ETV Bharat / entertainment

ಜ.3ಕ್ಕೆ ನಟ ಅಲ್ಲು ಅರ್ಜುನ್​ ಜಾಮೀನು ತೀರ್ಪು: ಸಂಧ್ಯಾ ಥಿಯೇಟರ್​ ಪ್ರಕರಣದ ಬಗ್ಗೆ ಪವನ್​ ಕಲ್ಯಾಣ್​ ಪತ್ರಿಕ್ರಿಯೆ - ALLU ARJUN BAIL VERDICT

ಅಲ್ಲು ಅರ್ಜುನ್ ಜಾಮೀನು ಅರ್ಜಿ ಸಂಬಂಧ ವಿಚಾರಣೆ ನಡೆದಿದ್ದು, ಜನವರಿ 3ಕ್ಕೆ ತೀರ್ಪು ಘೋಷಣೆಯಾಗಲಿದೆ.

Allu Arjun, Pawan Kalyan
ಅಲ್ಲು ಅರ್ಜುನ್​, ಪವನ್​ ಕಲ್ಯಾಣ್ (Photo: IANS)
author img

By ETV Bharat Entertainment Team

Published : Dec 30, 2024, 6:22 PM IST

ಬಹುನಿರೀಕ್ಷಿತ 'ಪುಷ್ಪ-2' ಚಿತ್ರದ ಬಿಡುಗಡೆ ಸಂದರ್ಭ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯವು ಜನವರಿ 3ಕ್ಕೆ ಕಾಯ್ದಿರಿಸಿದೆ. ಅಲ್ಲು ಅರ್ಜುನ್ ಜಾಮೀನು ಅರ್ಜಿಯನ್ನು ವಿರೋಧಿಸಿ ಚಿಕ್ಕಡಪಲ್ಲಿ ಪೊಲೀಸ್ ಕೌಂಟರ್​-ಅಫಿಡವಿಟ್ ಸಲ್ಲಿಸಿದರು. ಮತ್ತೊಂದೆಡೆ, ಅರ್ಜುನ್ ಅವರ ಕಾನೂನು ತಂಡವು ಈ ಪ್ರಕರಣದಲ್ಲಿ ನಟ ಯಾವುದೇ ಸಂಬಂಧ ಹೊಂದಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಬಿಎಸ್​ಎನ್​​ ಸೆಕ್ಷನ್ 105ರ ಅಡಿಯಲ್ಲಿ ಅನ್ವಯಿಸುವುದಿಲ್ಲ ಎಂದು ವಾದಿಸಿತು.

ನಾಂಪಲ್ಲಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವ್ಯಾಪಕವಾಗಿ ಗಮನ ಸೆಳೆದಿದೆ. ಎರಡೂ ಕಡೆಯವರು ತಮ್ಮ ವಾದವನ್ನು ಮಂಡಿಸಿದರು. ಅಲ್ಲು ಅರ್ಜುನ್ ಅವರ ವಕೀಲರು ಜಾಮೀನು ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆಯಲ್ಲಿ ನಟ ನೇರ ಸಂಪರ್ಕ ಹೊಂದಿಲ್ಲ ಎಂದು ಉಲ್ಲೇಖಿಸಿದರು. ಎರಡೂ ಕಡೆಯ ವಾದ- ವಿವಾದ ಪರಿಶೀಲಿಸಿದ ನ್ಯಾಯಾಲಯವು, ಜನವರಿ 3ರಂದು ಜಾಮೀನಿಗೆ ಸಂಬಂಧಿಸಿದ ತೀರ್ಪು ನೀಡುವುದಾಗಿ ಘೋಷಿಸಿತು.

ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್​​ ಮತ್ತು ಅದಾದ ನಂತರ ನಟ ಅಲ್ಲು ಅರ್ಜುನ್ ಬಂಧನವಾಗಿದ್ದ ಬಗ್ಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ, ಟಾಲಿವುಡ್​ ನಟ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಮಂಗಳಗಿರಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ಘಟನೆ ಸಂಬಂಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅಲ್ಲು ಅರ್ಜುನ್ ಅವರ ಒಳಗೊಳ್ಳುವಿಕೆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಚಿಕ್ಕ ಸಮಸ್ಯೆಯಾಗಬೇಕಿದ್ದದ್ದು ದೊಡ್ಡದಾಗಿದೆ, ಕೋಲಿನಿಂದ ಪರಿಹರಿಸಬಹುದಾದ ವಿಷಯಕ್ಕೆ ಕೊಡಲಿಯೇಟು ಹಾಕಿದಂತೆ" ಎಂದು ಹೇಳಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಹೊಗಳಿದ ನಟ, ಅವರು ತಳಮಟ್ಟದಿಂದ ಬೆಳೆದ ಮಹಾನ್ ನಾಯಕ ಎಂದು ಬಣ್ಣಿಸಿದರು. ಪವನ್ ಕಲ್ಯಾಣ್ ಪ್ರಕಾರ, ರೇವಂತ್ ರೆಡ್ಡಿ ಅವರು ಟಿಕೆಟ್ ದರವನ್ನು ಹೆಚ್ಚಿಸುವುದು ಸೇರಿದಂತೆ ಚಿತ್ರರಂಗಕ್ಕೆ ನೀಡಿದ ಬೆಂಬಲ ಸಲಾರ್ ಮತ್ತು ಪುಷ್ಪ 2 ಚಿತ್ರಗಳ ಯಶಸ್ಸಿಗೆ ಕಾರಣವಾಯಿತು.

