್ದರೆ ಖರ್ಗೆ ರಾಜೀನಾಮೆ ನೀಡಲಿ: ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಜನರಿಗೆ ವಂಚನೆ ಮಾಡಿ, ಮೋಸ ಮಾಡಿ ಗ್ಯಾರಂಟಿ ಅನೌನ್ಸ್ ಮಾಡಿದರು. ಜನರು ಅಟ್ರಾಕ್ಷನ್ ಆದರು. ನಮ್ಮ ಮೇಲೆ ಅನೇಕ ಆರೋಪಗಳನ್ನು ಮಾಡಿದರು. ಏನಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಅಂತ ಸುಳ್ಳು ಭರವಸೆ ನೀಡಿದರು. ಗ್ಯಾರಂಟಿಗೆ ಹಣ ಎಲ್ಲಿಂದ ತರ್ತೀರಾ ಅಂತ ಮಾಧ್ಯಮದವರು ಕೇಳಿದರೆ 40% ನಿಲ್ಲಿಸಿದರೆ ಸಾಕು, ಅದರಲ್ಲೇ ಗ್ಯಾರಂಟಿ ಕೊಡಬಹುದು ಅಂದರು. ಆದರೆ, ಇವರು ನಮ್ಮ ಮೇಲಿನ ಸುಳ್ಳು ಆರೋಪ ಸಾಬೀತುಪಡಿಸಲು ಆಗಲಿಲ್ಲ. ಈಗ ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸಿದ್ದೀರಿ. ನಿಮ್ಮದು ಲೂಟಿ ಸರ್ಕಾರ. ರಾಹುಲ್ ಗಾಂಧಿ ಇವತ್ತೂ ಸಂವಿಧಾನ ಪುಸ್ತಕ ಇಟ್ಟುಕೊಂಡು ಓಡಾಡ್ತಿದ್ದಾರೆ. ಈವರೆಗೂ ಈ ಹಗರಣದ ಬಗ್ಗೆ ಮಾತಾಡಿಲ್ಲ. ಖರ್ಗೆ ಅವರು ಕೂಡ ಈ ಬಗ್ಗೆ ಮಾತಾಡ್ತಿಲ್ಲ. ನಿಮ್ಮಲ್ಲಿ ದಲಿತರ ಬಗ್ಗೆ ಸ್ವಾಭಿಮಾನ ಇದ್ದರೆ ಅಂಬೇಡ್ಕರ್ ರಕ್ತ ಹರಿಯುತ್ತಿದ್ದರೆ, ನೀವು ಇದನ್ನ ಸಹಿಸದೇ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ ಎಂದು ಎಐಸಿಸಿ ಅಧ್ಯಕ್ಷರಿಗೆ ಸವಾಲು ಹಾಕಿದರು.

ನಂತರ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ವಿಧಾನಸೌಧ ಮುತ್ತಿಗೆಗೆ ಮುಂದಾಗಲಾಯಿತು. ಆದರೆ, ಫ್ರೀಡಂ ಪಾರ್ಕ್ ಹೊರಗಡೆ ಜಾಥಾ, ಮೆರವಣಿಗೆ, ಧರಣಿ, ಮುತ್ತಿಗೆಯಂತಹ ಚಟುವಟಿಕೆಗೆ ಅವಕಾಶವನ್ನು ಪೊಲೀಸರು ನಿರಾಕರಿಸಿದರು. ಆದರೂ ವಿಧಾನಸೌಧ ಮುತ್ತಿಗೆಯ ಘೋಷಣೆಯೊಂದಿಗೆ ರಸ್ತೆಗಿಳಿಯಲು ಮುಂದಾಗುತ್ತಿದ್ದಂತೆ ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕೋರ್ ಕಮಿಟಿ ಸದಸ್ಯರು, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದ ತನಿಖೆ: 'ಸಿಎಂ, ಡಿಸಿಎಂ ಹೆಸರು ಹೇಳುವಂತೆ ಇಡಿ ಒತ್ತಡ'-ಐವರು ಸಚಿವರ ಆರೋಪ - Valmiki Corporation Scam

Last Updated : Jul 18, 2024, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.