ETV Bharat / state

'ಹೈ ಸೆಕ್ಯುರಿಟಿ‌ ನಂಬರ್ ಪ್ಲೇಟ್' ಅಳವಡಿಕೆ ಸಮಯ 3 ತಿಂಗಳು ವಿಸ್ತರಣೆ

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಅವಧಿವನ್ನು ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
author img

By ETV Bharat Karnataka Team

Published : Feb 14, 2024, 3:05 PM IST

Updated : Feb 14, 2024, 6:06 PM IST

ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ 3 ತಿಂಗಳು ಅವಧಿ ವಿಸ್ತರಣೆ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಪ್ರಕಟಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್​ನ ಸದಸ್ಯ ಮಧು ಜಿ.ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು, "ಹೈ ಸೆಕ್ಯುರಿಟಿ‌ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17, 2024ಕ್ಕೆ ಗಡುವು ಮುಕ್ತಾಯವಾಗಲಿದೆ. ಹೊಸ ನಂಬರ್ ಪ್ಲೇಟ್ ಅಳವಡಿಕೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ವಾಹನಗಳಿಗೆ ಅವಧಿ ವಿಸ್ತರಣೆ ಮಾಡುತ್ತೇವೆ" ಎಂದರು.

"ರಾಜ್ಯದಲ್ಲಿ ಈಗಾಗಲೇ 18,32,787 ವಾಹನಗಳಿಗೆ ಹೈ ಸೆಕ್ಯುರಿಟಿ‌ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ರಾಜ್ಯದಲ್ಲಿ ಶೇ.9.16 ಮಾತ್ರ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಇದು ವೇಗವಾಗಿ ಆಗಿದೆ. ನಮ್ಮ ರಾಜ್ಯದಲ್ಲಿ ತಡವಾಗಿದೆ" ಎಂದು ತಿಳಿಸಿದರು.

2023ರ ನವೆಂಬರ್​ಗೆ ಡೆಡ್‌ಲೈನ್ ನೀಡಲಾಗಿತ್ತು. ಆದರೆ ಆಗ ನಿರೀಕ್ಷಿತ ಮಟ್ಟದಲ್ಲಿ ಅಳವಡಿಕೆ ಆಗದ ಕಾರಣ ಮೊದಲ ಬಾರಿಗೆ ಒಂದು ಅವಕಾಶ ನೀಡಿ 2024ರ ಫೆಬ್ರವರಿ 17ರವರೆಗೆ ಕಾಲಾವಕಾಶ ವಿಸ್ತರಣೆ ಮಾಡಿ ಸಾರಿಗೆ ಸಚಿವರು ಆದೇಶಿಸಿದ್ದರು. ಆದರೆ, ಎರಡನೇ ಅವಕಾಶದಲ್ಲೂ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಎರಡನೇ ಬಾರಿ ಸಮಯ ವಿಸ್ತರಿಸಲಾಗಿದೆ.

"ವಾಹನಗಳಿಗೆ ಹೆಚ್.ಎಸ್.ಆರ್.ಪಿ ಅಳವಡಿಸುವ ಸಂಬಂಧ ಪಾರದರ್ಶಕತೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಗಟ್ಟಲು OEMಗಳ ಅಧಿಕೃತ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಪೋರ್ಟಲ್ ಮೂಲಕ ವಾಹನದ ಮಾಲೀಕರು ಆನ್​ಲೈನ್​ನಲ್ಲಿ ಮಾತ್ರ ಶುಲ್ಕ ಪಾವತಿಸಬೇಕು. ಪ್ಲೇಟ್ ಅಳವಡಿಸಿಕೊಳ್ಳಲು ಅವರಿಗೆ ಅನುಕೂಲಕರ ಸ್ಥಳ ಮತ್ತು ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ" ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

"ಇ-ವಾಹನ್ ಪೋರ್ಟಲ್​ನಲ್ಲಿ ಇರುವ ವಾಹನದ ವಿವರಗಳು ಹಾಗೂ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಆನ್​ಲೈನ್ ಪೋರ್ಟಲ್​ನಲ್ಲಿನ ವಾಹನದ ವಿವರಗಳೊಂದಿಗೆ ಪರಿಶೀಲನೆಯಾಗಿ ತಾಳೆಯಾದಲ್ಲಿ ಮಾತ್ರ ಹೆಚ್.ಎಸ್.ಆರ್.ಪಿ ಅಳವಡಿಸಲು ಅನುಮತಿ ದೊರೆಯುತ್ತದೆ. ಆರ್.ಸಿ ಮಾನ್ಯತೆ ಇಲ್ಲದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನೀಡಿ ಕಾನೂನುಬದ್ಧಗೊಳಿಸುವ ಪ್ರಶ್ನೆ ಉದ್ಬವಿಸುವುದಿಲ್ಲ" ಎಂದು ಹೇಳಿದರು.

ಸರ್ಕಾರದ ಆದೇಶದಂತೆ ದಂಡ: ನಿಗದಿತ ದಿನಾಂಕದೊಳಗೆ ಹೆಚ್.ಎಸ್.ಆರ್.ಪಿ ಅಳವಡಿಸದಿದ್ದಲ್ಲಿ ಮೊದಲನೇ ಅಪರಾಧಕ್ಕೆ 500 ರೂ ಹಾಗೂ ಎರಡನೇ ಮತ್ತು ನಂತರದ ಅಪರಾಧಗಳಿಗೆ 1,000 ರೂ.ಯಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶದಂತೆ ದಂಡ ವಿಧಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಅಳವಡಿಸಿಲ್ಲವೇ..ಕೂಡಲೇ ಅಳವಡಿಸಿ.!

Last Updated : Feb 14, 2024, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.