ETV Bharat / state

ನಾನು ಬಿಎಸ್​ವೈ ಟೀಮ್; ಈಗ ರಾಜಕೀಯದಲ್ಲಿ ತಟಸ್ಥನಾಗಿರುವೆ ಎಂದ ಎಸ್ ಐ ಚಿಕ್ಕನಗೌಡರ

author img

By ETV Bharat Karnataka Team

Published : Feb 8, 2024, 7:53 PM IST

ಈಗ ಬಿ ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರಿಂದ ತಟಸ್ಥವಾಗಿ ಉಳಿದಿದ್ದೇನೆ ಎಂದು ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ತಮ್ಮ ರಾಜಕೀಯ ನಿಲುವಿಗೆ ಕಾರಣ ತಿಳಿಸಿದರು.

ಎಸ್ ಐ ಚಿಕ್ಕನಗೌಡರ
ಎಸ್ ಐ ಚಿಕ್ಕನಗೌಡರ
ಎಸ್ ಐ ಚಿಕ್ಕನಗೌಡರ

ಹುಬ್ಬಳ್ಳಿ: 'ನಾನೀಗ ಯಾವುದೇ ಪಕ್ಷದವನಲ್ಲ. ಆದರೆ, ಯಡಿಯೂರಪ್ಪನವರ ಟೀಮ್​ನಲ್ಲಿರುವೆ' ಎಂದು ಕುಂದಗೋಳ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, 'ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದಿಂದ ಟಿಕೆಟ್ ಕೇಳಿಲ್ಲ. ಆದರೆ, ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದರಿಂದ ತಟಸ್ಥನಾಗಿರುವೆ. ಇವತ್ತು ಕಾಂಗ್ರೆಸ್​, ಬಿಜೆಪಿ, ಜೆಡಿಎಸ್ ಅಂತ ಯಾವುದೇ ಪಕ್ಷ ಅನ್ನುವುದಿಲ್ಲ. ಇವತ್ತಿನವರೆಗೂ ತಟಸ್ಥ ರಾಜಕಾರಣ ಮಾಡುತ್ತಿರುವೆ. ರಾಜ್ಯದಲ್ಲಿ ಏನು ಬದಲಾವಣೆ ಆಗುತ್ತದೆ ಎಂಬುದನ್ನು ಕ್ರಮೇಣವಾಗಿ ಕಾದು ನೋಡುವೆ. ಆ ಬಳಿಕ ನನ್ನ ಮುಂದಿನ ಹೆಜ್ಜೆ' ಇಡುವೆ ಎಂದು ತಿಳಿಸಿದರು.

'ಜಗದೀಶ್ ಶೆಟ್ಟರ್ ಅನ್ನುವುದಕ್ಕಿಂತಲೂ ನನಗೆ ಯಡಿಯೂರಪ್ಪನವರು ನಮ್ಮ ನಾಯಕ. ರಾಜ್ಯದಲ್ಲಿ ಹೋದಲೆಲ್ಲಾ ಇದನ್ನೇ ಹೇಳಿರುವೆ. ಆದರೆ, ನನಗೆ ರಾಜಕೀಯ ಮಾರ್ಗದರ್ಶನ ನೀಡಿದವರು ಜಗದೀಶ್ ಶೆಟ್ಟರ್. 1994ರಲ್ಲಿ ಅವರು ಹುಬ್ಬಳ್ಳಿ ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾದಾಗ ನಾನು ಕಲಘಟಗಿ ಕ್ಷೇತ್ರದ ಅಭ್ಯರ್ಥಿಯಾಗಿದ್ದೆ. ಆಗ ಶೆಟ್ಟರ್ ಗೆದ್ದರೆ ನಾನು ಸೋತೆ. ಬಳಿಕ 1999ರಲ್ಲಿ ಟಿಕೆಟ್ ಕೊಡಿಸಿದ್ದೇ ಶೆಟ್ಟರ್. ಆಗ ಗೆದ್ದೆ. 2004ರಲ್ಲಿಯೂ ಅವರೇ ಟಿಕೆಟ್ ಕೊಡಿಸಿದರು. ಆಗಲೂ ಗೆದ್ದೆ. ನನಗೆ ನಾಲ್ಕು ಬಾರಿ ಟಿಕೆಟ್ ತಂದುಕೊಟ್ಟರು. ಶೆಟ್ಟರ್ ಹಾಕಿಕೊಟ್ಟ ಗೆರೆಯನ್ನು ಇವತ್ತಿಗೂ ದಾಟಿಲ್ಲ. ಅವರು ಹೇಳಿದ್ದನ್ನು ಪಾಲಿಸಿಕೊಂಡು ಬರುತ್ತಿರುವೆ' ಎಂದರು.

