ETV Bharat / state

ಬೇರೆಯವರನ್ನು ಸಿಎಂ ಮಾಡುವ ಪ್ರಶ್ನೆನೇ ಈಗ ಬರುವುದಿಲ್ಲ: ಸಚಿವ ಜಿ.ಪರಮೇಶ್ವರ್ - G Parameshwar - G PARAMESHWAR

ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ ಅಂತ ನಾವೆಲ್ಲರೂ ಹೇಳುತ್ತಿದ್ದೇವಲ್ಲ. ಅವರು ರಾಜೀನಾಮೆ ಕೊಡುವ ಪ್ರಶ್ನೆ ಎಲ್ಲಿ ಬರುತ್ತೆ ಈಗ? ಎಂದು ಸಚಿವ ಜಿ.ಪರಮೇಶ್ವರ್ ಪ್ರಶ್ನಿಸಿದರು.

ಸಚಿವ ಜಿ.ಪರಮೇಶ್ವರ್
ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Aug 31, 2024, 3:16 PM IST

Updated : Aug 31, 2024, 3:21 PM IST

ಸಚಿವ ಜಿ.ಪರಮೇಶ್ವರ್ (ETV Bharat)

ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಆಗಲಿ ಅಥವಾ ಬೇರೆಯವರನ್ನು ಸಿಎಂ ಮಾಡುವ ಪ್ರಶ್ನೆಯೇ ಈಗ ಬರಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು. ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ ಅಂತ ನಾವೆಲ್ಲರೂ ಹೇಳುತ್ತಿದ್ದೇವಲ್ಲ. ಆ ಪ್ರಶ್ನೆ ಎಲ್ಲಿ ಬರುತ್ತೆ ಈಗ ಎಂದು ಕೇಳಿದರು.

ಕೋವಿಡ್ ಹಗರಣಗಳ ಸಂಬಂಧ ನ್ಯಾ. ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗದಿಂದ ವರದಿ ವಿಚಾರವಾಗಿ ಮಾತನಾಡಿ, ನ್ಯಾ. ಮೈಕೆಲ್ ಕುನ್ಹಾ ಅವರು ವರದಿ ಕೊಡಲು ಇನ್ನೂ ಕಾಲಾವಕಾಶ ಬೇಕು ಅಂತ ಕೇಳಿದ್ರು. ನಾವು ಇನ್ನೂ ಆರು ತಿಂಗಳು ಕಾಲಾವಕಾಶ ಕೊಟ್ಟಿದ್ದೇವೆ. ಈಗ ಅವರು ಮಧ್ಯಂತರ ವರದಿ ಕೊಡುವ ಸಾಧ್ಯತೆ ಇರಬಹುದು ಎಂದು ತಿಳಿಸಿದರು.

ಜೈಲಿನಲ್ಲಿ ದರ್ಶನ್ ವಿಡಿಯೋ ಕಾಲ್ ಪ್ರಕರಣ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನಮಗೆ ಯಾವುದೇ ರಿಪೋರ್ಟ್ ಇನ್ನೂ ಬಂದಿಲ್ಲ. ಇದರ ತನಿಖೆಯನ್ನು ಐಪಿಎಸ್ ಅಧಿಕಾರಿ ಚಂದ್ರಗುಪ್ತ ಮಾಡ್ತಿದ್ದಾರೆ. ತನಿಖೆ ನಂತರ ಏನು ವರದಿ ಬರುತ್ತೆ ಅಂತ ನೋಡೋಣ ಎಂದು ಹೇಳಿದರು.

ಸಿಎಂ ಆಪ್ತ, ಕಾಂಗ್ರೆಸ್​ ಹಿರಿಯ ಮುಖಂಡ ಮರಿಗೌಡ ಅವರ ಪತ್ನಿ 6 ಕೋಟಿ ಮೌಲ್ಯದ ಬಂಗಲೆ ಖರೀದಿ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿರೋ ವಿಷಯ ಹೇಗೆ ಹೇಳೋದು ಎಂದರು.

ಇದನ್ನೂ ಓದಿ: 'ರಾಜಭವನ ರಾಜಕೀಯ ಭವನ ಆಗಬಾರದು': ಎನ್​ಡಿಎ ನಾಯಕರ ಪ್ರಾಸಿಕ್ಯೂಷನ್​ ಅನುಮತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್​ ಮನವಿ - Congress appeals to governor

Last Updated : Aug 31, 2024, 3:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.