ETV Bharat / state

ರಾಜಧಾನಿಯ ಕೆರೆಗಳ ಪುನರುಜ್ಜೀವನ ಹೆಸರಿನಲ್ಲಿ ಒತ್ತುವರಿಗೆ ಅವಕಾಶ ನೀಡಲಾಗದು; ಹೈಕೋರ್ಟ್ - HIGH COURT

ಬೆಂಗಳೂರಿನ ಸಿಟಿಜನ್‌ ಆ್ಯಕ್ಷನ್‌ ಗ್ರೂಪ್‌ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜಧಾನಿಯ ಕೆರೆಗಳ ಪುನರುಜ್ಜೀವನ ಹೆಸರಿನಲ್ಲಿ ಒತ್ತುವರಿಗೆ ಅವಕಾಶ ನೀಡಲಾಗದು ಎಂದಿದೆ.

HIGH COURT
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Nov 19, 2024, 10:30 PM IST

ಬೆಂಗಳೂರು: ಬೆಂಗಳೂರು ನಗರದ 183 ಕೆರೆಗಳ ಪುನರುಜ್ಜೀವನಕ್ಕೆ ಸಂಬಂಧಿಸಿ ಸಿದ್ಧಪಡಿಸಿರುವ ನೀತಿಯು ಒತ್ತುವರಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್​, ಈ ಕೆರೆಗಳ ಪುನರುಜ್ಜೀವನ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಎಲ್ಲಾ ಕೆರೆಗಳ ಮೂಲ ವಿಸ್ತೀರ್ಣ, ಒತ್ತುವರಿಯಾಗಿರುವ ಮಾಹಿತಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.

ಬೆಂಗಳೂರಿನ ಸಿಟಿಜನ್‌ ಆ್ಯಕ್ಷನ್‌ ಗ್ರೂಪ್‌ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರಿದ್ದ ನ್ಯಾಯ ಪೀಠ, ಸೂಚನೆ ನೀಡಿ ಈ ವಿಚಾರಣೆಯನ್ನು ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೆರೆಗಳನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಿದರೆ ಅವರು ಸಾರ್ವಜನಿಕರಿಗೆ ನಿರ್ಬಂಧ ವಿಧಿಸುತ್ತಾರೆ. ವಾಣಿಜ್ಯ ಚಟುವಟಿಕೆಗಳು ನಡೆಯಲಿವೆ. ನೋಂದಾಯಿತ ಸೊಸೈಟಿ, ವಸತಿ ಸಂಸ್ಥೆ ಅಥವಾ ಎನ್‌ಜಿಒಗಳ ಜೊತೆ ಕೆರೆ ಅಭಿವೃದ್ಧಿ ಸಂಬಂಧಿತ ಒಪ್ಪಂದ ಮಾಡಿಕೊಳ್ಳಬಹುದು. ಇದನ್ನು ವಾಣಿಜ್ಯ ಸಂಸ್ಥೆಯೊಂದಿಗೆ ಮಾಡಿಕೊಳ್ಳಬಾರದು. ಅನುದಾನ ಬೇಕಾದರೆ ಅವರಿಂದ ಪಡೆಯಬಹುದು. ಆದರೆ, ಬಿಬಿಎಂಪಿ ಅಥವಾ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ನೋಂದಾಯಿತ ಟ್ರಸ್ಟ್‌ ಕೆರೆ ಪುನರುಜ್ಜೀವನ ಮಾಡಬೇಕು. ಸಾರ್ವಜನಿಕ ನಂಬಿಕೆ ತತ್ವದಡಿ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ವಾಣಿಜ್ಯೀಕರಣ ತಪ್ಪಿಸಬೇಕೆಂದು ಪೀಠಕ್ಕೆ ವಿವರಿಸಿದರು.

