ETV Bharat / state

ಉಪ ಚುನಾವಣೆಯ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ : ಜಿ. ಪರಮೇಶ್ವರ್ ವಿಶ್ವಾಸ - G PARAMESHWAR

ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಅವರು ಮುಂದಿನ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದಿದ್ದಾರೆ.

home-minister-g-parameshwar
ಗೃಹ ಸಚಿವ ಡಾ ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : Oct 26, 2024, 4:53 PM IST

ಶಿವಮೊಗ್ಗ: ಮುಂಬರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಮ್ಮ ಹೈಕಮಾಂಡ್ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ- ಜೆಡಿಎಸ್ ಎನ್​ಡಿಎ ಅಂತ ಒಂದಾಗಿದ್ದರೂ ಸಹ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಜನಪರ ಕೆಲಸ ಮಾಡುತ್ತಿದೆ ಎಂದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿದರು (ETV Bharat)

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಂಡಾಯದ ವಿಚಾರವಾಗಿ ಮಾತನಾಡಿ, ಶಿಗ್ಗಾವಿಯಲ್ಲಿ ಖಾದ್ರಿ ಅವರು ಹಿಂದೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು‌. ಈಗ ಅವರ ಮನವೊಲಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್​ನಲ್ಲಿ ಯಾವುದೇ ಗೊಂದಲವಿಲ್ಲ. ಶಿಗ್ಗಾವಿಯಲ್ಲೂ ಗೆಲ್ಲುತ್ತೇವೆ ಎಂದು ಹೇಳಿದರು.

ವಿಜಯಪುರದಲ್ಲಿ ವಕ್ಫ್ ಬೋರ್ಡ್ ರೈತರಿಗೆ ನೀಡುವ ನೋಟಿಸ್ ಕುರಿತು ರಾಜ್ಯ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಸಚಿವರು ತಿಳಿಸಿದರು.

G parameshwar
ನೂತನ ಪೊಲೀಸ್ ಸಭಾಂಗಣ ಉದ್ಘಾಟಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ (ETV Bharat)

ಸಾಮಾಜಿಕ, ಆರ್ಥಿಕ ಗಣತಿ ಸಂಪುಟದಲ್ಲಿ ಮಂಡನೆ : ಆರ್ಥಿಕ, ಸಾಮಾಜಿಕ ಗಣತಿಯ ವರದಿಯನ್ನು ಮುಂದಿನ ಸಂಪುಟದಲ್ಲಿ ಮಂಡನೆ ಮಾಡಲಿದ್ದೇವೆ. ಸಂಪುಟದಲ್ಲಿ ವರದಿ ಮಂಡನೆಯಾದ ನಂತರ ಮುಂದೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣ ತಜ್ಞರ ವರದಿಯೇ ಅಂತಿಮ : ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಇನ್ನೂ ಅಂತಿಮವಾಗಿಲ್ಲ. ವರದಿಯ ಆಧಾರದ ಮೇಲೆ ತೀರ್ಮಾನವಾಗಲಿದೆ. ಈ ಕುರಿತು ಡಿಜಿಸಿಎ ರವರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ನಾನು ತುಮಕೂರಿನಲ್ಲಿ ಮಾಡಬೇಕೆಂದು ಹೇಳುತ್ತೇನೆ. ಆದರೆ ತಜ್ಞರ ವರದಿಯೇ ಅಂತಿಮವಾಗಲಿದೆ ಎಂದು ಹೇಳಿದರು.

ಬೆಂಗಳೂರಿಗೆ ಶರಾವತಿ ನೀರು ಪ್ರಸ್ತಾಪ ಇಲ್ಲ: ಶರಾವತಿ ನದಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಕುರಿತು ಹಿಂದೆ ನಾನು ಡಿಸಿಎಂ ಆದಾಗ ಚರ್ಚೆ ನಡೆಸಿದ್ದೆ. ಆದರೆ, ಅದರ ಕುರಿತು ಇನ್ನೂ ಅಂತಿಮವಾದ ತೀರ್ಮಾನವಾಗಿಲ್ಲ‌. ಅಂತಹ ಪ್ರಸ್ತಾಪ ಇನ್ನೂ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Inauguration of the new police hall
ನೂತನ ಪೊಲೀಸ್ ಸಭಾಂಗಣ ಉದ್ಘಾಟನೆ (ETV Bharat)

ಸೊರಬದಲ್ಲಿ ದಿ. ಬಂಗಾರಪ್ಪನವರ 92ನೇ ಹುಟ್ಟುಹಬ್ಬ ಆಚರಣೆಗೆ ಬಂದಿದ್ದೇನೆ. ನಮ್ಮ ಇಲಾಖೆಯಲ್ಲಿ ಕೆಲವು‌ ಕಟ್ಟಡ ಉದ್ಘಾಟನೆಗೆ ಭಾಗವಹಿಸಲು ಬಂದಿದ್ದೇನೆ ಎಂದರು. ಇದೇ ವೇಳೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿನ ನೂತನ ಪೊಲೀಸ್ ಸಭಾಂಗಣವನ್ನು ಉದ್ಘಾಟಿಸಿದರು. ಜಿಲ್ಲಾ ಪೊಲೀಸರೊಂದಿಗೆ ಸಭೆ ನಡೆಸಿದರು.

G parameshwar
ಜಿಲ್ಲಾ ಪೊಲೀಸರೊಂದಿಗೆ ಸಭೆ ನಡೆಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ (ETV Bharat)

ಈ ವೇಳೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಶಿವಮೊಗ್ಗ ನಗರ ಶಾಸಕ ಎಸ್. ಎನ್ ಚನ್ನಬಸಪ್ಪ,
ಎಂಎಲ್​ಸಿ ಬಲ್ಕಿಷ್ ಬಾನು, ಡಿ. ಎಸ್ ಅರುಣ್, ಧನಂಜಯ್ ಸರ್ಜಿ, ಬೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಹೆಚ್. ಸಿ ಯೋಗೇಶ್​ ಸೇರಿ ಇತರರಿದ್ದರು.

ಇದನ್ನೂ ಓದಿ : ಶಿಗ್ಗಾಂವಿ ಕೈ ಬಂಡಾಯ: ನಾಮಪತ್ರ ಹಿಂಪಡೆಯುವಂತೆ ಖಾದ್ರಿ ಮನವೊಲಿಸಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.