ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಕುರಿತು ಶೋಭಾ ಕರಂದ್ಲಾಜೆ ಅವರ ತನಿಖೆಗೆ ತಾವೂ ಕೂಡ ಒತ್ತಾಯಿಸುವುದಾಗಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ ಅಂತ ನಾನೂ ಆರೋಪ ಮಾಡ್ತೇನೆ. ಶೋಭಾ ಕರಂದ್ಲಾಜೆ ಗಾಳಿಯಲ್ಲಿ ಗುಂಡು ಹೊಡೆಯೋದನ್ನು ಬಿಡಬೇಕು. ಹಾಗಾದ್ರೆ ನಾನೂ ಆರೋಪ ಮಾಡ್ತೇನೆ. ಯಡಿಯೂರಪ್ಪ ಪಾಪ ಒಳ್ಳೆಯವರು. ಆದರೆ ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವು ಹೇಗಾಯ್ತು ಅಂತ ನಾನೂ ಕೇಳ್ತೀನಿ. ಅದರ ಬಗ್ಗೆ ನಾನೂ ತನಿಖೆ ಆಗಲಿ ಅಂತ ಹೇಳ್ತೇನೆ. ಇದನ್ನು ಶೋಭಾ ಕರಂದ್ಲಾಜೆ ಒಪ್ಪಿಕೊಳ್ತಾರಾ ಎಂದು ಪ್ರಶ್ನಿಸಿದರು.
ಶೋಭಾ ಕರಂದ್ಲಾಜೆ ಕೇಂದ್ರ ಸಚಿವರು, ಹೀಗೆ ಸುಳ್ಳು ಹೇಳಬಾರದು. ಇವರು ಹೇಳಿದಂಗೆ ಇ.ಡಿಯವರು ಮಾತು ಕೇಳುತ್ತಾರಾ ಹಾಗಾದ್ರೆ?. ಶೋಭಾ ಕರಂದ್ಲಾಜೆಗಿಂತ ನಮಗೆ ಇ.ಡಿ ಬಗ್ಗೆ ಹೆಚ್ಚು ಗೌರವ ವಿಶ್ವಾಸ ಇದೆ. ಇವರ ಸಂಸ್ಥೆಗಳು ಕ್ಲಾರಿಫಿಕೇಷನ್ ಕೊಟ್ಟರೆ ನಾನೂ ದಾಖಲೆ ಕೊಡ್ತೇನೆ ಎಂದು ತಿಳಿಸಿದರು.
ಶಾಸಕ ಶ್ರೀವತ್ಸ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಮೈಸೂರಿನ ಶಾಸಕ ಒಬ್ಬರಿದ್ದಾರೆ, ಮಾತೆತ್ತಿದರೆ ಸುಳ್ಳು. ಒಳಗಡೆ ಪೂಜೆ ಮಾಡಿಕೊಂಡು ಬಂದು ಹೊರಗಡೆ ಸುಳ್ಳು ಹೇಳಬಾರದು. ಒಳಗಡೆ ಪೂಜೆ ಮಾಡಿ ಹಣೆಗೆ ನಾಮ ಇಟ್ಟುಕೊಂಡ ಮಾತ್ರಕ್ಕೆ ಒಳ್ಳೆಯವರಾಗಲ್ಲ. ಹೊರಗಡೆ ಸುಳ್ಳು ಹೇಳಿದರೆ ದೇವರು ಮೆಚ್ಚಲ್ಲ. ನಾನು ಈಗಲೂ ಸವಾಲು ಹಾಕ್ತೇನೆ. ಒಂದೇ ಒಂದು ಫೈಲ್ ಮಿಸ್ ಆಗಿದ್ರೆ ನಾನು ಚಾಮುಂಡೇಶ್ವರಿಗೆ ಬಂದು ಪ್ರಮಾಣ ಮಾಡ್ತೇನೆ ಎಂದು ಸವಾಲು ಹಾಕಿದರು.
ಅವರೂ ಬೇಕಿದ್ರೆ ಚಾಮುಂಡೇಶ್ವರಿಗೆ ಅಥವಾ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಸವಾಲು ಹಾಕಿ ಎರಡು ದಿನಗಳಾದ್ರೂ ಶ್ರೀವತ್ಸ ಆಗಲಿ, ಬೇರೆಯವರಾಗಲಿ ಇದಕ್ಕೆ ಉತ್ತರ ಕೊಟ್ಟಿಲ್ಲ. ಪಾಪ ಶೋಭಾ ಕರಂದ್ಲಾಜೆಗೆ ಹೊಟ್ಟೆ ಉರಿ. ಯಡಿಯೂರಪ್ಪ ಮತ್ತು ಅವರ ಮಕ್ಕಳು ಒಳ್ಳೆಯವರೇ. ಆದರೆ ಇವರಿಗೆ ನನ್ನ ಕ್ಷೇತ್ರದಲ್ಲಿ ಲೀಡ್ ಬರಲಿಲ್ಲ ಅನ್ನೋ ಹೊಟ್ಟೆ ಉರಿ. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಅವರು ಚಾಮುಂಡೇಶ್ವರಿಗೆ ಬರ್ತಾರೆ ಅಂದ್ರೆ ನಾನು ಈಗಲೇ ಬರ್ತೇನೆ. ಹೆಲಿಕಾಪ್ಟರ್ನಲ್ಲಿ ಬರೋದಕ್ಕಾಗಲ್ಲ, ಗಾಡಿಯಲ್ಲಿ ಬರ್ತೇನೆ. ಶ್ರೀವತ್ಸ ಸುಳ್ಳು ಹೇಳುವುದು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಂಡೂರು ಉಪಚುನಾವಣೆ: ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜನಾರ್ದನ ರೆಡ್ಡಿ-ಶ್ರೀರಾಮುಲು
ಇದನ್ನೂ ಓದಿ: ತಾವೇ ನಾಟಿ ಮಾಡಿದ್ದ ಭತ್ತದ ಗದ್ದೆಗೆ ಭೇಟಿ ; ರೈತರೊಂದಿಗೆ ನಾಟಿ ಕೋಳಿ ಸಾರು, ಮುದ್ದೆ ಸವಿದ ಹೆಚ್ಡಿಕೆ