ETV Bharat / state

ಬೆಂಗಳೂರು: ಸಹೋದ್ಯೋಗಿ ಜೊತೆ ಮಾತನಾಡಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿ ಬಂಧನ - CRIME NEWS - CRIME NEWS

ಹೆಂಡತಿ ಮೇಲೆ ಅನುಮಾನಗೊಂಡು ಚಾಕುವಿನಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಪತಿಯನ್ನು ಬಂಧಿಸಲಾಗಿದೆ.

man-arrest
ಬೆಂಗಳೂರು: ಸಹೋದ್ಯೋಗಿ ಜೊತೆ ಮಾತನಾಡಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿ ಬಂಧನ
author img

By ETV Bharat Karnataka Team

Published : Apr 4, 2024, 1:05 PM IST

Updated : Apr 4, 2024, 1:19 PM IST

ಬೆಂಗಳೂರು: ಸಹೋದ್ಯೋಗಿ ಜೊತೆ ಮಾತನಾಡಿದ್ದಕ್ಕೆ ಅನುಮಾನಗೊಂಡು ಪತ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಆರೋಪದ ಮೇಲೆ ಪತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಜೆ.ಪಿ.ನಗರದ 5ನೇ ಹಂತದಲ್ಲಿರುವ ವಿನಾಯಕ ನಗರದಲ್ಲಿ ಕಳೆದ ಮಾರ್ಚ್ 31 ರಂದು ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಹಿಳೆ ನೀಡಿದ ದೂರು ಆಧರಿಸಿ ಆಕೆಯ ಗಂಡ ನವೀನ್ ಎಂಬಾತನನ್ನು ಪೊಲೀಸರು‌ ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

2012 ರಲ್ಲಿ ನವೀನ್ ಜೊತೆ ಮದುವೆಯಾಗಿದ್ದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ.‌ ಹೆಚ್.ಎಸ್.ಆರ್ ಲೇಔಟ್​​ನಲ್ಲಿ ಹೃತಿಕ್ ರೋಷನ್ ಬ್ರ್ಯಾಂಡ್​​​ನಲ್ಲಿ‌‌ ಫುಡ್ ವಿಭಾಗದಲ್ಲಿ ಕೆಲಸ‌ ಮಾಡುತ್ತಿದ್ದರು. ಪತಿ ಆಟೋ ಚಾಲಕನಾಗಿದ್ದಾನೆ. ಮದುವೆಯಾದ ಆರಂಭದಿಂದಲೂ ತನ್ನ ಮೇಲೆ‌ ಅನುಮಾನ ವ್ಯಕ್ತಪಡಿಸುತ್ತಿದ್ದ.‌ ಫೋನ್​ನಲ್ಲಿ ಯಾರ ಜೊತೆ ಮಾತನಾಡಿದರೂ ಸಂಶಯ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಗಂಡನಿಗೆ ನನ್ನ ಮೇಲೆ ಅನುಮಾನ ಹೆಚ್ಚಾಗಿತ್ತು. ನನ್ನನ್ನು ಸಾಯಿಸಲು 2023 ರ ಸೆಪ್ಟೆಂಬರ್​ನಲ್ಲಿ ಬನ್ನೇರುಘಟ್ಟಕ್ಕೆ ಕರೆದೊಯ್ದು ಕಬ್ಬಿಣದ ರಾಡ್​​ನಿಂದ ಹೊಡೆದು ಹಲ್ಲೆ‌ ಮಾಡಿ, ಸಾಯಿಸಲು ಯತ್ನಿಸಿದ್ದ. ಹೇಗೋ ಅಪಾಯದಿಂದ ಪಾರಾಗಿದ್ದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಗನ ಬಾಳಿನಲ್ಲಿ ಬಂದಿರುವುದಕ್ಕೆ ದೋಷ ಎಂದು ಮಹಿಳೆಗೆ ಬ್ಲ್ಯಾಕ್​ಮೇಲ್​: ಅಮ್ಮ- ಮಗನ ವಿರುದ್ಧ ಪ್ರಕರಣ - Blackmail Case

ಸಹದ್ಯೋಗಿ ಜೊತೆ ಮಾತನಾಡಿದ್ದಕ್ಕೆ ಹಲ್ಲೆ ಆರೋಪ: ಕಳೆದ ಮಾರ್ಚ್ 31ರಂದು ತನ್ನ ಜೊತೆ ಕೆಲಸ‌ ಮಾಡುವ ಸಹೋದ್ಯೋಗಿಯೋರ್ವ ಕೆಲಸ ವಿಚಾರವಾಗಿ ಮ‌ನೆಗೆ ಬಂದು ಮಾತುಕತೆ ನಡೆಸುವ ವೇಳೆ ಪತಿ ನವೀನ್ ಮನೆಗೆ ಬಂದಿದ್ದ.‌ ನಾವಿಬ್ಬರು ಮಾತನಾಡುವುದನ್ನು ಕಂಡು ಇಬ್ಬರು ಸಂಬಂಧ ಹೊಂದಿದ್ದಾರೆಂದು ಆರೋಪಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಜೀವಂತವಾಗಿ ಬಿಡುವುದಿಲ್ಲ ಎಂದು ಹೇಳಿ ಮನೆಯಲ್ಲಿದ್ದ ಚಾಕು ಹಾಗೂ ಕತ್ತರಿಯಿಂದ ತನ್ನ ಕುತ್ತಿಗೆ, ಸೊಂಟ ಹಾಗೂ ದೇಹದ ಇನ್ನಿತರ ಭಾಗಗಳಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಫೈವ್ ಸ್ಟಾರ್ ಹೋಟೆಲ್​ ಬಿಲ್ ಕೊಡಲು ನಕಲಿ‌ ಪೇಮೆಂಟ್ ಸ್ಕ್ರೀನ್​​ ಶಾಟ್ ತೋರಿಸಿದ್ದ ವ್ಯಕ್ತಿ ಬಂಧನ - Fraud Case

Last Updated : Apr 4, 2024, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.