ಶಿವಮೊಗ್ಗ: ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಬೆಳಗ್ಗೆ 11:58ರ ವೇಳೆಗೆ ಒಟ್ಟು 17411 ಮತಗಳಿಸಿದ್ದಾರೆ. ಬಿಜೆಪಿಯನ್ನು ಎದರು ಹಾಕಿಕೊಂಡು ಸ್ಪರ್ಧಿಸಿರುವ ಈಶ್ವರಪ್ಪ ಅವರಿಗೆ ಮತಗಳ ಹೊಡೆತ ಬಿದ್ದಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ.
ಬೆಳಗ್ಗೆಯಿಂದಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಫಲಿತಾಂಶದಲ್ಲಿ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ವೈ. ರಾಘವೇಂದ್ರ, ಕಾಂಗ್ರೆಸ್ಯಿಂದ ಗೀತಾ ಶಿವರಾಜ್ಕುಮಾರ್, ಹಾಗೇ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್. ಈಶ್ವರಪ್ಪ ಸ್ಪರ್ಧಿಸಿದ್ದಾರೆ. ಪುತ್ರನಿಗೆ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಬಿಜೆಪಿ ಕಟ್ಟಾಳಾಗಿದ್ದ ಕೆ.ಎಸ್. ಈಶ್ವರಪ್ಪ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದರು.
ಮತಗಳ ಅಂತರ ಹೀಗಿದೆ (ಸಮಯ 11:25 AM):
ಪಕ್ಷ | ಅಭ್ಯರ್ಥಿ | ಮತಗಳು | ಅಂತರ |
ಬಿಜೆಪಿ | ಬಿ.ವೈ. ರಾಘವೇಂದ್ರ | 455035 | ಮುನ್ನಡೆ |
ಕಾಂಗ್ರೆಸ್ | ಗೀತಾ ಶಿವರಾಜ್ಕುಮಾರ್ | 317533 | ಹಿನ್ನಡೆ |
ಪಕ್ಷೇತರ | ಕೆ.ಎಸ್. ಈಶ್ವರಪ್ಪ | 17411 | ಹಿನ್ನಡೆ |
ಇದನ್ನೂ ಓದಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಜೇಶ್ ಚೌಟ ಮುನ್ನಡೆ - Dakshina kannada result