ತುಮಕೂರು: ಸರಗಳ್ಳನ ಚೇಸ್ ಮಾಡುತ್ತಿದ್ದಾಗ ಕಾರು ಅಪಘಾತವಾಗಿ ಮಧುಗಿರಿ ಠಾಣೆಯ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದ ಮಣೂರು ಬಳಿ ಶನಿವಾರ ಘಟನೆ ನಡೆಯಿತು. ಅಪರಾಧ ವಿಭಾಗದ ಸಿಬ್ಬಂದಿಯಾದ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್ ಅವರಿಗೆ ಗಾಯಗಳಾಗಿವೆ.
ಶನಿವಾರ ಮಧುಗಿರಿ ಪಟ್ಟಣದಲ್ಲಿ ಮಹಿಳೆಯಿಂದ 70 ಗ್ರಾಂ ಚಿನ್ನದ ಸರ ಕದ್ದು ಆರೋಪಿ ಎಸ್ಕೇಪ್ ಆಗಿದ್ದ. ಸಂತ್ರಸ್ತ ಮಹಿಳೆ ಕೂಡಲೇ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಆತನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಈ ವೇಳೆ ಸ್ಟೇರಿಂಗ್ ಲಾಕ್ ಆಗಿ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ಗಾಯಾಳು ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮಾವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮಾವರಂ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: 85 ಸಾವಿರ ರೂಪಾಯಿಗೆ ಸ್ನೇಹಿತನ ಹತ್ಯೆ - Nelamangala Murder Case