ETV Bharat / state

ಹೆಸ್ಕಾಂ ಎಇಇ ವರ್ಗಾವಣೆ : ಪರೋಕ್ಷವಾಗಿ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ವಿರುದ್ಧ ಶಾಸಕ ಸತೀಶ್ ಸೈಲ್ ಕಿಡಿ - KARWAR TALUK PANCHAYAT KDP MEETING

ವರ್ಗಾವಣೆಗೆ ನನ್ನ ವಿರೋಧ ಇಲ್ಲ. ಆದರೆ ಬೇರೆ ಅಧಿಕಾರಿಯನ್ನು ನೇಮಿಸದೆ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಶಾಸಕ ಸತೀಶ್​ ಸೈಲ್​ ಅಸಮಾಧಾನ ಹೊರಹಾಕಿದರು.

Karwar Taluk Panchayat KDP Meeting
ಕಾರವಾರ ತಾಲೂಕು ಪಂಚಾಯತ್​ ಕೆಡಿಪಿ ಸಭೆ (ETV Bharat)
author img

By ETV Bharat Karnataka Team

Published : Jan 29, 2025, 1:25 PM IST

Updated : Jan 29, 2025, 2:09 PM IST

ಕಾರವಾರ (ಉತ್ತರ ಕನ್ನಡ): ತನ್ನ ಗಮನಕ್ಕೆ ತಾರದೆ ಹೆಸ್ಕಾಂ ಇಲಾಖೆ ಎಇಇ ವೀರಣ್ಣ ಶೆಬಣ್ಣವರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೆಸರು ಹೇಳದೆ ಕಾಂಗ್ರೆಸ್ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ವಿರುದ್ಧ ಶಾಸಕ ಸತೀಶ್ ಸೈಲ್ ಗರಂ ಆದ ಘಟನೆ ಕಾರವಾರ ತಾಲೂಕು ಪಂಚಾಯತ್​ ಕೆಡಿಪಿ ಸಭೆಯಲ್ಲಿ ನಡೆಯಿತು.

ಕಾರವಾರದಲ್ಲಿನ ಹೆಸ್ಕಾಂ ಕಚೇರಿಗೆ ಈವರೆಗೆ ಎಇಇ ನೇಮಕ ಮಾಡದೇ ಇರುವುದಕ್ಕೆ ಶಾಸಕ ಸತೀಶ್ ಸೈಲ್ ತಾಲೂಕು ಕೆಡಿಪಿ ಸಭೆಯಲ್ಲಿ ಕಿಡಿಕಾರಿದರು. ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎಇಇ ವೀರಣ್ಣ ಶೆಬಣ್ಣನವರ್ ಅವರ ವರ್ಗಾವಣೆ ಮಾಡಲಾಗಿದ್ದು, ಈವರೆಗೆ ಆ ಜಾಗಕ್ಕೆ ಬೇರೆ ಅಧಿಕಾರಿಯನ್ನು ನೇಮಿಸಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಫೋನ್ ಮೂಲಕ ಹರಿಹಾಯ್ದರು.

ಹೆಸ್ಕಾಂ ಎಇಇ ವರ್ಗಾವಣೆ; ಶಾಸಕ ಸತೀಶ್ ಸೈಲ್ ಅಸಮಾಧಾನ (ETV Bharat)

