ತುಮಕೂರು: ಪ್ರಧಾನಿ ಹೊರ ರಾಷ್ಟ್ರಗಳಿಗೆ ಹೋದ ಸಂದರ್ಭದಲ್ಲಿ ಕ್ಲಿಷ್ಟವಾದ ಸಮಸ್ಯೆಗಳಿಗೆ ಪರಿಹಾರ ತೋರಿಸಿದ್ದಾರೆ. ಉಕ್ರೇನ್-ರಷ್ಯಾ ರಾಷ್ಟ್ರಗಳಲ್ಲೂ ಭಾರತದ ಹೃದಯ ಶ್ರೀಮಂತಿಕೆಯನ್ನ ಅರ್ಥಮಾಡಿಸಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ಕಡೆ ರಷ್ಯಾಕ್ಕೆ ತೆರಳಿ ಪುಟೀನ್ ಭೇಟಿ ಮಾಡಿದ್ದಾರೆ. ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ, ಯುದ್ಧ ನಿಲ್ಲಿಸಿ ಶಾಂತಿ ಕಾಪಾಡಬೇಕು ಅಂತ ಹೇಳಿದ್ದಾರೆ. ಉಕ್ರೇನ್ ದೇಶಕ್ಕೆ ಪೋಲ್ಯಾಂಡ್ನಿಂದ 20 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣ ಮಾಡಿ, ಆ ದೇಶದಲ್ಲಿ ಆಗಿರುವ ಅನಾಹುತಗಳನ್ನ ಕಣ್ಣಾರೆ ಕಂಡಿದ್ದಾರೆ. ಎರಡು ದೇಶಗಳ ನಡುವೆ ಸಾಮರಸ್ಯ ಬೆಸೆಯುವ ಸಂದೇಶ ನೀಡಿದ್ದಾರೆ. ಶಾಂತಿ ನೆಲೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದರು.
ಮನ್ ಕಿ ಬಾತ್ ವೀಕ್ಷಣೆ : ತುಮಕೂರಿನ ಪ್ರವಾಸಿ ಮಂದಿರದಲ್ಲಿರುವ ಸರ್ಕೀಟ್ ಹೌಸ್ ಬಳಿ ಇರುವ ಸಚಿವರ ಕಚೇರಿ ಬಳಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಂದು ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದರು.
ಸೋಮಣ್ಣ ಅವರೊಂದಿಗೆ ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಸೋಗಡು ಶಿವಣ್ಣ ಭಾಗಿಯಾಗಿದ್ದರು.
ಇದನ್ನೂ ಓದಿ : ಪ್ರಧಾನಿ ಮೋದಿ ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ: ವಿ.ಸೋಮಣ್ಣ - V Somanna