ETV Bharat / state

ಜಾರಕಿಹೊಳಿ, ಯತ್ನಾಳ್, ಸಿದ್ದೇಶ್ವರ್​ ಅವರ ವಿಚಾರಗಳ ಬಗ್ಗೆ ಪಕ್ಷದಲ್ಲಿ ಆಂತರಿಕ ಚರ್ಚೆ ಅಗತ್ಯ: ಬೆಲ್ಲದ್​ - Arvind Bellad

author img

By ETV Bharat Karnataka Team

Published : Aug 12, 2024, 5:30 PM IST

Updated : Aug 12, 2024, 5:41 PM IST

ಒಂದು ಪಕ್ಷವೆಂದಾಗ ಬೇರೆ ಬೇರೆ ವಿಚಾರಗಳು ಇದ್ದೇ ಇರುತ್ತವೆ. ಅವರು ಹೇಳುವ ಕೆಲವು ವಿಚಾರಗಳು ಸರಿ ಇವೆ. ಅವುಗಳ ಬಗ್ಗೆ ಪಕ್ಷದೊಳಗೆ ಚರ್ಚೆ ಆಗಬೇಕಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್​ ಹೇಳಿದರು.

ಅರವಿಂದ ಬೆಲ್ಲದ್​
ಅರವಿಂದ ಬೆಲ್ಲದ್​ (ETV Bharat)
ಅರವಿಂದ ಬೆಲ್ಲದ್​ ಪ್ರತಿಕ್ರಿಯೆ (ETV Bharat)

ಧಾರವಾಡ: ರಮೇಶ್​ ಜಾರಕಿಹೊಳಿ, ಬಸನಗೌಡ ಪಾಟೀಲ್​ ಯತ್ನಾಳ್ ಮತ್ತು ಸಿದ್ದೇಶ್ವರ್​ ಅವರ ವಿಚಾರಗಳ ಬಗ್ಗೆ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡುವ ಅವಶ್ಯಕತೆ ಇದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್​ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರ ಮುಂದೆ ಏನೂ ಹೇಳುವುದಿಲ್ಲ, ಆಂತರಿಕವಾಗಿ ಚರ್ಚೆ ಮಾಡುತ್ತೇವೆ ಎಂದರು.

ಒಂದು ಪಕ್ಷ ಎಂದಾಗ ಬೇರೆ ಬೇರೆ ವಿಚಾರಗಳು ಇದ್ದೇ ಇರುತ್ತವೆ. ಅವರು ಹೇಳುವ ಕೆಲ ವಿಚಾರಗಳು ಸರಿ ಇವೆ. ಅವುಗಳ ಬಗ್ಗೆ ಪಕ್ಷದೊಳಗೆ ಚರ್ಚೆ ಆಗಬೇಕಿದೆ. ಈ ವಿಚಾರಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ. ಎಲ್ಲವನ್ನೂ ಬಗೆಹರಿಸುವ ಪ್ರಯತ್ನ ಆಗುತ್ತದೆ. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಕಾಂಗ್ರೆಸ್‌ನಲ್ಲಿ ಒಂದು ರೀತಿಯ ಅಸಮಾಧಾನ ಇದ್ದೇ ಇದೆ. ಸತೀಶ್​ ಜಾರಕಿಹೊಳಿ, ಡಿ.ಕೆ.ಶಿವಕುಮಾರ್​ ಮತ್ತು ಪರಮೇಶ್ವರ್​ ನಾವ್ಯಾಕೆ ಸಿಎಂ ಆಗಬಾರದು ಎನ್ನುತ್ತಿದ್ದಾರೆ. ಇದು ಎಲ್ಲ ಪಕ್ಷಗಳಲ್ಲಿ ಇದ್ದಿದ್ದೇ ಎಂದರು.

