ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅಧ್ಯಕ್ಷರಾಗಿ ಶ್ರೀಧರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿತಟ್ಟೆ ಆಯ್ಕೆಯಾಗಿದ್ದಾರೆ. 2024-25ನೇ ಸಾಲಿನ ಚುನಾವಣೆ ಭಾನುವಾರ ನಡೆಯಿತು. ತುರಿಸಿನ ಪೈಪೋಟಿಯಿದ್ದ ಅಧ್ಯಕ್ಷ ಸ್ಥಾನಕ್ಕೆ ಧ್ಯಾನ್ ಪೂಣಚ್ಚ, ಆರ್.ಶ್ರೀಧರ್ ಮತ್ತು ಸುಭಾಶ್ ಹೂಗಾರ್ ಸ್ಪರ್ಧಿಸಿದ್ದರು. ಇದೇ ವೇಳೆ ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರು ಮತ್ತು ಮಹಿಳಾ ಮೀಸಲು ಸ್ಥಾನಗಳಿಗೆ ಚುನಾವಣೆ ನಡೆಯಿತು.
ಬೆಳಗ್ಗೆ 9ರಿಂದ 2 ಗಂಟೆವರೆಗೆ ಮತದಾನ ಮಾಡಲು ಅವಕಾಶವಿತ್ತು. 1,040 ಪತ್ರಕರ್ತ ಮತದಾರರಲ್ಲಿ 767 ಪತ್ರಕರ್ತರು ಮತ ಚಲಾಯಿಸಿದರು. ಆರ್.ಶ್ರೀಧರ್ 404 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ವಿ.ಎನ್.ಮೋಹನ್ ಕುಮಾರ್ 417 ಮತಗಳನ್ನು ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿತಟ್ಟೆ 336 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.
![election results announced Shridhar was elected President election Bengaluru](https://etvbharatimages.akamaized.net/etvbharat/prod-images/08-07-2024/kn-bng-05-press-club-elections-results-out-7210969_07072024184615_0707f_1720358175_867.jpg)
ಉಳಿದಂತೆ, ಜಿ.ಗಣೇಶ್ ಅವರು ಖಜಾಂಚಿಯಾಗಿ 556 ಮತಗಳನ್ನು ಗಳಿಸಿದರೆ, ಕಾರ್ಯದರ್ಶಿಯಾಗಿ ಜಿ.ವೈ.ಮಂಜುನಾಥ್ 288 ಮತಗಳು ಮತ್ತು ಜಂಟಿ ಕಾರ್ಯದರ್ಶಿಯಾಗಿ ಧರಣೇಶ್ 195 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಮಹಿಳಾ ಸ್ಥಾನವನ್ನು 491 ಮತಗಳನ್ನು ಪಡೆದು ಮಿನಿ ತೇಜಸ್ವಿ ತನ್ನದಾಗಿಸಿಕೊಂಡಿದ್ದಾರೆ.
ಇನ್ನು ಕಮಿಟಿ ಸದಸ್ಯರಾಗಿ ಶಿವಣ್ಣ (234 ಮತಗಳು), ಶರಣಬಸಪ್ಪ (258 ಮತಗಳು), ಯಾಸ್ನಿಫ್ ಮುಸ್ತಾಕ್ (259 ಮತಗಳು), ಅಲೀಮ್ (272 ಮತಗಳು), ರೋಹಿಣಿ ಅಡಿಗ (306 ಮತಗಳು) ಮತ್ತು ಮಂಜುನಾಥ್ (281 ಮತಗಳು) ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಕುರ್ಚಿ ಕಿತ್ತಾಟದಲ್ಲಿ ಡೆಂಗ್ಯೂ ನಿಯಂತ್ರಣ ಕಡೆಗಣನೆ: ಸಚಿವೆ ಶೋಭಾ ಕರಂದ್ಲಾಜೆ - Shobha Karandlaje