ETV Bharat / state

ನನ್ನನ್ನು 4 ಜಿಲ್ಲೆಗಳಲ್ಲಿ 11 ಗಂಟೆಗೂ ಹೆಚ್ಚು ಕಾಲ ಅಲೆದಾಡಿಸಿದ್ರು, ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ರು: ಸಿ.ಟಿ.ರವಿ - MLC C T RAVI

ದಾವಣಗೆರೆ ಸರ್ಕ್ಯೂಟ್ ಹೌಸ್​ನಲ್ಲಿ ಎಂಎಲ್​ಸಿ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಹೈಕೋರ್ಟ್ ಆದೇಶದಿಂದ ಸತ್ಯಕ್ಕೆ ಜಯ ಸಿಕ್ಕಿದೆ. ನಾನು ಕುಗ್ಗುವುದಿಲ್ಲ ಎಂದರು.

mlc-c-t-ravi
ಆರ್.ಅಶೋಕ್, ಸಿ.ಟಿ.ರವಿ, ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು (ETV Bharat)
author img

By ETV Bharat Karnataka Team

Published : 5 hours ago

ದಾವಣಗೆರೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಇಂದು ಸಂಜೆ ಹೈಕೋರ್ಟ್​ ಆದೇಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಿಡುಗಡೆಗೊಳಿಸಿದ್ದಾರೆ. ನಂತರ ಸಿ.ಟಿ.ರವಿ ಪೊಲೀಸ್ ಭದ್ರತೆಯೊಂದಿಗೆ ದಾವಣಗೆರೆ ಸರ್ಕ್ಯೂಟ್ ಹೌಸ್​ಗೆ ಆಗಮಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

"ನನ್ನನ್ನು ಒಟ್ಟು 4 ಜಿಲ್ಲೆ, 11 ಗಂಟೆಗೂ ಹೆಚ್ಚಿನ ಕಾಲ ಅಲೆದಾಡಿಸಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಪೊಲೀಸ್ ಪವರ್ ಮೂಲಕ ‌ಮಾಡಿಸಿದೆ. ಬಿ.ವೈ.ವಿಜಯೇಂದ್ರ, ಆರ್.ಆಶೋಕ್, ನಾರಾಯಣಸ್ವಾಮಿ ಎಲ್ಲರೂ ಸಂಕಷ್ಟದ ಸಮಯದಲ್ಲಿ ನನಗೆ ಅತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು" ಎಂದರು.

ಎಂಎಲ್​ಸಿ ಸಿ ಟಿ ರವಿ ಅವರು ಮಾತನಾಡಿದರು (ETV Bharat)

ಹೈಕೋರ್ಟ್ ಆದೇಶದ ಬಗ್ಗೆ ಸತ್ಯಮೇವ ಜಯತೇ ಎಂದು ಒಂದೇ ಮಾತು ಹೇಳುವೆ. ಸತ್ಯಕ್ಕೆ ಜಯ ಸಿಗುತ್ತೆ ಎಂದು ಹೇಳಿದ್ದೆ. ಸತ್ಯಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ಪೊಲೀಸ್ ಪವರ್ ಮೂಲಕ ನನ್ನನ್ನು ಕುಗ್ಗಿಸುವ ಕೆಲಸ ಮಾಡಿದರೆ ನಾನು ಕುಗ್ಗುವುದಿಲ್ಲ. ಇಂತಹ ಸಂಕಷ್ಟಗಳನ್ನು 35 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ದೆಸೆಯಲ್ಲಿ ಹೋರಾಟದ ಸಮಯದಲ್ಲಿ ಅನುಭವಿಸಿದ್ದೇನೆ. ನೀವು ಕೊಡುವ ತೊಂದರೆ ಮತ್ತಷ್ಟು ಹೋರಾಟ ಮಾಡುವ ಶಕ್ತಿ ನೀಡುತ್ತದೆ. ನಮ್ಮ ಕಾರ್ಯಕರ್ತರು ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಂದಿದ್ದಾರೆ. ಅವರೆಲ್ಲರೂ ಧನ್ಯವಾದಗಳು" ಎಂದು ಹೇಳಿದರು.

ಇದನ್ನೂ ಓದಿ : ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಆದೇಶಿಸಿ 'ಜನಪ್ರತಿನಿಧಿಗಳಾಗಿ ಆರೋಪಿ‌, ದೂರುದಾರರ ವರ್ತನೆ ದುರದೃಷ್ಟಕರ‌' ಎಂದ ಹೈಕೋರ್ಟ್‌ - C T RAVI CASE

ಬಳೆ ತೊಟ್ಟು ಕೂತಿಲ್ಲ- ಡಿಕೆಶಿಗೆ ವಿಜಯೇಂದ್ರ ಎಚ್ಚರಿಕೆ: "ಕಳೆದ ದಿನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆಯನ್ನು ಇಡೀ ದೇಶದ ಜನರು ಗಮನಿಸಿದ್ದಾರೆ. ಕಾಂಗ್ರೆಸ್ ಪಕ್ಷದವರು ಸುವರ್ಣಸೌಧಕ್ಕೆ ನುಗ್ಗಿ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆಸಿದರು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ಬಿಜಯೇಂದ್ರ ವಾಗ್ದಾಳಿ ನಡೆಸಿದರು. "ಎಫ್ಐಆರ್ ಹಾಕಿ ಕಾನೂನುಬಾಹಿರವಾಗಿ ಅರೆಸ್ಟ್ ಮಾಡಿದ್ದಾರೆ. ರಾತ್ರಿ 12 ಗಂಟೆಗೆ ಬೆಂಗಳೂರಿಗೆ ಕರೆತರುವ ನೆಪ ಮಾಡಿ ಖಾನಾಪುರ ಠಾಣೆಗೆ ಕರೆತಂದು ಪೊಲೀಸರು ಹಲ್ಲೆ ನಡೆಸಿದ್ದಾರೆ. ತಲೆಯಿಂದ ರಕ್ತ ಸುರಿಯುತ್ತಿದ್ದರೂ ಆಸ್ಪತ್ರೆಗೆ ಸೇರಿಸದೇ ದುರ್ವರ್ತನೆ ತೋರಿದ್ದಾರೆ. ರವಿ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು 500 ಕಿ.ಮೀ ತಿರುಗಾಡಿಸಿದ್ದಾರೆ. ಭಯ ಹುಟ್ಟಿಸುವ ರೀತಿ ಪೊಲೀಸರು ವರ್ತಿಸಿದ್ದಾರೆ" ಎಂದು ಅವರು ದೂರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿದರು (ETV Bharat)