ವರದಿಯಲ್ಲಿ ಕೆರೆಗಳ ಒತ್ತುವರಿ ವಿವರ: ಕೆಲವು ಕಡೆ ಸರ್ಕಾರವೇ ಕೆರೆಯ ಜಾಗ ಒತ್ತುವರಿ ಮಾಡಿದೆ. ಕೆರೆಗಳ ಒತ್ತುವರಿ ತೆರವು ಮಾಡುವುದೂ ಪುನರುಜ್ಜೀವನವಾಗಲಿದೆ. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ನೀರಿ)ಯ ವರದಿಯಲ್ಲಿ ಯಾವ ಯಾವ ಕೆರೆಗಳನ್ನು ಯಾರು ಒತ್ತುವರಿ ಮಾಡಿದ್ದಾರೆ. ಅದರ ತೆರವು ಸಾಧ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಪ್ರತಿಯೊಂದು ಕೆರೆಯ ಒತ್ತುವರಿ, ಎಲ್ಲಿ ಏನೆಲ್ಲಾ ಪುನರುಜ್ಜೀವನ ಮಾಡಬೇಕು ಎಂಬುದಕ್ಕೆ ಬಿಬಿಎಂಪಿಯು ದಾಖಲೆ ನೀಡಬೇಕು. ಎಲ್ಲ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಕೆಟ್ಟ ಬೆಳವಣಿಗೆಗೆ ಕಾರಣವಾಗಲಿದೆ. ಕೆರೆ ಪುನರುಜ್ಜೀವನಗೊಳಿಸಲು ಬಂದವರು ಮತ್ತೆ ಮೂರು ನಾಲ್ಕು ಎಕರೆ ಒತ್ತುವರಿ ಮಾಡಬಹುದು. ಇದರ ಮೇಲೆ ಯಾರು ನಿಗಾ ಇಡುತ್ತಾರೆ? ಹೀಗಾಗಿ, ಮೊದಲಿಗೆ ಕೆರೆ ಒತ್ತುವರಿ ತೆರವಾಗಲಿ ಎಂದು ಮನವಿ ಮಾಡಿದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ವಾದವೇನು?: ಬಿಬಿಎಂಪಿ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ಕೆರೆಗಳ ಮಾಲೀಕತ್ವ ಯಾವಾಗಲೂ ಸರ್ಕಾರದ ಬಳಿಯೇ ಇರಲಿದೆ. ಬಿಬಿಎಂಪಿ ಅದರ ಕಸ್ಟಡಿ ಹೊಂದಿರಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಬೇಕಿದ್ದು, ಅವುಗಳ ಜಾರಿಯ ಪ್ರಶ್ನೆ ಮಾತ್ರ ನಮ್ಮ ಮುಂದಿದೆ. ಏಜೆನ್ಸಿಯ ಮೂಲಕ ಬಿಬಿಎಂಪಿಯು ಕೆರೆ ಪುನರುಜ್ಜೀವನಗೊಳಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ. ಕಾರ್ಪೊರೇಟ್‌ ಅಥವಾ ಬೇರಾವುದೋ ಸಂಸ್ಥೆಯಿಂದ ಅನುದಾನ ಪಡೆದು ಅದನ್ನು ಮೂರನೇ ವ್ಯಕ್ತಿಗೆ ಪುನರುಜ್ಜೀವನಗೊಳಿಸಲು ನೀಡಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ.

ಆದರೆ, ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಯಾರು ಪಾರದರ್ಶಕ ನಡೆಯನ್ನು ಅನುಸರಿಸುತ್ತಾರೋ ಅವರು ಮುಂದೆ ಬರಬಹುದು. ಯಾರು ಎಲ್ಲಾ ನಿಬಂಧನೆಗಳನ್ನು ಪೂರೈಸುತ್ತಾರೋ ಅವರಿಗೆ ಕೆರೆಗಳ ಪುನರುಜ್ಜೀವನ ಜವಾಬ್ದಾರಿ ನೀಡಲಾಗುತ್ತದೆ ಎಂದು ಪೀಠಕ್ಕೆ ವಿವರಿಸಿದರು.

