ETV Bharat / state

ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಹಾವೇರಿ ಹಾಲು ಉತ್ಪಾದಕರ ಸಂಘದಿಂದ ಸಿಎಂಗೆ ಪತ್ರ - Milk subsidy

ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ ಏಪ್ರಿಲ್​​​ ತಿಂಗಳವರೆಗೆ 13 ಕೋಟಿ ರೂಪಾಯಿ 89 ಲಕ್ಷ ರೂಪಾಯಿ ಹಾಲಿನ ಪ್ರೋತ್ಸಾಹ ಧನ ಬಾಕಿ ಇದ್ದು, ತತಕ್ಷಣ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಹಾವೇರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿದ್ದಾರೆ.

author img

By ETV Bharat Karnataka Team

Published : May 21, 2024, 11:31 AM IST

Updated : May 21, 2024, 1:10 PM IST

MILK SUBSIDY
ಹಾಲು ಪ್ರೋತ್ಸಾಹ ಧನ ಬಿಡುಗಡೆಗೆ ಸಿಎಂಗೆ ಪತ್ರ (ETV Bharat)
ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಮನವಿ (ETV Bharat)

ಹಾವೇರಿ: ರಾಜ್ಯದಲ್ಲಿ 2023 ರಲ್ಲಿ ಕಾಣಿಸಿಕೊಂಡ ಬರಗಾಲ ಅಪಾರ ಹಾನಿ ಉಂಟುಮಾಡಿದೆ. ರಾಜ್ಯದಲ್ಲಿ ಬರಗಾಲದಿಂದ ಅನ್ನದಾತ ತತ್ತರಿಸಿ ಹೋಗಿದ್ದಾನೆ. ಅದರಲ್ಲೂ ಎರಡುಬಾರಿ ಮೂರು ಬಾರಿ ಬಿತ್ತನೆ ಮಾಡಿದ ರೈತನಿಗೆ ಮಳೆರಾಯನ ಮುನಿಸು ಇನ್ನಷ್ಟು ಸಂಕಷ್ಟ ತಂದಿತ್ತು. ಆ ಸಂದರ್ಭ ರಾಜ್ಯ ಸರ್ಕಾರ ರಾಜ್ಯದಲ್ಲಿನ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿತು. ಅದರಂತೆ ಬರಪೀಡಿತ ತಾಲೂಕುಗಳಿಗೆ ಬರಪರಿಹಾರ ನೀಡುವಲ್ಲಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಪರಸ್ಪರ ಆರೋಪಗಳು ಮಾಡುತ್ತಿವೆ.

ಕೊನೆಗೂ ರಾಜ್ಯ ಸರ್ಕಾರ ಪ್ರತಿ ರೈತನಿಗೆ ಎರಡು ಸಾವಿರ ರೂಪಾಯಿ ಮಧ್ಯಂತರ ಪರಿಹಾರ ಘೋಷಣೆ ಮಾಡಿ ರೈತರ ಖಾತೆಗಳಿಗೆ ಹಣ ಹಾಕಿತು. ಆದರೆ ಇದು ರಾವಣನ ಹೊಟ್ಟಿಗೆ ಅರೇಕಾಸಿನ ಮಜ್ಜಿಗೆಯಂತೆ ರೈತರಿಗೆ ಸಾಕಾಗಲಿಲ್ಲಾ. 'ಸರ್ಕಾರ ತಾನು ಘೋಷಣೆ ಮಾಡಿದ ಗ್ಯಾರಂಟಿಗಳಿಗೆ ಹಣ ಹೊಂದಿಸುತ್ತಿದೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲಾ' ಎಂದು ರೈತರು ಪ್ರತಿಭಟನೆಯ ಹಾದಿ ಹಿಡಿದರು. ಸರ್ಕಾರ ರೈತರಿಗೆ ಸಮರ್ಪಕ ಬರಪರಿಹಾರ ನೀಡುವುದಿರಲಿ ತಾನೇ ಘೋಷಣೆ ಮಾಡಿದಂತೆ ರೈತರ ಹಾಲಿಗೆ ಪ್ರೋತ್ಸಾಹ ಧನ ನೀಡುವುದನ್ನು ನಿಲ್ಲಿಸಿದೆ ಎಂದು ರೈತರು ಆರೋಪಿಸಿದ್ದಾರೆ.

