ETV Bharat / state

ಕೊಡಗು: ಗೋಣಿಕೊಪ್ಪಲಿನಲ್ಲಿ ವಾಣಿಜ್ಯ ಕಟ್ಟಡ ದಿಢೀರ್ ಕುಸಿತ, ಅವಶೇಷದಡಿ ಹಲವರು ಸಿಲುಕಿರುವ ಶಂಕೆ - Building Collapsed

ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ವಾಣಿಜ್ಯ ಕಟ್ಟಡವೊಂದು ದಿಢೀರ್ ಕುಸಿದಿದೆ. ಪರಿಣಾಮ ವಾಣಿಜ್ಯ ಕಟ್ಟಡದ ಕೆಳಗೆ ಇದ್ದ ಹೋಟೆಲ್​ನ​ ಕಾರ್ಮಿಕರು, ಊಟಕ್ಕೆ ತೆರಳಿದ್ದ ಗ್ರಾಹಕರು ಸೇರಿದಂತೆ ಎಂಟು ಜನ ಅದರಡಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

BUILDING COLLAPSED
ಕುಸಿದ ವಾಣಿಜ್ಯ ಕಟ್ಟಡ (ETV Bharat)
author img

By ETV Bharat Karnataka Team

Published : Jun 20, 2024, 5:03 PM IST

Updated : Jun 20, 2024, 7:02 PM IST

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ (ETV Bharat)

ಕೊಡಗು: ಹೋಟೆಲ್‌ ಇದ್ದ ವಾಣಿಜ್ಯ ಕಟ್ಟಡವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಹೋಟೆಲ್‌ ಕಾರ್ಮಿಕರು ಸೇರಿ ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪಲ್‌ನಲ್ಲಿ ಗುರುವಾರ (ಜೂ.20) ಮಧ್ಯಾಹ್ನ ನಡೆದಿದೆ.

ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ನ್ಯೂ ಅಂಬೂರ್ ಹಾಟ್​ ಧಮ್​ ಬಿರಿಯಾನಿ ಎಂಬ ಹೋಟೆಲ್ ಇದ್ದ ವಾಣಿಜ್ಯ ಕಟ್ಟಡ ಇದಾಗಿದ್ದು, ಹಠಾತ್​ ಕುಸಿದು ಬಿದ್ದಿದೆ. ಈ ವೇಳೆ ಹೋಟೆಲ್‌ನಲ್ಲಿದ್ದ ಕಾರ್ಮಿಕರು, ಊಟಕ್ಕೆ ತೆರಳಿದ್ದ ಗ್ರಾಹಕರು ಸೇರಿದಂತೆ ಎಂಟು ಜನ ಅದರಡಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್​ ಸಿಬ್ಬಂದಿ ಧಾವಿಸಿದ್ದಾರೆ. ಸದ್ಯ ಇಬ್ಬರನ್ನು ರಕ್ಷಿಸಿ, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ತೀರಾ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಇದಾಗಿದೆ ಎಂಬ ಮಾಹಿತಿ ಇದೆ. ಕಟ್ಟಡ ಕುಸಿತಗೊಂಡ ಬೆನ್ನಲ್ಲೇ ಸ್ಥಳೀಯರು ಕಾರ್ಯ ಪ್ರವೃತ್ತರಾಗಿ ಸಿಲುಕಿದ್ದವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಕಟ್ಟಡ ಕುಸಿಯುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕಟ್ಟಡ ಕುಸಿತ ಪ್ರಕರಣ: ಅವಶೇಷಗಳಡಿ ಸಿಲುಕಿ 6 ದಿನಗಳ ಬಳಿಕ ಹೊರಬಂದ ಕಾರ್ಮಿಕ! - South Africa Building Collapse

Last Updated : Jun 20, 2024, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.