ETV Bharat / state

ಹು-ಧಾ ಪೊಲೀಸರ ಭರ್ಜರಿ ಕಾರ್ಯಾಚರಣೆ: 96 ಲಕ್ಷ ನಗದು, ಲಕ್ಷಾಂತರ ಮೌಲ್ಯದ ಗಾಂಜಾ ವಶ - Interstate Ganja Seller - INTERSTATE GANJA SELLER

ಹುಬ್ಬಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಂತಾರಾಜ್ಯ ಗಾಂಜಾ ಮಾರಾಟಗಾರನೋರ್ವನನ್ನು ಬಂಧಿಸಿರುವ ಶಹರ್​ ಠಾಣಾ ಪೊಲೀಸರು, ಆತನಿಂದ 96.5 ಲಕ್ಷ ನಗದು ಹಾಗೂ ಲಕ್ಷಾಂತರ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

INTERSTATE GANJA SELLER
ವಶಪಡಿಸಿಕೊಂಡ ಸ್ವತ್ತು ಜೊತೆ ಬಂಧಿತ ಆರೋಪಿ (ETV Bharat)
author img

By ETV Bharat Karnataka Team

Published : Jul 31, 2024, 1:31 PM IST

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ (ETV Bharat)

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ರಾಜಸ್ಥಾನ ಮೂಲದ ಅಂತಾರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧಿಸುವಲ್ಲಿ ಶಹರ್​ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.

Interstate ganja seller arrested in Hubli
ವಶಪಡಿಸಿಕೊಳ್ಳಲಾದ ಸ್ವತ್ತು (ETV Bharat)

ಇಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ವಿವರ ನೀಡಿದ ಅವರು, ರಾಜಸ್ಥಾನ ಮೂಲದ ವ್ಯಕ್ತಿಯೋರ್ವ ನಗರದ ರೈಲ್ವೆ ನಿಲ್ದಾಣ ಬಳಿಯಿರುವ ಖಾಸಗಿ ಹೋಟೆಲ್​ ಬಳಿ ಮಾರಾಟ ಮಾಡಲು ಬರುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಎಸಿಪಿ ದಕ್ಷಿಣ ಅವರ ನೇತೃತ್ವದಲ್ಲಿ ಶಹರ್​ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್​ ಎಮ್.ಎಮ್. ತಹಶೀಲ್ದಾರ್​​, ಪಿಎಸ್ಐ ಮಾರುತಿ ಅವರನ್ನು ಒಳಗೊಂಡ ತಂಡ ಮಾಹಿತಿ ಬಂದ ಸ್ಥಳದ ಮೇಲೆ ದಾಳಿ ಮಾಡಿ ಬಂಧನ ಮಾಡಿದ್ದಾರೆ.

ರಾಜಸ್ಥಾನ ಮೂಲದ ಓಂಪ್ರಕಾಶ್ ವೀರಮಾರಾಮ ಬಾರಮೇರ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 85,000 ರೂ. ಮೌಲ್ಯದ 888 ಗ್ರಾಂ ಗಾಂಜಾ, 9 ಲಕ್ಷ ರೂ. ಮೌಲ್ಯದ ಒಂದು ಕಾರು, 50,000 ರೂ. ಮೌಲ್ಯದ ಒಂದು ಐಫೋನ್‌, ವಿವಿಧ ಬ್ಯಾಂಕಿನ 30 ಎಟಿಎಂ, ವಿವಿಧ ಬ್ಯಾಂಕಿನ 36 ಚೆಕ್ ಬುಕ್, 4 ಪಾಸ್ ಬುಕ್, 9 ಪಾನ್ ಕಾರ್ಡ್, 7 ವಿವಿಧ ರಬ್ಬರ್ ಸ್ಟಾಂಪ್, 6 ಸ್ಟಾಪಿಂಗ್ ಮಷಿನ್​ಗಳನ್ನು ಹಾಗೂ 96,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಬಂಧಿತನಿಂದ 1,06,85,000 ರೂ. ಮೌಲ್ಯದ ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜಸ್ಥಾನದಲ್ಲಿ ನಕಲಿ ಆಧಾರ್​ ಕಾರ್ಡ್ ಮಾಡಿಸಿಕೊಂಡಿದ್ದ ಬಂಧಿತ ಆರೋಪಿಯು, ಈ ಮೊದಲು ಗೋವಾದಲ್ಲಿ ಗಾಂಜಾ ದಂಧೆಗೆ ಇಳಿಯಲು ಮೂರು ತಿಂಗಳು ಕಾಲ ಆತ ತರಬೇತಿ ಪಡೆದಿರುವ ಮಾಹಿತಿ ಇದೆ. ಕೇಶ್ವಾಪೂರ ವ್ಯಾಪ್ತಿಯಲ್ಲಿ ಆತ ವಾಸವಾಗಿದ್ದ. ಯಾವುದೇ ಕೆಲಸದಲ್ಲಿ ತೊಡಗಿಲ್ಲ. ಈತನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಮಾಡಲಾಗುವುದು ಎಂದು ಕಮಿಷನರ್ ತಿಳಿಸಿದರು.

ಶಹರ್​ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಅವಳಿ ನಗರದಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ 12ಕ್ಕೂ ಹೆಚ್ಚು ಪ್ರಮುಖ ಪ್ರಕರಣ ದಾಖಲಿಸಿ 61 ಗಾಂಜಾ ಪೆಡ್ಲರ್​ಗಳನ್ನು ಬಂಧಿಸಲಾಗಿದೆ. 315ಕ್ಕೂ ಹೆಚ್ಚು ಗಾಂಜಾ ಚಟಕ್ಕೆ ಅಂಟಿಕೊಂಡವರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಮೂಲಕ ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವುದಾಗಿ ಹೇಳಿದರು.

ಇದನ್ನೂ ಓದಿ: ಬೆಂಗಳೂರು: ಬಾರ್​ನಲ್ಲಿ ಮನಸೋ ಇಚ್ಛೆ ತಲ್ವಾರ್ ಬೀಸಿದ್ದ ಮೂವರ ಬಂಧನ - three youth Arrested

ETV Bharat Logo

Copyright © 2025 Ushodaya Enterprises Pvt. Ltd., All Rights Reserved.