ETV Bharat / state

ನರ್ಸರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆ: ವಿನಾಯ್ತಿ ನೀಡುವ ಕುರಿತು ಸೂಕ್ತ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ - EXEMPTION LAND ACQUISITION PROCESS

ಕರ್ನಾಟಕದಲ್ಲಿ ನರ್ಸರಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ. ಹಾಗಾಗಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ ನರ್ಸರಿಗಳಿಗೆ ಮಾನ್ಯತೆ ನೀಡುವಂತೆ ರಾಜ್ಯದಲ್ಲೂ ಸಹ ವ್ಯವಸ್ಥೆ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ

High Court suggests exemption in land acquisition process for nurseries
ನರ್ಸರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿನಾಯತಿಗೆ ಹೈಕೋರ್ಟ್ ಸಲಹೆ (ETV Bharat)
author img

By ETV Bharat Karnataka Team

Published : Nov 6, 2024, 10:32 PM IST

ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆಯಿಂದ ನರ್ಸರಿಗಳಿಗೆ ವಿನಾಯ್ತಿ ನೀಡುವ ಕುರಿತು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬೆಂಗಳೂರಿನ ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನರ್ಸರಿ ಹೊಂದಿದ್ದ ಬಿ.ಸತ್ಯನಾರಾಯಣಾಚಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ .ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಈ ಕುರಿತಂತೆ ಸಂಬಂಧಿಸಿದ ಪ್ರಾಧಿಕಾರಗಳು ಭೂ ಸ್ವಾಧೀನ ಪ್ರಕ್ರಿಯೆಯಿಂದ ನರ್ಸರಿಗಳನ್ನು ಹೊರಗಿಡಬೇಕಾದರೆ ಅಥವಾ ವಿನಾಯ್ತಿ ನೀಡಬೇಕಾದರೆ, ಅದಕ್ಕೆ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಮತ್ತು ಆ ನಿಯಮಗಳು ಮೂಲ ಕಾನೂನಿಗೆ ವಿರುದ್ಧವಾಗಿರಬಾರದು ಎಂದು ಪೀಠ ತಿಳಿಸಿದೆ.

ಸರ್ಕಾರ 1987ರಲ್ಲಿ ನರ್ಸರಿಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟು ಆದೇಶ ಹೊರಡಿಸಲಾಗಿದೆ ಎಂದು ಸುಮ್ಮನೆ ಕುಳಿತರೆ ಸಾಲದು, ಅದು ಆ ಸರ್ಕಾರಿ ಆದೇಶದ ಮೇಲೆ ಅವಲಂಬನೆಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದೂ ಸಹ ಆದೇಶಿಸಿದೆ. ಸರ್ಕಾರ ಈ ಹಿಂದೆ ಹೊರಡಿಸಿರುವ ಆದೇಶಕ್ಕೆ ಯಾವುದೇ ಶಾಸನದ ಬೆಂಬಲವಿಲ್ಲ. ಆದ್ದರಿಂದ ಸ್ವಾಧೀನ ಪ್ರಾಧಿಕಾರಗಳು ನರ್ಸರಿಗಳನ್ನು ಗುರುತಿಸಿ ಅವುಗಳಿಗೆ ಸ್ವಾಧೀನ ಪ್ರಕ್ರಿಯೆಯಿಂದ ವಿನಾಯ್ತಿ ನೀಡಬೇಕಾದರೆ ತಕ್ಷಣವೇ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಅದರ ವ್ಯಾಪ್ತಿಗೆ ಎಲ್ಲ ತೋಟಗಾರಿಕಾ ನರ್ಸರಿಗಳು ಒಳಪಡುವಂತಾಗಬೇಕು. ಸದ್ಯ ಕರ್ನಾಟಕದಲ್ಲಿ ನರ್ಸರಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ. ಹಾಗಾಗಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ ನರ್ಸರಿಗಳಿಗೆ ಮಾನ್ಯತೆ ನೀಡುವಂತೆ ರಾಜ್ಯದಲ್ಲೂ ಸಹ ವ್ಯವಸ್ಥೆ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಹೆಬ್ಬಾಳದ ವಾಸಿ 91 ವರ್ಷದ ಬಿ.ಸತ್ಯನಾರಾಯಣಾಚಾರ್ ಯಲಹಂಕ ಹೋಬಳಿ ಕೆಂಪನಹಳ್ಳಿ ಗ್ರಾಮದ ಸರ್ವೇ ನಂಬರ್ 11/2ರಲ್ಲಿಒಂದು ಎಕರೆ ಭೂಮಿಯನ್ನು ಹೊಂದಿದ್ದರು. ಆ ಜಾಗದಲ್ಲಿಅವರು ಶ್ರೀ ಗೋವರ್ದನ ನರ್ಸರಿಯನ್ನು ನಡೆಸುತ್ತಿದ್ದರು. ಅಲ್ಲಿಗುಲಾಬಿ, ಹಣ್ಣು ಮತ್ತಿತರ ಗಿಡಗಳನ್ನು ಬೆಳೆಸುತ್ತಿದ್ದರು. ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ 2018ರ ಅ.30ರದು ಅಂತಿಮ ಅಧಿಸೂಚನೆ ಹೊರಡಿಸಿದ್ದರು. ಆ ಅಧಿಸೂಚನೆಯನ್ನು ಪ್ರಶ್ನಿಸಿ ಹಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಆಗ ಸುಪ್ರೀಂಕೋರ್ಟ್ ಅಂತಿಮ ಅಧಿಸೂಚನೆಗೂ ಮುನ್ನ ಮನೆಗಳು ನಿರ್ಮಾಣವಾಗಿದ್ದರೆ ಅಂತಹವುಗಳಿಗೆ ಸ್ವಾಧೀನದಿಂದ ವಿನಾಯ್ತಿ ನೀಡಲು ನ್ಯಾ.ಎ.ವಿ.ಚಂದ್ರಶೇಖರ್ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ ಅರ್ಜಿಗಳನ್ನು ಆಹ್ವಾನಿಸಿ ದಾಖಲೆಗಳನ್ನು ಪರಿಶೀಲಿಸಿ ಕೆಲವು ಮನೆಗಳ ಮಾಲೀಕರಿಗೆ ವಿನಾಯ್ತಿ ನೀಡಿತ್ತು. ಆದರೆ ಅರ್ಜಿದಾರರ ನರ್ಸರಿಗೆ ವಿನಾಯ್ತಿ ನೀಡಿರಲಿಲ್ಲ. ಹಾಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನು ಓದಿ: ಎಡಿಜಿಪಿ ಚಂದ್ರಶೇಖರ್‌ಗೆ ಬೆದರಿಕೆ ಆರೋಪ: ಹೆಚ್‌ಡಿಕೆ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ವೈದ್ಯಕೀಯ ವರದಿ ಹೈಕೋರ್ಟ್‌ಗೆ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.