ಸಿಎಂಗೆ ಬರೆದ ಪತ್ರ
ಸಿಎಂಗೆ ಬರೆದ ಪತ್ರ (ETV Bharat)

ರಾಜ್ಯ ಸರ್ಕಾರ ಹಾಲು ಉತ್ಪಾದನೆ ಮಾಡುವ ರೈತರಿಗೆ ಪ್ರತಿ ಲೀಟರ್‌ಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಕಳೆದ ಸೆಪ್ಟಂಬರ್ ತಿಂಗಳಿಂದ ಜನಸಾಮಾನ್ಯ ರೈತರಿಗೆ ಪ್ರೋತ್ಸಾಹಧನ ಬಂದಾಗಿದೆ. ಎಸ್ಸಿಎಸ್ಟಿ ರೈತರಿಗೆ ಡಿಸೆಂಬರ್ ತಿಂಗಳಿಂದ ಪ್ರೋತ್ಸಾಹಧನ ಬಂದಾಗಿದೆ. ಹಾವೇರಿ ಜಿಲ್ಲೆಯೊಂದರಲ್ಲಿ ಸುಮಾರು 13 ಕೋಟಿ 89 ಲಕ್ಷ ರೂಪಾಯಿ ಹಣ ಪ್ರೋತ್ಸಾಹಧನ ಸಿಗಬೇಕಿದೆ. ಆದರೆ ಕಳೆದ ಏಳು ತಿಂಗಳಿಂದ ರೈತರ ಹಾಕುವ ಹಾಲಿಗೆ ಪ್ರೋತ್ಸಾಹಧನ ಸಿಗುತ್ತಿಲ್ಲಾ.

ಇದು ಹೈನುಗಾರಿಕೆ ಮಾಡಿಕೊಂಡಿರುವ ರೈತರಿಗೆ ಸಾಕಷ್ಟು ಅನಾನುಕೂಲ ಉಂಟುಮಾಡಿದೆ. ಈ ಹಣದಿಂದ ನಾವು ದನಗಳಿಗೆ ಆಹಾರ ತರುತ್ತಿದ್ದೆವು. ಈಗ ಹಣ ಸಿಗದಿರುವದರಿಂದ ನಾವು ಹಸುಗಳಿಗೆ ಎಲ್ಲಿಂದ ಮೇವು ತರಬೇಕು ಎಂದು ರೈತರು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರಸ್ತುತ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗುತ್ತಿದೆ. ಬಿತ್ತನೆ ಮಾಡಲು ಜಮೀನುಗಳನ್ನು ಹದಮಾಡಿಕೊಂಡು ಇಟ್ಟಿದ್ದೇವೆ. ಸರ್ಕಾರ ಈ ಪ್ರೋತ್ಸಾಹಧನ ನೀಡಿದರೆ ಅದರಿಂದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗುತ್ತೆ ಎಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಈ ಮಧ್ಯ ಹಾವೇರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೇಮುಲ್) ಅಧ್ಯಕ್ಷ ಬಸವರಾಜ್ ಅರಬಗೊಂಡ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಹಾವೇರಿ ಜಿಲ್ಲೆಯ ಪ್ರಸ್ತುತ ಏಪ್ರಿಲ್​ ತಿಂಗಳವರೆಗೆ 13 ಕೋಟಿ 89 ಲಕ್ಷ ರೂಪಾಯಿ ಬಾಕಿ ಇದ್ದು ತಕ್ಷಣ ಪ್ರೋತ್ಸಾಹಧನ ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತೆ ಎಂದು ಬರೆದಿದ್ದಾರೆ.

ಈ ಕುರಿತಂತೆ ಮಾತನಾಡಿದ ಸಂಘದ ಎಂಡಿ ಟಿಟಿ ಕಳಸದ ಹಾವೇರಿ ಜಿಲ್ಲೆಯ ಹಾಲು ಒಕ್ಕೂಟದಲ್ಲಿ ಸುಮಾರು 20 ಸಾವಿರ ಹೈನುಗಾರರಿದ್ದು ಪ್ರತಿ ದಿನ 1 ಲಕ್ಷ 50 ಸಾವಿರ ಲೀಟರ್​ ಹಾಲು ಒಕ್ಕೂಟಕ್ಕೆ ಬರುತ್ತಿದೆ. ಪ್ರಸ್ತುತ ಹಾಲು ಒಕ್ಕೂಟಕಕ್ಕೆ 13 ಕೋಟಿ 89 ಲಕ್ಷ ರೂಪಾಯಿ ಬಾಕಿ ಹಣವಿದ್ದು ಅದನ್ನು ಸರ್ಕಾರ ನೀಡಿದರೆ ಆದಷ್ಟು ಬೇಗ ಹೈನುಗಾರರಿಗೆ ವಿತರಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: ಮೂಲಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್​ಗಳ ಡೆವಲಪರ್​ಗಳಿಗೆ ನೋಟಿಸ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ - DCM DK Sivakumar

Last Updated : May 21, 2024, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.