ETV Bharat / state

ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ: ಜಲಪ್ರಳಯದ ಬಗ್ಗೆ ಕೋಡಿಶ್ರೀ ಭವಿಷ್ಯ - KODIMATH SWAMIJI PREDICTION

ಕ್ರೋಧಿ ನಾಮ ಸಂವತ್ಸರ ನಡೆದಿದೆ. ಈ ಸಂವತ್ಸರ ಒಳಿತಿಗಿಂತ ಕೆಡಕು ಹೆಚ್ಚು ಮಾಡುತ್ತದೆ. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

author img

By ETV Bharat Karnataka Team

Published : Jun 25, 2024, 6:25 PM IST

SHIVANANDA SHIVAYOGI RAJENDRA  DHARWAD  SIGNIFICANCE OF YEARS
ಕೋಡಿಮಠದ ಸ್ವಾಮೀಜಿ ಹೇಳಿಕೆ (ETV Bharat)
ಕೋಡಿಮಠದ ಸ್ವಾಮೀಜಿ (ETV Bharat)

ಧಾರವಾಡ: ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ ನಡೆದಿದೆ. ಈ ಸಂವತ್ಸರ ಒಳಿತಿಗಿಂತ ಕೆಡಕು ಹೆಚ್ಚು ಮಾಡುತ್ತದೆ. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನಂತ ನಾನು ಶ್ರಾವಣದಲ್ಲಿ ಹೇಳುವೆ. ಸುರಿದಲ್ಲೊಯೇ ಮಳೆ ಸುರಿಯುತ್ತಿದೆ. ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಅತಂತ್ರದಲ್ಲೇ ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ‌. ಇನ್ನೂ ಅಂಗಡಿ ಒಪನ್ ಆಗಿಲ್ಲ, ವ್ಯಾಪಾರ ಶುರುವಾಗಲಿ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ ಎಂದರು.

ಅದೆಲ್ಲದರ ಬಗ್ಗೆ ಸಮಗ್ರವಾಗಿ ಶ್ರಾವಣದಲ್ಲಿ ಹೇಳುವೆ. ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಅಂತಾ ಶ್ರಾವಣದಲ್ಲಿ ಹೇಳುವೆ. ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರ ಕರ್ಣನಿಂದ ಕಟ್ ಮಾಡಿಸಿದರು. ಈಗ ಅಭಿಮನ್ಯುವಿನ ಹೆಂಡತಿ ಪ್ರವೇಶ ಸಂಸತ್​ನಲ್ಲಿ ಮಾಡ್ತಾಳೆ. ಆದರೆ ದುರ್ಯೋಧನನ ತೊಡೆ ಒಡೆಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ ಎಂದರು.

ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ ದೊಡ್ಡವರಿಗೆ ನೋವು, ತಾಪ, ದುಃಖ ಆಗಲಿದೆ. ಕರೆಯದೆ ಬರುವವನು ಕೋಪ, ಬರೆಯದೇ ಓದುವವನು ಕಣ್ಣು, ಬರಗಾಲಿನಲ್ಲಿ ನಡೆಯುವವನ ಮನಸ್ಸು ಸೇರಿ ಈ ಮೂರು ನಿಯಂತ್ರಣದಲ್ಲಿಡಬೇಕು. ದುಡ್ಡು, ಅಧಿಕಾರ ಮುಖ್ಯ ಅಂತಾ ಹೊರಟಿದ್ದಾರೆ. ಅಧಃಪತನಕ್ಕೆ ಅದೆ ಕಾರಣ ಎಂದರು.

ಓದಿ: ಹೆಚ್ಚುವರಿ ಹಾಲಿಗೆ 2 ರೂಪಾಯಿ ನಿಗದಿಪಡಿಸಲಾಗಿದೆಯೇ ಹೊರತು ಹಾಲಿನ ಬೆಲೆ ಏರಿಸಿಲ್ಲ: ಸಿಎಂ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.