ETV Bharat / state

ತುಮಕೂರು: ಖಾಸಗಿ ಬಸ್​ ಡಿಕ್ಕಿ ಹೊಡೆದು ತಾಯಿ-ಮಗಳು ಸಾವು - Mother Daughter Killed

author img

By ETV Bharat Karnataka Team

Published : Sep 9, 2024, 11:41 AM IST

ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದಾಗ ಖಾಸಗಿ ಬಸ್​ ಡಿಕ್ಕಿ ಹೊಡೆದು ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಇಂದು ನಡೆಯಿತು.

ತುಮಕೂರಿನ ತಿಪಟೂರು ಬಳಿ ಅಪಘಾತ
ತುಮಕೂರಿನಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ತಾಯಿ, ಮಗಳು ಸಾವು (ETV Bharat)
ಖಾಸಗಿ ಬಸ್​ ಡಿಕ್ಕಿ ಹೊಡೆದು ತಾಯಿ-ಮಗಳು ಸಾವು: ಸಂಬಂಧಿಕರಿಂದ ಆಕ್ರೋಶ (ETV Bharat)

ತುಮಕೂರು: ಖಾಸಗಿ ಬಸ್​ ಡಿಕ್ಕಿ ಹೊಡೆದು ತಾಯಿ ಹಾಗು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕು ರಾಮಶೆಟ್ಟಿಹಳ್ಳಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಅಂಡರ್ ಪಾಸ್​ ಬಳಿ ನಡೆದಿದೆ. ತಾಯಿ ಕಮಲಮ್ಮ (42) ಮತ್ತು ಮಗಳು ವೀಣಾ (16) ಮೃತರು.

ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಗೀತಾಂಜನೇಯ ಹೆಸರಿನ ಖಾಸಗಿ ಬಸ್​ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮತ್ತೊಬ್ಬ ಪಾದಚಾರಿ ತಲೆಗೂ ತೀವ್ರ ಪೆಟ್ಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗೆ ತಿಪಟೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಸಂಬಂಧಿಕರು ಮೃತದೇಹಗಳನ್ನು ತೆಗೆಯಲು ಬಿಡದೇ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ಈ ಹಿಂದೆ ಹಲವು ಬಾರಿ ಗ್ರಾಮಸ್ಥರು ಅಂಡರ್​ಪಾಸ್ ಬೇಕೆಂದು ಹೋರಾಟ ನಡೆಸಿದ್ದರು. ಆದರೆ ಇಲ್ಲಿವರೆಗೂ ಸುಮಾರು ಐವರು ಇದೇ ಸ್ಥಳದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಿಪಟೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ತಾಯಿಗೆ ರಿಕ್ಷಾ ಡಿಕ್ಕಿ: ಧಾವಿಸಿ ಬಂದು ರಕ್ಷಿಸಿದ ಮಗಳ ಶೌರ್ಯಕ್ಕೆ ಮೆಚ್ಚುಗೆ!- ವಿಡಿಯೋ - Mangaluru Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.