ETV Bharat / state

ಚಾಮರಾಜನಗರ: ಪತ್ನಿ ರೀಲ್ಸ್​​​ ವಿಚಾರ, ಪತಿ ಆತ್ಮಹತ್ಯೆ - ಚಾಮರಾಜನಗರ

ಪತ್ನಿ ಮಾಡಿದ ರೀಲ್ಸ್​​​ನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತನ ಸೋದರ ಆಗ್ರಹಿಸಿದ್ದಾನೆ.

ಪತ್ನಿ ಮಾಡಿದ ರೀಲ್ಸ್​​​ನಿಂದ ಪತಿ ಆತ್ಮಹತ್ಯೆ
ಪತ್ನಿ ಮಾಡಿದ ರೀಲ್ಸ್​​​ನಿಂದ ಪತಿ ಆತ್ಮಹತ್ಯೆ
author img

By ETV Bharat Karnataka Team

Published : Feb 15, 2024, 6:52 PM IST

Updated : Feb 15, 2024, 9:08 PM IST

ಚಾಮರಾಜನಗರ: ಪತ್ನಿ ಮಾಡಿದ ರೀಲ್ಸ್​​​ನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ನಡೆದಿದೆ. ಕುಮಾರ್ (33) ಮೃತ ವ್ಯಕ್ತಿ. ಪತ್ನಿ ರೂಪಾ, ರೂಪಾಳ‌ ಸೋದರಮಾವ ಗೋವಿಂದನ ವಿರುದ್ಧ ಮೃತನ ಸೋದರ ಮಹಾದೇವಸ್ವಾಮಿ ದೂರು ಕೊಟ್ಟಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಏನಿದು ರೀಲ್ಸ್ ಕಥೆ: ಕಳೆದ 10 ರಂದು ರೂಪಾಳ ತವರು ಮನೆಯಾದ ಗುಂಡಾಪುರಕ್ಕೆ ಕುಮಾರ್ ಮತ್ತು ರೂಪಾ ಇಬ್ಬರು ತೆರಳಿದ್ದರು. ಒಂದು ದಿನ ಇದ್ದು ಕುಮಾರ್ ಮರುದಿನ ಪಿ.ಜಿ‌‌. ಪಾಳ್ಯಕ್ಕೆ ವಾಪಸ್​ ಆಗಿದ್ದರೆ, ಪತ್ನಿ ರೂಪಾ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದರು. ರೂಪಾ ಊರಿನಲ್ಲಿದ್ದ ವೇಳೆ ಸೋದರಮಾವ ಹಾಗೂ ಆತನ ಸಹೋದರಿ ಜೊತೆ ಸೇರಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್​​ಲೋಡ್ ಮಾಡಿದ್ದಾರೆ. ಇದನ್ನು ಸ್ನೇಹಿತರು ಕುಮಾರನ ಗಮನಕ್ಕೆ ತಂದಿದ್ದರು. ತಕ್ಷಣ ಫೋನ್ ಪತ್ನಿಗೆ​ ಮಾಡಿದ್ದ ಕುಮಾರ್, ಈ ರೀತಿ ರೀಲ್ಸ್​ಗಳನ್ನು ಏಕೆ ಮಾಡುತ್ತಿದ್ದಿ? ಬಿಟ್ಟುಬಿಡು ಎಂದಾಗ ಪತ್ನಿಯು, ನಾನು ಇರುವುದೇ ಹೀಗೆ, ನೀನೇಕೆ ವಯಸ್ಸಾದವರ ರೀತಿ ಇದ್ದೀಯಾ ಎಂದಿದ್ದಳು. ಇದರಿಂದ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮನನೊಂದ ಕುಮಾರ್​ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಹಾದೇವಸ್ವಾಮಿ ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹನೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹನೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಶಿಕ್ಷಕನಿಂದ ಅವಮಾನಕರ ಮೆಸೇಜ್​ ಆರೋಪ, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

Last Updated : Feb 15, 2024, 9:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.