"ಹೈಕೋರ್ಟ್ ಮಹತ್ವದ ತೀರ್ಪುನ್ನು ಸ್ವಾಗತಿಸುತ್ತೇವೆ. ನ್ಯಾಯಾಲಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಸಿ.ಟಿ.ರವಿ ಅವರನ್ನು ನೋಟಿಸ್ ನೀಡದೆ ಬಂಧನ ಮಾಡಿರುವುದಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಇನ್ನು ಬೆಳಗಾವಿಯಿಂದ ರವಿ ಅವರನ್ನು ಬಿಟ್ಟಿದ್ದೇ ಹೆಚ್ಚು ಎಂದು ಡಿಸಿಎಂ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ಸಚಿವ ಈ ರೀತಿ ಮಾಡುತ್ತಿರುವುದು ದುರಾಡಳಿತ. ನಾವು ನಮ್ಮ ಕಾರ್ಯಕರ್ತರು ಬಳೆ ತೊಟ್ಟು ಕೂತಿಲ್ಲ. ಈ ರೀತಿ ಗೂಂಡಾ ವರ್ತನೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

ಆರ್.ಅಶೋಕ್ ವಾಗ್ದಾಳಿ: "ಸಿ.ಟಿ.ರವಿ ಬೇಡಿಕೊಂಡ್ರೂ ಕೂಡ ಅವರನ್ನು ಪೊಲೀಸರು ಬಿಡಲಿಲ್ಲ. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಕೂಗಿದವರ ಬಂಧನ ಆಗಿಲ್ಲ. ಅವರನ್ನು ಬಿಟ್ಬುಟ್ರು. ದೇಶ ಭಕ್ತ ಸಿ.ಟಿ.ರವಿ ಅವರನ್ನು ಅರೆಸ್ಟ್ ಮಾಡಿದರು" ಎಂದು ವಿಪಕ್ಷ ನಾಯಕ ಆರ್.ಆಶೋಕ್ ಸರ್ಕಾರದ ವಿರುದ್ಧ ಗರಂ ಆದರು.

"ಇಲ್ಲಿ ನಡೆದಿರುವ ಘಟನೆ ಬಗ್ಗೆ ಶಿಕ್ಷೆ ಕೊಡುವವರು ಸಿಎಂ ಸಿದ್ದರಾಮಯ್ಯ ಅವರಾ? ಡಿ.ಕೆ.ಶಿವಕುಮಾರ್ ಅವರಾ? ಅವರು ನ್ಯಾಯಾಧೀಶರಾ? ಕ್ಷಮಾಪಣೆ ಕೇಳ್ಬೇಕು ಎನ್ನುವ ಇವರಿಗೆ ನಾವೇಕೆ ಕ್ಷಮಾಪಣೆ ಕೇಳ್ಬೇಕು? ತಪ್ಪು ಎಂದು ಸಾಬೀತಾಗಬೇಕು, ಕಾನೂನು ವ್ಯವಸ್ಥೆಯಲ್ಲೂ ರವಿ ಹೇಳಿರುವುದು ಸಾಬೀತಾಗ್ಬೇಕು, ಆಗಾ ನಾವು ಪಾಲನೆ ಮಾಡ್ತೀವಿ" ಎಂದರು.

"ದೂರು ಕೊಡಲು ಠಾಣೆಗೆ ಹೋದಾಗ ನನಗೆ ಎಂಟ್ರಿ ಇಲ್ಲ. ಸಂವಿಧಾನದ ಬದ್ಧವಾದ ಸ್ಥಾನ ನನ್ನದು, ಭಯೋತ್ಪಾದಕ ಬಂದ್ರೆ ಚೇರ್ ಹಾಕಿ ಕೂರಿಸುತ್ತೀರಾ, ಐದು ಗಂಟೆ ಠಾಣೆ ಹೊರಗಿದೀನಿ, ನನಗೆ ಅವಕಾಶ ಕೊಡಲಿಲ್ಲ. ಈ ರೀತಿಯ ಘಟನೆ ಇತಿಹಾಸದಲ್ಲೇ ನೋಡಿಲ್ಲ. ಸಿ.ಟಿ.ರವಿ ಒಬ್ಬಂಟಿ ಅಲ್ಲ. ನಾವು ಜೊತೆಯಲ್ಲಿದ್ದೇವೆ. ನಮ್ಮದು ಕೇಡರ್ ಪಾರ್ಟಿ, ಕಾಂಗ್ರೆಸ್​​ನಂತೆ ಅಬ್ಬೇಪಾರಿ ಪಾರ್ಟಿ ಅಲ್ಲ. ನಾವು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡ್ತೇವೆ‌. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕೂಡ ದೂರು‌ ನೀಡಲಿದ್ದೇವೆ" ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸಿ.ಟಿ.ರವಿ ಬಂಧನ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.