ಮುಡಾ ಹಗರಣ ವಿರುದ್ಧ ಈಗಾಗಲೇ ಮೊದಲನೇ ಹಂತದ ಹೋರಾಟ ನಡೆದಿದೆ. ಎರಡನೇ ಹಂತದ ಹೋರಾಟ ರಾಜ್ಯಪಾಲರ ಅಂಗಳದಲ್ಲಿದೆ. ಕಾನೂನು ಪ್ರಕಾರ ಅವರು ಸರಿಯಾಗಿ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಈ ಹಿಂದೆ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಿದ್ದಾಗ ಯಡಿಯೂರಪ್ಪನವರು ಸಿಎಂ ಆಗಿದ್ದರು. ಆಗ ಭಾರದ್ವಾಜ್ ಸ್ಪಷ್ಟನೆ ಕೇಳದೆ ಕ್ರಮಕ್ಕೆ ಮುಂದಾಗಿದ್ದರು. ಆದರೆ, ಈಗಿನ ರಾಜ್ಯಪಾಲರು ಸಿದ್ದರಾಮಯ್ಯನವರಿಗೆ ಸ್ಪಷ್ಟನೆಗೆ ಅವಕಾಶ ಕೊಟ್ಟಿದ್ದಾರೆ. ಅವರ ಸ್ಪಷ್ಟನೆ ಸಮರ್ಪಕವಾಗಿದ್ದರೆ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ, ಅಸಮರ್ಪಕ ಇದ್ದಾಗ ಮಾತ್ರ ಕಾನೂನಾತ್ಮವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಧಾರವಾಡದಲ್ಲಿ ಕಾಂಗ್ರೆಸ್​ ಮುಖಂಡ ಇಸ್ಮಾಯಿಲ್ ತಮಾಟಗಾರ ಮೇಲೆ ಹತ್ಯೆ ಯತ್ನ ನಡೆದಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಇಸ್ಮಾಯಿಲ್ ತಮಾಟಗಾರಗೆ ಪೊಲೀಸ್​ ಇಲಾಖೆ ರಕ್ಷಣೆ ನೀಡಬೇಕು‌. ಬಹಳ ಡಿಸ್ಟರ್ಬ್ ಘಟನೆ ಇದು. ಧಾರವಾಡ ಶಾಂತಿ ಪ್ರಿಯರ ನಾಡು. ಇಲ್ಲಿ ಈ ರೀತಿ ಬೆಳವಣಿಗೆ ಆಗಿದೆ ಅಂದರೆ ವಿಚಾರ ಮಾಡಲೇಬೇಕು‌. ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು‌. ಯಾವುದೇ ಪಾರ್ಟಿಯಲ್ಲಿರಲಿ, ಎಲ್ಲರಿಗೂ ರಕ್ಷಣೆ ಕೊಡಬೇಕು‌. ಕೊಲೆ ಮಾಡಲಿಕ್ಕೆ ಪ್ರಯತ್ನ ಮಾಡಿದ್ದಾರೆ ಅನ್ನೋದು ಗಂಭೀರವಾದ ವಿಚಾರ. ನಾನು ಕೂಡಾ ಪೊಲೀಸ್​ ಕಮಿಷನರ್​ ಜೊತೆಗೆ ಮಾತನಾಡುವೆ ಎಂದು ಹೇಳಿದರು.

'ಬಿಜೆಪಿಯಲ್ಲಿ ಬಣಗಳಿವೆ': ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ ಹಾಗೂ ಸಿದ್ದೇಶ್ವರ ಅವರು ಸಭೆ ಕುರಿತು ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರೆಡ್ಡಿ ‌ಮಾತನಾಡಿ, ಬಿಜೆಪಿಯಲ್ಲಿ ಬಿಎಸ್‌ವೈ ಬಣ, ಕೇಂದ್ರದಲ್ಲಿ ಮಂತ್ರಿಯಾಗದವರ ಬಣ, ಯತ್ನಾಳ್​ ಮತ್ತಿತರ ಬಣಗಳಿಗೆ. ಕೇವಲ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಲ್ಲ, ನಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಎಂದು ಯತ್ನಾಳ್​ ಹೇಳಿದ್ದಾರೆ. ಆ ಹೆಗ್ಗಣ ಯಾವುದು ಅಂತಾ ಅವರೇ ಹೇಳಬೇಕು ಎಂದ ಅವರು, ನಾವು 136 ಸ್ಥಾನ ಗೆದ್ದಿದ್ದೇವೆ, ಅವರಿಗೆ ಆಪರೇಷನ್ ಕಮಲ ಮಾಡುವುದಕ್ಕೆ ಆಗಲಿಲ್ಲ. ಹೀಗಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ನಮ್ಮದು ಸುಭದ್ರ ಸರ್ಕಾರ ಎಂದು ತಿಳಿಸಿದರು.

ಇದನ್ನೂ ಓದಿ: ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ: ಶಾಸಕ ಬಿ.ಪಿ.ಹರೀಶ್‌ - B P Harish

Last Updated : Aug 12, 2024, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.