ETV Bharat / state

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಗ್ರಾಮಸ್ಥರಿಗೆ ಬೋರ್​ವೆಲ್ ಗಿಫ್ಟ್ ಕೊಟ್ಟ ಅಭಿಮಾನಿ! - Sudeep Birthday Special

author img

By ETV Bharat Karnataka Team

Published : Sep 2, 2024, 3:01 PM IST

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ, ಕಿಚ್ಚ ಸುದೀಪ್​ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿಯೊಬ್ಬ ಗ್ರಾಮಸ್ಥರಿಗೆ ತನ್ನ ಸ್ವಂತ ಹಣ‌ ಖರ್ಚು ಮಾಡಿ ಬೋರ್‌ವೆಲ್ ಕೊರೆಸುವ ಮೂಲಕ ಗಮನ ಸೆಳೆದಿದ್ದಾನೆ.

SUDEEP BIRTHDAY SPECIAL
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಗ್ರಾಮಸ್ಥರಿಗೆ ಬೋರ್​ವೆಲ್ ಗಿಫ್ಟ್ ಕೊಟ್ಟ ಅಭಿಮಾನಿ (ETV Bharat)

ಬೆಳಗಾವಿ: ತಮ್ಮ ನೆಚ್ಚಿನ ಸಿನಿಮಾ ನಟರ ಹುಟ್ಟುಹಬ್ಬದ ದಿನ ಅಭಿಮಾನಿಗಳು ಕಟೌಟ್​ಗೆ ಹಾಲು ಸುರಿಯುವುದು, ಆ ಕಟೌಟ್​ಗೆ ಬೃಹದಾಕಾರದ ಹೂವಿನ ಮಾಲೆ ಹಾಕಿ ಆಚರಿಸುವುದನ್ನು ನಾವು, ನೀವೆಲ್ಲಾ ನೋಡಿದ್ದೇವೆ. ಆದರೆ, ಬೆಳಗಾವಿಯಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬ ತನ್ನ ಗ್ರಾಮದ ಜನ‌ರ ನೀರಿನ ಭವಣೆ ನೀಗಿಸಲು ಸ್ವಂತ ಖರ್ಚಿನಲ್ಲಿ ಬೋರ್​ವೆಲ್​ ಕೊರೆಸುವ ಮೂಲಕ ಅಭಿಮಾನ ಮೆರೆದಿದ್ದಾನೆ.

ಹೌದು, ಬೆಳಗಾವಿ ತಾಲೂಕಿನ ವಾಘ್ವಾಡೆ ಗ್ರಾಮದ ಸುದೀಪ್ ಅವರ ಅಭಿಮಾನಿ ಆದಿ ನಾಯಕ ಎಂಬ ಯುವಕ ಬೋರ್​ವೆಲ್ ಕೊರಿಸಿ ಗಮನ ಸೆಳೆದಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತನ್ನ ನೆಚ್ಚಿನ ಹೀರೋನ ಬರ್ತ್ ಡೇ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಮಾದರಿ ಕಾರ್ಯಕ್ಕೆ ಕೈ ಹಾಕಿದ್ದಾರೆ. ಒಂದು ಲಕ್ಷ ರೂ. ‌ಸ್ವಂತ ಹಣ‌ ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ವಿಶೇಷವಾಗಿ ಕಿಚ್ಚನ ಬರ್ತ್ ಡೇ ಆಚರಿಸಿರುವ ಆದಿ ನಾಯಕ್, ಬೋರ್‌ವೆಲ್ ಆರಂಭಕ್ಕೂ ಮುನ್ನವೇ ಕೇಕ್ ಕತ್ತರಿಸಿ ಕಿಚ್ಚನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಆದಿ ನಾಯಕ ಕಾರ್ಯಕ್ಕೆ ಇಡೀ ಗ್ರಾಮಸ್ಥರು ಶ್ಲಾಘಿಸಿದ್ದು, ಈ ಬೋರ್‌ವೆಲ್‌ನಿಂದ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ಸುದೀಪ್​: ಗಿಫ್ಟ್ ಬದಲು ಸಮಾಜಮುಖಿ ಕೆಲಸಕ್ಕೆ ಮನವಿ, ವಿಡಿಯೋ ನೋಡಿ - Sudeep Birthday Celebration

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯ ಚಕ್ರವರ್ತಿ, ಪೈಲ್ವಾನ್, ಹೆಬ್ಬುಲಿ ಹೀಗೆ ಹಲವಾರು ಬಿರುದುಗಳಿಂದ ಕರೆಯಿಸಿಕೊಳ್ಳುವ ನಟ ಸುದೀಪ್​​ ಅವರಿಂದು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೊದಲೇ ಅವರು ತಿಳಿಸಿದಂತೆ ಜಯನಗರ ಎಂಇಎಸ್​​ ಗ್ರೌಂಡ್​​ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಇಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದರು. 50,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇತ್ತು. ಅದರಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.