ETV Bharat / state

ಶಿರೂರು ಗುಡ್ಡ ಕುಸಿತ ಪ್ರಕರಣ; ನಾಪತ್ತೆಯಾದವರ ಮೂಳೆಯನ್ನಾದರೂ ಹುಡುಕಿ ಕೊಡುವಂತೆ ಸ್ಥಳೀಯರ ಪಟ್ಟು - NEGLECTED TO SEARCH MISSING LOCALS

ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್​ ಅವರ ಪತ್ತೆಗಾಗಿ ತೋರಿದ ಉತ್ಸಾಹವನ್ನು ಜಿಲ್ಲಾಡಳಿತ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಸ್ಥಳೀಯರ ಪತ್ತೆಗೆ ತೋರುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shiruru Hill Collapse Place
ಶಿರೂರು ಗುಡ್ಡ ಕುಸಿತವಾದ ಸ್ಥಳ (ETv Bharat)
author img

By ETV Bharat Karnataka Team

Published : Oct 24, 2024, 1:30 PM IST

Updated : Oct 24, 2024, 3:07 PM IST

ಕಾರವಾರ (ಉತ್ತರ ಕನ್ನಡ): ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದಿದ್ದ ಗುಡ್ಡ ಕುಸಿತ ಸಂಭವಿಸಿ, ಮೂರು ತಿಂಗಳು ಕಳೆದರೂ ಇನ್ನೂ ನಾಪತ್ತೆಯಾದ ಸ್ಥಳೀಯ ಇಬ್ಬರ ಮೃತದೇಹ ಪತ್ತೆಯಾಗಿಲ್ಲ. ಗುಡ್ಡ ಕುಸಿತದ ಬಳಿಕ ಹಾಗೂ ಮೂರನೇ ಹಂತದ ಕಾರ್ಯಾಚರಣೆ ವೇಳೆ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್ ಪತ್ತೆಗೆ ತೋರಿದ ಉತ್ಸಾಹ ಸ್ಥಳೀಯರ ಪತ್ತೆ ಕಾರ್ಯದಲ್ಲಿ ಇಲ್ಲದಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಹೌದು, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದಿದ್ದ ಗುಡ್ಡ ಕುಸಿತ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಅಗಲೀಕರಣದಿಂದ ಗುಡ್ಡ ಕುಸಿತವಾಗಿ ಸುಮಾರು 11 ಜನ ನಾಪತ್ತೆಯಾಗಿದ್ದರು. ಗುಡ್ಡದ ಮಣ್ಣು ರಸ್ತೆ ಪಕ್ಕದಲ್ಲಿ ಇದ್ದ ಹೋಟೆಲ್ ಮೇಲೆ ಬಿದ್ದ ಪರಿಣಾಮ ಎಲ್ಲರೂ ಮಣ್ಣಿನ ಅಡಿ ಪಕ್ಕದಲ್ಲೇ ಇದ್ದ ಗಂಗಾವಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದರು.

ಶಿರೂರು ಗುಡ್ಡ ಕುಸಿತ ಪ್ರಕರಣ; ನಾಪತ್ತೆಯಾದವರ ಮೂಳೆಯನ್ನಾದರೂ ಹುಡುಕಿ ಕೊಡುವಂತೆ ಸ್ಥಳೀಯರ ಪಟ್ಟು (ETV Bharat)

ಘಟನೆಯಲ್ಲಿ ನಾಪತ್ತೆಯಾದವರ ಹುಡುಕಾಟ ಪ್ರಾರಂಭಿಸಿದ ಜಿಲ್ಲಾಡಳಿತಕ್ಕೆ ಮೊದಲು 8 ಜನರ ಶವ ಹುಡುಕುವಲ್ಲಿ ಯಶಸ್ವಿಯಾಗಿದ್ದರು. ಕೇರಳ ಮೂಲದ ಅರ್ಜುನ್ ಎಂಬಾತನ ದೇಹ ಲಾರಿ ಸಮೇತ ನಾಪತ್ತೆಯಾಗಿತ್ತು. ಕಳೆದ 15 ದಿನಗಳ ಹಿಂದೆ ಸಾಕಷ್ಟು ಪ್ರಯತ್ನ ನಡೆಸಿ ಲಾರಿ ಸಮೇತ ನದಿಯ ಮಧ್ಯದಲ್ಲಿ ಇದ್ದ ಅರ್ಜುನನ ಶವ ಹುಡುಕುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಸ್ಥಳೀಯ ಜಗನ್ನಾಥ್ ಹಾಗೂ ಲೋಕೇಶ್​ ಎನ್ನುವವರ ಶವ ಇನ್ನೂ ಸಿಕ್ಕಿಲ್ಲ. ಆದರೆ ಮಳೆ ಕಾರಣವೊಡ್ಡಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

"ಇನ್ನು ಕಾರ್ಯಾಚರಣೆ ಮಾಡುವ ವೇಳೆ ಮೂಳೆಯೊಂದು ಸಿಕ್ಕಿತ್ತು. ಮೂಳೆಯನ್ನು ಡಿಎನ್ಎ ಪರೀಕ್ಷೆಗೆ ಕಳಿಸಿದ್ದರು. ವೈದ್ಯರ ನಿರ್ಲಕ್ಷ್ಯತನದಿಂದ ಈ ಮೂಳೆಯ ಗುರುತು ಪತ್ತೆಯಾಗಿರಲಿಲ್ಲ. ಸದ್ಯ ಮೂಳೆಯನ್ನಾದರು ಹುಡುಕಿಕೊಟ್ಟರೆ ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗಲಿದೆ. ಇನ್ನು ದೀಪಾವಳಿ ನಂತರವಾದರೂ ಗುಡ್ಡ ಕುಸಿತವಾದ ಸ್ಥಳದಲ್ಲಿ ಹುಡುಕಾಟ ಮಾಡಲಿ. ಮೂಳೆಯನ್ನಾದರು ಹುಡುಕಿ ಮನೆಯವರು ನೆಮ್ಮದಿಯಿಂದ ಇರಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಶಿರೂರಿನಲ್ಲಿ ನಡೆದಿದ್ದ ಗುಡ್ಡ ಕುಸಿತ ಪ್ರಕರಣ ಮುಗಿದ ಅಧ್ಯಾಯ ಎನ್ನುವಂತೆ ಜಿಲ್ಲಾಡಳಿತ ನಡೆದುಕೊಳ್ಳಲು ಮುಂದಾಗಿದ್ದು, ಈ ನಡೆ ದೇಹ ಸಿಗದೇ ಇರುವ ಕುಟುಂಬಗಳ ಬೇಸರಕ್ಕೆ ಸಹ ಕಾರಣವಾಗಿದೆ. ಇನ್ನಾದರೂ ಶೀಘ್ರದಲ್ಲಿಯೇ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿ ನಾಪತ್ತೆಯಾದ ಜಗನ್ನಾಥ ಹಾಗೂ ಲೋಕೇಶ್​ ದೇಹವನ್ನು ಹುಡುಕಿಕೊಡುವಂತಾಗಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆ ವೇಳೆ ಮೂಳೆ ಪತ್ತೆ: ಪರೀಕ್ಷೆಗೆ ಕಳುಹಿಸಿದ ತಾಲೂಕು ಆಡಳಿತ - Shiruru Search Operation

Last Updated : Oct 24, 2024, 3:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.