'ಇದುವರೆಗೂ ನಾನು ಯಾವುದೇ ಪಕ್ಷಕ್ಕೂ ಯಾವುದೇ ದ್ರೋಹ ಮಾಡಿಲ್ಲ. ಆದರೆ, ಕೆಲವರಿಗೆ ಆ ಪರಿಪಾಟ ಇದೆ. ನಾನು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿರುವೆ. ಬರುವ ಚುನಾವಣೆಯಲ್ಲಿ ಟಿಕೆಟ್​ ಕೊಟ್ಟರೂ ನಾನು ಕೆಲಸ ಮಾಡುವೆ. ಸದ್ಯಕ್ಕೆ ನಾನು ಯಾವ ಪಕ್ಷದತ್ತಲೂ ಮುಖ ಮಾಡಿಲ್ಲ. ಆದರೆ, ಬಿಜೆಪಿ-ಕಾಂಗ್ರೆಸ್​ನವರು ನನ್ನನ್ನು ಸಂಪರ್ಕಿಸಿದ್ದಾರೆ. ಸಚಿವ ಹೆಚ್​​ ಕೆ ಪಾಟೀಲ್ ಸೇರಿದಂತೆ ಹಲವರು ಬನ್ನಿ ಗೌಡ್ರೆ ಅಂತ ಕರೆಯುತ್ತಿದ್ದಾರೆ. ಆದರೆ, ಸದ್ಯಕ್ಕೆ ನಾನು ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ' ಎಂದರು. ಇದೇ ವೇಳೆ ತಮ್ಮ ರಾಜಕೀಯ ಆರಂಭದ ದಿನಗಳನ್ನು ಹಾಗೂ ತಾವು ಬೆಳೆದು ಬಂದ ಹಾದಿ ಮತ್ತು ಸೋಲು-ಗೆಲುವುಗಳನ್ನು ನೆನಪು ಮಾಡಿಕೊಂಡರು.

ತಟಸ್ಥಕ್ಕೆ ಕಾರಣ: 'ಕಳೆದ ಕುಂದಗೋಳ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್​ ತಪ್ಪಿತು. ಮೊದಲಿಗೆ ಹೇಳಿದ್ದರೆ ಹಣ ಖರ್ಚು ಮಾಡುತ್ತಿರಲಿಲ್ಲ. ಹಗಲು ರಾತ್ರಿ ತಿರುಗಾಡಿದೆ. ಚುನಾವಣೆಯಲ್ಲಿ ಬೇರೆ ಹೆಸರು ಘೋಷಣೆ ಮಾಡಿದರು. ಆ ಸಂದರ್ಭದಲ್ಲಿ ಸಾವಿರಾರು ಜನ ನನಗೆ ಕರೆ ಮಾಡಿ ತಮ್ಮ ನೋವು ಹೇಳಿಕೊಂಡರು. ಪಕ್ಷ ಬದಲಾವಣೆ ಮಾಡು ಎಂದರು. ಅದರಂತೆ ಜಗದೀಶ್ ಶೆಟ್ಟರ್​ ಅವರನ್ನು ಕರೆದುಕೊಂಡು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದೆ. ಆದರೆ, ಈಗ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರಿಂದ ತಟಸ್ಥವಾಗಿ ಉಳಿದಿದ್ದೇನೆ' ಎಂದು ತಮ್ಮ ನಿಲುವಿಗೆ ಕಾರಣವನ್ನು ಚಿಕ್ಕನಗೌಡರ ತಿಳಿಸಿದರು.

ಇದನ್ನೂ ಓದಿ: ಸತೀಶ್​ ಜಾರಕಿಹೊಳಿ ದೆಹಲಿಗೆ ಕಳಿಸೋದಿಲ್ಲ: ರಾಜ್ಯಕ್ಕೆ ಇಂತಹ ಮಾಸ್ಟರ್​ ಮೈಂಡ್ ಬೇಕು - ಬೆಂಬಲಿಗರ ಬಿಗಿಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.