ಚಿಕ್ಕೋಡಿ: ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರಿಗೆ ಮದ್ಯ ಕುಡಿಯುವ ಚಟವಿದ್ದರೆ ಕುಡಿಯುವುದು ನಿಲ್ಲಿಸಲಿ. ಇದರಿಂದ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಟೀಕಿಸಿದರು.
ಗುರುವಾರ ಚಿಕ್ಕೋಡಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಬೆಲೆ ಏರಿಕೆ, ನೋಟ್ ಬ್ಯಾನ್, ಕೊರೋನಾದಲ್ಲಿ ಸಾವನ್ನಪ್ಪಿರುವ ಪತ್ನಿಯರ ಹಾಗೂ ದೆಹಲಿಯಲ್ಲಿ ನಡೆದ ರೈತ ಹೋರಾಟದಲ್ಲಿ ಮೃತಪಟ್ಟವರ ರೈತರ ಪತ್ನಿಯರ ಮಂಗಳಸೂತ್ರವನ್ನು ಮೋದಿ ಸರ್ಕಾರ ಕಸಿದುಕೊಂಡಿದೆ. ದೇಶದಲ್ಲಿ ಬೆಲೆ ಏರಿಕೆಯಿಂದ ಮಹಿಳೆಯರು ಮಂಗಳ ಸೂತ್ರ ಮಾರಿದ್ದಾರೆ. ಈ ಮೂಲಕ ಲಕ್ಷಾಂತರ ಮಹಿಳೆಯರ ಮಂಗಳ ಸೂತ್ರ ಕಸಿಯಲಾಗಿದೆ. ಮಂಗಳಸೂತ್ರ ಕಸಿದುಕೊಂಡಿದ್ದು ಮೋದಿ ಸರ್ಕಾರ. ಬೇರಾವುದೇ ಸರ್ಕಾರ ಅಲ್ಲ ಎಂದು ದೂರಿದರು.
ಗ್ಯಾರಂಟಿ ತಂದಿದ್ದಕ್ಕೆ ಬಿಜೆಪಿ, ಜೆಡಿಎಸ್ಗೆ ಹೊಟ್ಟೆಕಿಚ್ಚು: ಗ್ಯಾರಂಟಿಗಳು ಜನರ ಜೀವನ ಬದಲಾಯಿಸಿವೆ. ಹೀಗಾಗಿ ಬಿಜೆಪಿ, ಜೆಡಿಎಸ್‌ನವರಿಗೆ ಹೊಟ್ಟೆಕಿಚ್ಚು. ಕರ್ನಾಟಕದಲ್ಲಿ ಎರಡು ಮಾಡೆಲ್ ಇದೆ. ಒಂದು ಕಾಂಗ್ರೆಸ್ ಗ್ಯಾರಂಟಿ ಮಾಡೆಲ್. ಇನ್ನೊಂದು ಭಾರತೀಯ ಚೊಂಬು ಪಾರ್ಟಿಯ ಮಾಡೆಲ್. ಬಿಜೆಪಿ, ಜೆಡಿಎಸ್ ಡಿಎನ್ಎ ರೈತರ, ಯುವಕರ,ಮಹಿಳೆಯರ, ಬಡವರ ವಿರೋಧಿಯಾಗಿದೆ. ಬಡ ಜನರಿಗೆ ಗ್ಯಾರಂಟಿಯ ಲಾಭ ಸಿಕ್ಕಿದೆ ಎಂದು ಹೇಳಿದರು.