ಸಭೆಯಲ್ಲಿ ಹೆಸ್ಕಾಂ ಎಂಡಿಗೆ ಫೋನ್ ಮಾಡಿದ ಸತೀಶ್ ಸೈಲ್ "ನಾನೇನಾದರು ಹಳಿಯಾಳದಲ್ಲಿ ವರ್ಗಾವಣೆ ಮಾಡಿ ಎಂದು ಹೇಳಿದ್ದೆನಾ? ಮೊದಲು ಬೇರೆಯವರನ್ನೂ ಕಾರವಾರಕ್ಕೆ ನೇಮಿಸಿ. ಇಲ್ಲದಿದ್ದರೇ ವಾಪಸ್ ವರ್ಗಾವಣೆ ಮಾಡಿದವರನ್ನೇ ಕರೆಸಿ. ಸದಾಶಿವಗಡದಲ್ಲಿರುವ ಅಧಿಕಾರಿಯನ್ನು ಕಾರವಾರಕ್ಕೆ ಪ್ರಭಾರ ಎಂದು ನೇಮಿಸಿದ್ದಾರೆ. ಅವರು ಎಲ್ಲಾ ಕಡೆ ಕೆಲಸ ಮಾಡಲು ಸಾಧ್ಯವೇ? ಯಾರೋ ಹೇಳಿದ್ದಾರೆ, ಯಾರೋ ಒತ್ತಡ ಹಾಕಿದ್ದಾರೆ ಎಂದು ವರ್ಗಾವಣೆ ಮಾಡುವುದು ಸರಿಯಲ್ಲ. ಹಳಿಯಾಳದಿಂದ ಫೋನ್ ಬಂದಿದ್ದು ನನಗೆ ಗೊತ್ತಿದೆ. ನಾನು ಬೇರೆಯವರ ಪ್ರದೇಶಕ್ಕೆ ಕೈ ಹಾಕುವುದಿಲ್ಲ. ಹಳಿಯಾಳದಲ್ಲಿ ಇರುವ ಯಾರಾದರು ಅಧಿಕಾರಿಯನ್ನು ಕಾರವಾರಕ್ಕೆ ಹಾಕಿ" ಎಂದು ಆಗ್ರಹಿಸಿದರು.

ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸೈಲ್, "ವರ್ಗಾವಣೆ ಮಾಡಲು ನನ್ನ ವಿರೋಧ ಇಲ್ಲ. ಆದರೆ ಕಾರವಾರಕ್ಕೆ ಬೇರೆಯವರನ್ನು ನೇಮಕ ಮಾಡದೇ ವರ್ಗಾವಣೆ ಮಾಡಿರುವುದಕ್ಕೆ ನನ್ನ ವಿರೋಧ ಇದೆ. ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಕೆಲವರು ಒತ್ತಡ ಹಾಕಿ ಕಾರವಾರದಲ್ಲಿ ಕೆಲಸ ಮಾಡುತ್ತಿದ್ದ ಎಇಇಯನ್ನು ವರ್ಗಾವಣೆ ಮಾಡಿದ್ದಾರೆ. ಕೆಲವರು ತಮ್ಮ ಘನತೆಯನ್ನು ತೋರಿಸಲು ಹೋಗಿ ವರ್ಗಾವಣೆ ಮಾಡಿದ್ದಾರೆ. ಆದರೆ ಇಲ್ಲಿ ಜನರು ಸಾಯುತ್ತಾರೋ ಬಿಡುತ್ತಾರೋ ಎನ್ನುವುದು ಅವರಿಗೆ ತಿಳಿದಿಲ್ಲ. ನಾವು ಮೂಗು ತೂರಿಸಬಹುದು. ಆದರೆ ಅಂತಹ ಕೆಲಸ ಮಾಡುವುದಿಲ್ಲ" ಎಂದು ಪರೋಕ್ಷವಾಗಿ ಜಿಲ್ಲೆಯ ಹಿರಿಯ ರಾಜಕಾರಣಿ ಆರ್ ವಿ. ದೇಶಪಾಂಡೆ ವಿರುದ್ಧ ಅಸಮಾಧಾನ ಹೊರಹಾಕಿದರು.

ದಿನಕರ ಶೆಟ್ಟಿಗೆ ತಿರುಗೇಟು ನೀಡಿದ ಸತೀಶ್ ಸೈಲ್ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೇಡಿ ಸಿಎಂ ಎಂದು ಹೇಳಿದ್ದ ಶಾಸಕ ದಿನಕರ್​ ಶೆಟ್ಟಿ "ನಾಲಿಗೆ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕು" ಎಂದು ಸತೀಶ್ ಸೈಲ್ ತಿರುಗೇಟು ನೀಡಿದರು. "ಶಾಸಕರು ಏನೇನೋ ಮಾತನಾಡುತ್ತಾರೆ. ಮಾತನಾಡುವಾಗ ಬ್ಲಾಸ್ಟ್ ಮಾಡಬೇಕು. ಆದರೆ ಬ್ಲಾಸ್ಟ್ ಮಾಡುವ ಮುನ್ನ ಕಂಟ್ರೋಲ್ ಮಾಡಿಕೊಳ್ಳುವುದನ್ನು ಶಾಸಕ ದಿನಕರ ಶೆಟ್ಟಿ ಕಲಿಯಬೇಕು" ಎಂದು ಹೇಳಿದರು.