ಅಲ್ಲದೆ, ಖಾಸಗಿಯವರು ಜವಾಬ್ದಾರಿ ತೆಗೆದುಕೊಂಡರೆ ಕೆರೆಗಳ ಮಾಲೀಕತ್ವ ಅವರ ವಶಕ್ಕೆ ಹೋಗಲಿದೆ. ವಾಣಿಜ್ಯೀಕರಣವಾಗುತ್ತದೆ ಎಂಬ ಭಯ ಬಿತ್ತಲಾಗುತ್ತಿದೆ. ಒಪ್ಪಂದದ ಪ್ರಕಾರ ಯಾವುದೇ ವಾಣಿಜ್ಯ ಚಟುವಟಿಕೆಗಳಲು ಇರುವುದಿಲ್ಲ. ಇದಕ್ಕೆ ಸಂಪೂರ್ಣ ನಿಷೇಧ ವಿರಲಿದೆ. ಕೆರೆಗಳ ಪುನರುಜ್ಜೀವನದ ವೇಳೆ ಖಾಸಗಿ ಸಂಸ್ಥೆಗಳು ಕೆರೆಗಳನ್ನು ಖಾಸಗಿ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಅದರ ಸಂಬಂಧ ದೂರು ದಾಖಲಿಸಲು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ 1533 ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಒಪ್ಪಂದದ ಪ್ರಕಾರ ಅಥವಾ ನ್ಯಾಯಾಲಯಕ್ಕೆ ನೀಡಿರುವ ಮುಚ್ಚಳಿಕೆ ಉಲ್ಲಂಘಿಸಿದರೆ ಯಾರು ಬೇಕಾದರೂ ದೂರು ನೀಡಬಹುದು. ಸಮಿತಿ ರಚಿಸಲಾಗಿದ್ದು, ಸಹಾಯ ಮೊಬೈಲ್​ ಅಪ್ಲಿಕೇಶನ್‌ ಸಹ ಇದಕ್ಕೆ ಬಳಸಬಹುದಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಬಿಬಿಎಂಪಿ ವಶದಲ್ಲಿರುವ 183 ಕೆರೆಗಳಿದ್ದು, ಒಂದೊಂದರಲ್ಲೂ ಒಂದೊಂದು ಕೆಲಸ ಮಾಡಬೇಕಿದೆ. ಇದಕ್ಕೆ ಅದರದೇ ಸಮಯ ಮತ್ತು ಅನುದಾನ ಬೇಕಿದೆ. ಒತ್ತುವರಿಯಾಗಿರುವುದನ್ನು ತೆರವು ಮಾಡುವುದು ನಮ್ಮ ಕರ್ತವ್ಯ. ಇದರ ಮೇಲೆ ನ್ಯಾಯಾಲಯ ನಿಗಾ ಇಡಬಹುದು. ತಕ್ಷಣ ಒತ್ತುವರಿ ತೆರವು ಮಾಡಿಕೊಡಲು ಸಾಧ್ಯವಾಗದಿದ್ದಾಗ ಕೆರೆಗಳ ನಿರ್ವಹಣೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ, ಕೆರೆಗಳ ಪುನರುಜ್ಜೀವನ ಮತ್ತು ಒತ್ತುವರಿ ತೆರವು ಏಕಕಾಲಕ್ಕೆ ಆಗಬೇಕಾಗಿದೆ ಎಂದು ವಿವರಿಸಿದರು.

ವಾದ ಆಲಿಸಿದ ಬಳಿಕ ಪೀಠ ಹೇಳಿದ್ದೇನು?: ಇದಕ್ಕೆ ಪೀಠ, ಬಿಬಿಎಂಪಿಯು ಕೆರೆಗಳ ಪಟ್ಟಿ ಮತ್ತು ಅವುಗಳ ವಿಸ್ತೀರ್ಣದ ಅಧಿಕೃತ ದಾಖಲೆ ಒದಗಿಸಬೇಕು. ಅದನ್ನು ಒಪ್ಪಂದದ ಪ್ರಕಾರ ಖಾಸಗಿಯವರಿಗೆ ನಿರ್ವಹಣೆಗೆ ನೀಡುವಾಗ ವ್ಯಾಪ್ತಿಯ ವಿಚಾರ ನಿಖರವಾಗಿರಬೇಕು. ಈ ವಿಚಾರದಲ್ಲಿ ದೋಷ ಕಂಡುಬಂದರೆ ದಂಡ ವಿಧಿಸಬಹುದು. ಪುನರುಜ್ಜೀವನಗೊಳಿಸುವವರು ಗಡಿ ಗುರುತಿಸಬೇಕು. ಒಪ್ಪಂದದ ಪ್ರಕಾರ ಕೆರೆ ನೀಡುವಾಗ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ನೀಡಬೇಕು. ಅದನ್ನು ಮಾಡದಿದ್ದರೆ ಕೆರೆ ಅಭಿವೃದ್ಧಿಪಡಿಸಲು ಬರುವ ಏಜೆನ್ಸಿ/ಸಂಸ್ಥೆಯೂ ಅದನ್ನು ಒತ್ತುವರಿ ಮಾಡಬಹುದು. ಕೆರೆಯ ಪುನರುಜ್ಜೀವನ ನೀತಿಯು ಒತ್ತುವರಿಗೆ ಅನುಮತಿಯಾಗಬಾರದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತೆರವು ಮಾಡಿಸಿ, ಆ ಕೆರೆಯ ಅಭಿವೃದ್ಧಿಗೆ ಅನುಮತಿಸಬಹುದು ಎಂದು ತಿಳಿಸಿ ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಯಾವುದೇ ಮುಲಾಜಿಲ್ಲದೆ ತೆರವು : ಡಿ ಕೆ ಶಿವಕುಮಾರ್ - Lake encroachment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.