ETV Bharat / state

ಮಂಗಳೂರಿನಲ್ಲಿ ಏ.14ರಂದು ಮೋದಿ ರೋಡ್ ಶೋ: ಜೇನುಗೂಡುಗಳ ತೆರವಿಗೆ ಪೊಲೀಸ್ ಕಮಿಷನರ್ ಆದೇಶ - Mangaluru - MANGALURU

ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಮಾರ್ಗದಲ್ಲಿರುವ ಜೇನುಗೂಡುಗಳ ತೆರವಿಗೆ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.

ಮಂಗಳೂರಿನಲ್ಲಿ ಏ.14ರಂದು ಪ್ರಧಾನಿ ರೋಡ್ ಶೋ: ಜೇನುಗೂಡು ತೆರವುಗೊಳಿಸಲು ಮಂಗಳೂರು ಪೊಲೀಸ್ ಕಮಿಷನರ್ ಆದೇಶ

author img

By ETV Bharat Karnataka Team

Published : Apr 12, 2024, 10:15 PM IST

ಮಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ನಗರದಲ್ಲಿ ಬಿಜೆಪಿ ಪಕ್ಷದ ಪರ ಪ್ರಚಾರಾರ್ಥ ರೋಡ್ ಶೋ ನಡೆಸಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೋಡ್ ಶೋ ನಡೆಸಲಿರುವ ಮಾರ್ಗದಲ್ಲಿರುವ ಜೇನುಗೂಡುಗಳನ್ನು ತೆರವುಗೊಳಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ನಾರಾಯಣ ಗುರು ವೃತ್ತ (ಲೇಡಿಹಿಲ್)ದಿಂದ ನವಭಾರತ ವೃತ್ತದವರೆಗೆ ರೋಡ್ ಶೋ ನಡೆಯಲಿದೆ. ಹಾಗಾಗಿ ರೋಡ್ ಶೋ ನಡೆಯುವ ಸ್ಥಳ, ಪಾರ್ಕಿಂಗ್ ಸ್ಥಳ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೋಡ್‌ಶೋ ನಡೆಯುವ ಸ್ಥಳದ ಆಸುಪಾಸಿನ ಎಲ್ಲಾ ಕಟ್ಟಡಗಳು, ಸೇಫ್‌ಹೌಸ್ ಮತ್ತು ಸೇಫ್ ಆಸ್ಪತ್ರೆಗಳಾದ ಎಜೆ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ, ಮಂಗಳೂರು ನಗರ ಪಾಲಿಕೆಯ ಆಯುಕ್ತರ ಕಚೇರಿ, ಎಸ್‌ಡಿಎಂ ಕಾನೂನು ಕಾಲೇಜು, ಸರ್ಕ್ಯೂಟ್ ಹೌಸ್ ಮತ್ತಿತರ ಕಡೆಗಳಲ್ಲಿನ ಜೇನುಗೂಡುಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪರಿಸರವಾದಿ ಬೆನೆಡಿಕ್ಟ್ ಫರ್ನಾಂಡೀಸ್, ಪ್ರಧಾನಿ ಮೋದಿಯವರ ಭದ್ರತೆಯ ದೃಷ್ಟಿಯಿಂದ ಇದನ್ನು ಮಾಡಲಾಗುತ್ತಿದೆ ಎಂದರೂ, ಜೇನುಗೂಡುಗಳನ್ನು ತೆರವುಗೊಳಿಸಿ ಜೇನುನೊಣಗಳನ್ನು ನಾಶಗೊಳಿಸುವುದು ತಪ್ಪು. ಭೂಮಿಯ ಉಳಿಯುವಿಕೆಗೆ, ಮಾನವ ಸಂಕುಲವನ್ನು ಉಳಿಸಲು ಜೇನುನೊಣಗಳ ಪಾತ್ರ ಮಹತ್ತರವಾದುದು. ಯಾವಾಗ ಜೇನುನೊಣಗಳು ಈ ಭೂಮಿಯಲ್ಲಿ ಸಂಪೂರ್ಣ ನಶಿಸಿಹೋಗುತ್ತದೆ ಅಂದು ಮಾನವನ ಅಂತ್ಯವೂ ಖಂಡಿತಾ. ಆದ್ದರಿಂದ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳದೆ ಜೇನುಗೂಡುಗಳನ್ನೇ ತೆರವುಮಾಡಿ ಜೇನುನೊಣಗಳನ್ನು ನಾಶಗೊಳಿಸುವುದು ಬಹಳ ದುಃಖದ ವಿಚಾರ. ಇದನ್ನು ಖಂಡಿತಾ ನಾವು ವಿರೋಧಿಸುತ್ತೇವೆ. ಆದ್ದರಿಂದ ಈ ಆದೇಶವನ್ನು ತಕ್ಷಣ ಕೈಬಿಡಬೇಕು. ಜೇನುಗೂಡುಗಳ ಬಳಿ ಸೆಕ್ಯೂರಿಟಿ ಇರಿಸಿ ಕಿಡಿಗೇಡಿ ಕೃತ್ಯ ನಡೆಯುವುದನ್ನು ತಪ್ಪಿಸುವ ವಿಧಾನ ಅನುಸರಿಸಬಹುದು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ರ‍್ಯಾಲಿ ಕುರಿತು ಚರ್ಚೆ: ಜಗದೀಶ್ ಶೆಟ್ಟರ್ - Jagadish Shettar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.