ಹುಬ್ಬಳ್ಳಿ: ಯಡಿಯೂರಪ್ಪ ಅವರ ಹಿರಿತನ, ವಯಸ್ಸು ನೋಡಿದರೆ ಇದರಲ್ಲಿ ಷಡ್ಯಂತ್ರವಿದೆ ಅನಿಸುತ್ತದೆ. ಎಫ್ಐಆರ್ ಆಗಿದೆ ತನಿಖೆಯಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಣದ ಕೈಗಳ ಕೈವಾಡವಿದೆ. ಅವರು ಹಿರಿಯರು ಅವರು ಈ ರೀತಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯಲಿ ಆಮೇಲೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಬಿಜೆಪಿ 28 ಸ್ಥಾನ ಗೆಲುತ್ತದೆ ಎಂಬ ವಾತಾವರಣ ನಿರ್ಮಾಣವಾದ ಮೇಲೆ ಷಡ್ಯಂತ್ರ ರೂಪಿತವಾಗಿದೆ ಎಂದರು.
ಶೆಟ್ಟರ್ ಬೆಳಗಾವಿಗೆ ನಿಲ್ಲುವಂತೆ ವರಿಷ್ಠರು ಸೂಚನೆ: ಜಗದೀಶ್ ಶೆಟ್ಟರ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶೆಟ್ಟರ್ ಅವರು ಹಿರಿಯ ನಾಯಕರು ಅವರನ್ನು ಗೌರವಯುತವಾಗಿ ನಮ್ಮ ನಾಯಕರು ನಡೆಸಿಕೊಳ್ಳುತ್ತಾರೆ. ನನ್ನ ಮಾಹಿತಿ ಪ್ರಕಾರ ಬೆಳಗಾವಿಗೆ ನಿಲ್ಲುವಂತೆ ಶೆಟ್ಟರ್ ಅವರಿಗೆ ವರಿಷ್ಠರು ಮನವಿ ಮಾಡಿದ್ದಾರೆ. ಆದಷ್ಟು ಬೇಗ ಗೊಂದಲ ನಿವಾರಣೆಯಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ಸ್ವಂತ ಹಾಗೂ ಸಾಂಸ್ಥಿಕದೊಳಗೆ ನಂಬಿಕೆ ಕಳೆದುಕೊಂಡಿದೆ. ಸುಪ್ರೀಂ ಕೋರ್ಟ್ ಬಗ್ಗೆ, ಚುನಾವಣೆ ಆಯೋಗ ಸೇರಿದಂತೆ ಯಾವ ಸಂಸ್ಥೆಗಳ ಮೇಲಿಯೂ ನಂಬಿಕೆಯಿಲ್ಲ. ಕಾಂಗ್ರೆಸಿಗರಿಗೆ ಯಾರ ಬಗ್ಗೆಯೂ ನಂಬಿಕೆಯಿಲ್ಲ. ಎಲ್ಲ ಕಡೆಯೂ ನಂಬಿಕೆ ಕಳೆದುಕೊಂಡಿದ್ದಾರೆ. ಮಾಹಿತಿ ಹಕ್ಕು, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಹೀಗೆ ಎಲ್ಲದರಲ್ಲೂ ನಂಬಿಕೆ ಕಳೆದುಕೊಂಡಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂತೋಷ್ ಲಾಡ್ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪರಿಸ್ಥಿತಿ ದೇಶದೊಳಗೆ ಏನಾಗಿದೆ ಎನ್ನುವುದು ಅವರಿಗೆ ಏನೂ ಗೊತ್ತಿಲ್ಲ. ಅವರಿಗೊಂದು ಕಾಗ್ರೆಸ್ ನಾಯಕರು ಟಾರ್ಗೆಟ್ ನೀಡಿದ್ದು, ಮೋದಿ ಹಾಗೂ ಪ್ರಹ್ಲಾದ್ ಜೋಶಿ ಅವರನ್ನು ಬೈದರೆ ನಿನ್ನ ಮಂತ್ರಿ ಪದವಿ ಇಡ್ತೀವಿ, ಇಲ್ಲವಾದರೆ ಮಂತ್ರಿಯಾಗಿ ಇಡುವುದಿಲ್ಲ. ಅದಕ್ಕೆ ಅವರು ಅಧಿಕಾರ ಉಳಿಸಿಕೊಳ್ಳಲು ,ತಮ್ಮ ಸಂರಕ್ಷಣೆಗಾಗಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಮೋದಿ ಆಡಳಿತದಲ್ಲಿ 4 ಕೋಟಿ ಮನೆ ವಿತರಣೆ: 1955 ರಿಂದ ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ಮನೆ ಕೊಡಲಿಕ್ಕೆ ಶುರು ಮಾಡಿದ್ರೂ ಅಲ್ಲಿಂದ ಇಲ್ಲಿಯವರೆಗೆ ಮೂರುವರೆ ಕೋಟಿ ವಿವಿಧ ಅವಾಸ್ ಯೋಜನೆಯಡಿ ಬಡವರಿಗೆ ಮನೆ ನೀಡಿದ್ದಾರೆ. ಆದರೆ ಮೋದಿ ಬಂದ ಬಳಿಕ 10 ವರ್ಷದಲ್ಲಿ ಬಿಜೆಪಿ ಸರ್ಕಾರ ಪಿಎಂ ಅವಾಸ್ ಯೋಜನೆಯಡಿ 4 ಕೋಟಿ ಮನೆಗಳನ್ನು ವಿತರಿಸಿದೆ ಎಂದರು.
ಇದನ್ನೂಓದಿ:ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಸಿಐಡಿಗೆ ವರ್ಗಾವಣೆ