"ನಮ್ಮ ಸರ್ಕಾರ ಇದ್ದಾಗಲೇ ಗೋಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗಳನ್ನು ಹಿಡಿದಿದ್ದಾರೆ. ಆರೋಪಿಗಳನ್ನು ಬಿಟ್ಟಿದ್ದಾರಾ, ಸಿದ್ದರಾಮಯ್ಯನವರು ಅಹಿಂದ ತತ್ವವನ್ನು ಪಾಲಿಸಿಕೊಂಡು ಬಂದಿದ್ದಾರೆ. ಜಾತಿ-ಮತ ಭೇದ ಯಾವುದನ್ನೂ ಮಾಡುವುದಿಲ್ಲ. ಒಳ್ಳೆಯ ಕೆಲಸ ಮಾಡಿ ಸಿದ್ದರಾಮಯ್ಯನವರು ಜನರಿಗೆ ಒಳ್ಳೆಯ ಸೇವೆ ನೀಡುತ್ತಿದ್ದಾರೆ" ಎಂದು ಸಮರ್ಥಿಸಿಕೊಂಡರು.

"ದಿನಕರ ಶೆಟ್ಟಿ ಅವರ ಕ್ಷೇತ್ರದಲ್ಲಿ ಏನಾದರು ಅಭಿವೃದ್ಧಿ ಆಗಿದ್ದರೆ ಅದು ಸಿದ್ದರಾಮಯ್ಯನವರ ಸರ್ಕಾರದಲ್ಲಿ. ಇದನ್ನು ಅವರು ಒಪ್ಪಲೇಬೇಕು. ನಾವು ಮಾಡಿದ ಸೇತುವೆಯನ್ನು ಅವರು ತಾವು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಸುಖಾಸುಮ್ಮನೇ ಟೀಕೆ ಮಾಡುವುದನ್ನು ನಿಲ್ಲಿಸಬೇಕು" ಎಂದರು.

ಅಲಗೇರಿ ವಿಮಾನ ನಿಲ್ದಾಣ ಪರಿಹಾರ ಸಂಬಂಧ ಸಿದ್ದರಾಮಯ್ಯನವರ ಪ್ರಯತ್ನದಿಂದ 11 ಕೋಟಿ ರೂ. ಹೆಚ್ಚುವರಿ ಹಣ ಬಂದಿದ್ದು ಜನರಿಗೆ ಪರಿಹಾರ ನೀಡಲಾಗುತ್ತಿದೆ. ಉತ್ತಮ ಕೆಲಸ ಮಾಡುವ ಮುಖ್ಯಮಂತ್ರಿಯನ್ನು ಬಿಜೆಪಿಗರು ಸಿದ್ದರಾಮುಲ್ಲಾ ಖಾನ್ ಎಂದು ಕರೆಯುತ್ತಾರೆ. ಸಿದ್ದರಾಮಯ್ಯನವರು ಎಂದೂ ಜಾತಿ ಭೇದ ಮಾಡದೇ ಎಲ್ಲರನ್ನು ಸರಿಸಮಾನವಾಗಿ ಕಾಣುವ ನಾಯಕರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಜೊತೆ ಅವರು ಜಂಟಿಯಾಗಿ ತೆಗೆದುಕೊಳ್ಳುವ ನಿರ್ಧಾರ ಎಂದೂ ಜನರಪರವಾಗಿ ಇರುತ್ತದೆ" ಎಂದರು.

ಇದನ್ನೂ ಓದಿ: ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆಗೆ ಷರತ್ತುಬದ್ಧ ಅನುಮೋದನೆ; 9 ಸಾವಿರ ಮರಗಳ ನಾಶ

Last Updated : Jan 29, 2025, 2:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.