ಬೆಂಗಳೂರು: ಪಿತೃಪಕ್ಷದ ಮಹಾಲಯ ಅಮಾವಾಸ್ಯೆ ಅ.2 ರಂದು ಆಚರಿಸಲಾಗುತ್ತಿದೆ. ಆದರೆ, ಅದೇ ದಿನ ಗಾಂಧಿ ಜಯಂತಿ ಕೂಡ ಆಗಿರುವುದರಿಂದ ಮಾಂಸ ಹಾಗೂ ಮದ್ಯ ಮಾರಾಟವನ್ನು ಜಿಲ್ಲಾಡಳಿತ ಹಾಗೂ ಪಾಲಿಕೆ ನಿಷೇಧಿಸಿದೆ. ಇದರಿಂದಾಗಿ ಹಿರಿಯರ ಪೂಜೆಗೆ ಮದ್ಯ ಮತ್ತು ಮಾಂಸವನ್ನು ಇಟ್ಟು ಪೂಜಿಸುವವರಿಗೆ ತೊಡಕಾಗಲಿದೆ.
ಮಹಾಲಯ ಅಮಾವಾಸ್ಯೆ ಗಾಂಧಿ ಜಯಂತಿಯ ದಿನ ಬಂದಿರುವ ಕಾರಣ, ಆ ದಿನ ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವಿ ವಿ ಸತ್ಯನಾರಾಯಣ ಹಾಗೂ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕಯ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಅವರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ ನಿಗದಿ ಆಗಿರುವುದರಿಂದ ಅಂದು ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಇನ್ನು ಜಿಲ್ಲಾಡಳಿತ ಹಾಗೂ ಪಾಲಿಕೆ ಈ ಕುರಿತು ಯಾವುದೇ ನಿರ್ಧಾರಕ್ಕೆ ಬರದಿರುವುದು ಹಾಗೂ ಪಿತೃಪಕ್ಷಕ್ಕೆ ಹಿರಿಯರಿಗೆ ಮಾಂಸ, ಮದ್ಯ ಇಟ್ಟು ಪೂಜಿಸುವವರು ಹಿಂದಿನ ದಿನವೇ ಅವುಗಳನ್ನು ಕೊಂಡು ಇಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ: ಮಾಂಸ ಮಾರಾಟಕ್ಕೆ ಅವಕಾಶ ನೀಡುವಂತೆ ಸಿಎಂಗೆ ಪತ್ರ - Letter to CM