ETV Bharat / state

ಗೀತಾ ಶಿವರಾಜ್​ಕುಮಾರ್​ ನನ್ನ ಸಹೋದರಿ ಇದ್ದಂತೆ, ವೈಯಕ್ತಿಕ ಟೀಕೆ ಮಾಡಲ್ಲ: ಈಶ್ವರಪ್ಪ - K S Eshwarappa

ಗೀತಾ ಶಿವರಾಜ್​ಕುಮಾರ್ ಅವರನ್ನು ವೈಯಕ್ತಿಕವಾಗಿ ಟೀಕಿಸಲು ನನ್ನ ಬಳಿ ಯಾವುದೇ ಅಸ್ತ್ರ ಇಲ್ಲ ಎಂದು ಶಿವಮೊಗ್ಗ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

k-s-eshwarappa-reaction-on-geetha-shivarajkumar-over-his-statement
ಗೀತಾ ಶಿವರಾಜ್​ಕುಮಾರ್​ ನನ್ನ ಸಹೋದರಿ ಇದ್ದಂತೆ, ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ: ಈಶ್ವರಪ್ಪ
author img

By ETV Bharat Karnataka Team

Published : Apr 24, 2024, 4:27 PM IST

Updated : Apr 24, 2024, 5:13 PM IST

ಈಶ್ವರಪ್ಪ

ಶಿವಮೊಗ್ಗ: ಗೀತಾ ಶಿವರಾಜ್​ ಕುಮಾರ್​ ಅವರನ್ನು ನನ್ನ ಸಹೋದರಿ ಅಂತಾ ಹೇಳಿದ್ದೇನೆ. ವೈಯಕ್ತಿಕವಾಗಿ ಅವರ ಮೇಲೆ ಟೀಕೆ ಮಾಡಲು ನನ್ನ ಬಳಿ ಯಾವುದೇ ಅಸ್ತ್ರ ಇಲ್ಲ ಎಂದು ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್​.ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪನವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆ ಹೊಂದಾಣಿಕೆ ಮಾಡಿಕೊಂಡು ವಿಜಯೇಂದ್ರನನ್ನು ಗೆಲ್ಲಿಸಿಕೊಂಡರು. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸುವ ಪ್ರಯತ್ನ ನಡೆಸಿದ್ದರು. ಅದಕ್ಕೆ ಕಾಂಗ್ರೆಸ್​ನಿಂದ ಡಮ್ಮಿ ಕ್ಯಾಂಡಿಡೇಟ್​ ಹಾಕಿಸಿಕೊಂಡು ಬಂದರು. ಶಿವಮೊಗ್ಗ ಕ್ಷೇತ್ರದಲ್ಲಿ ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್​ನವರು ನನಗೆ ಬೆಂಬಲ ಕೊಟ್ಟಿದ್ದಾರೆ. ಅದರಿಂದಾಗಿ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದೇನೆ. ಇದರಲ್ಲಿ ನಾನು ಗೀತಾ ಶಿವರಾಜ್​ಕುಮಾರ್​ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದೇನೆ ಎಂದು ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಗೀತಾ ಶಿವರಾಜ್​ಕುಮಾರ್ ಅವರ ಜೊತೆ ಓಡಾಡುತ್ತಿರುವ ಅನೇಕ ಕಾಂಗ್ರೆಸಿಗರು, ಬಿ.ವೈ.ರಾಘವೇಂದ್ರ ಅವರೊಂದಿಗೆ ಓಡಾಡುತ್ತಿರುವ ಬಿಜೆಪಿಯ ಪ್ರಮುಖ ಕಾರ್ಯಕರ್ತರು "ನಮ್ಮ ತಾಯಿ ಆಣೆ ನಮ್ಮ ವೋಟ್​ ನಿಮಗೆ" ಎಂದು ಫೋನ್​ ಮಾಡಿ ಹೇಳುತ್ತಿದ್ದಾರೆ. ಅವರು ಈಶ್ವರಪ್ಪ ಎಂದು ವೈಯಕ್ತಿಕವಾಗಿ ಬೆಂಬಲ ಕೊಡುತ್ತಿಲ್ಲ. ಹಿಂದುತ್ವ ಉಳಿಸುತ್ತಾರೆ, ಅಪ್ಪ-ಮಕ್ಕಳ ಹಿಡಿತದಿಂದ ಪಕ್ಷವನ್ನು ಹೊರಗೆ ತರುತ್ತಾರೆ, ರಾಜ್ಯದ ಎಲ್ಲಾ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿದ್ದಾರೆ ಎಂದು ನನಗೆ ವೋಟ್​ ಕೊಡುತ್ತಾರೆ, ನನ್ನ ಪರವಾಗಿ ನಿಲ್ಲುತ್ತಾರೆ ಎಂದರು.

ಗೆದ್ದ ತಕ್ಷಣ ನನ್ನ ತಾಯಿ ಬಳಿ ಹೋಗುತ್ತೇನೆ: ಬಿಜೆಪಿ ನನ್ನದೇ ಪಕ್ಷ. ನಾನು ತಪಸ್ಸು ಮಾಡಿ ಕಟ್ಟಿರೋದು. ನನ್ನ ಜೊತೆಗೆ ಡಿ.ಎಸ್​.ಶಂಕರಮೂರ್ತಿ, ರಾಮಚಂದ್ರೇಗೌಡರು ಸೇರಿದಂತೆ ಇನ್ನೂ ಅನೇಕ ಹಿರಿಯರಿದ್ದಾರೆ. ಸದ್ಯ ಮೂಲೆಗೆ ತಳ್ಳಿರುವ ಸಿ.ಟಿ.ರವಿ, ಪ್ರತಾಪ್​ ಸಿಂಹ, ನಳೀನ್ ಕುಮಾರ್​ ಕಟೀಲ್​, ಬಸನಗೌಡ ಪಾಟೀಲ್​ ಯತ್ನಾಳ್​, ಅನಂತ್​ಕುಮಾರ್​ ಹೆಗ್ಡೆ ಅವರು ಈ ಪಕ್ಷ ಕಟ್ಟಿದ್ದಾರೆ. ಇವರೆಲ್ಲರೂ ಬಿಜೆಪಿಯನ್ನು ತಾಯಿ ಎಂದುಕೊಂಡಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದ ತಕ್ಷಣ ನನ್ನ ತಾಯಿ ಬಳಿ ಹೋಗುತ್ತೇನೆ, ಗೆದ್ದ ತಕ್ಷಣ ನರೇಂದ್ರ ಮೋದಿಯವರ ಕೈ ಎತ್ತುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಭಾರತ್ ಜೋಡೋದಲ್ಲಿ ಭಾಗವಹಿಸಿದ್ದ ಡಾ.ಸುಶ್ರುತ್ ಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ - Sushruth Gowda Joins BJP

Last Updated : Apr 24, 2024, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.