ಅಲ್ಲು ಅರ್ಜುನ್ ಅವರ ಪ್ರಕರಣದ ಸುತ್ತಲಿನ ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿಲ್ಲವಾದರೂ, ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂಬುದನ್ನು ಈ ಸಂದರ್ಭ ಒತ್ತಿ ಹೇಳಿದರು. ಸುರಕ್ಷತೆಯನ್ನು ಖಾತ್ರಿಪಡಿಸುವತ್ತ ಗಮನಹರಿಸಿದ್ದರಿಂದ ಇದರಲ್ಲಿ ಪೊಲೀಸರ ತಪ್ಪಿಲ್ಲ ಎಂಬುದನ್ನು ಹೇಳಿದರು. ಆದ್ರೆ ಪ್ರೇಕ್ಷಕರ ಪರಿಸ್ಥಿತಿಗಳ ಬಗ್ಗೆ ಥಿಯೇಟರ್ ಸಿಬ್ಬಂದಿಯು ನಟ ಅಲ್ಲು ಅರ್ಜುನ್ ಅವರಿಗೆ ಮೊದಲೇ ತಿಳಿಸಬೇಕಿತ್ತು ಎಂದು ಹೇಳಿದರು.

ಇದನ್ನೂ ಓದಿ: ಶಿಡ್ಲಘಟ್ಟದಿಂದ ಸ್ವಿಟ್ಜರ್​ಲ್ಯಾಂಡ್​ವರೆಗೆ: 'ಸಂಜು ವೆಡ್ಸ್ ಗೀತಾ 2' ಕಥೆ ಕೊಟ್ಟಿದ್ದು ಸುದೀಪ್

ಕಾಲ್ತುಳಿತ ಪ್ರಕರಣದಲ್ಲಿ ಸಂಭವಿಸಿರೋ ಪ್ರಾಣಹಾನಿ ಕುರಿತು ಸಂತಾಪ ವ್ಯಕ್ತಪಡಿಸಿರುವ ಪವನ್ ಕಲ್ಯಾಣ್, ರೇವತಿ ಅವರ ಸಾವು ಆಘಾತ ತಂದಿದೆ, ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿ ಇನ್ನಷ್ಟು ಮಾನವೀಯತೆ ತೋರಬಹುದಿತ್ತು ಎಂದಿದ್ದಾರೆ. ಅಲ್ಲು ಅರ್ಜುನ್ ಅವರ ತಂಡ ಅಥವಾ ಚಲನಚಿತ್ರ ನಿರ್ಮಾಪಕರು ಯಾರಾದರೂ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ನೀಡಬೇಕಿತ್ತು ಎಂದು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: 'ಶೀಘ್ರದಲ್ಲೇ ಮ್ಯಾಕ್ಸ್​ ವೀಕ್ಷಿಸಲಿದ್ದೇನೆ': ಮ್ಯಾಕ್ಸ್​​​ ಯಶಸ್ಸಿನ ತೂಕ ಹೆಚ್ಚಿಸಿತು ರಾಜಮೌಳಿ ಗುಣಗಾನ, ಕಿಚ್ಚನಿಂದ ಧನ್ಯವಾದ

ಕೇವಲ ಅಲ್ಲು ಅರ್ಜುನ್ ಅವರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಕೂಡಾ ಪವನ್ ಕಲ್ಯಾಣ್ ಹೇಳಿದ್ದಾರೆ. ಸಿನಿಮಾ ಎಂಬುದು ಒಂದು ತಂಡದ ಪ್ರಯತ್ನ, ಅನೇಕ ಜನರು ಅದರಲ್ಲಿ ತೊಡಗಿಸಿಕೊಂಡಿದ್ದಾರೆ, ಅಂಥ ದುರಂತ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯನ್ನು ದೂಷಿಸುವುದು ಸರಿ ಅಲ್ಲ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.