ETV Bharat / state

ಆರೋಗ್ಯ ಇಲಾಖೆ ಯಾವುದೇ ಮಾಫಿಯಾದಲ್ಲಿ ಸಿಲುಕಲು ಸಾಧ್ಯವಿಲ್ಲ: ವಿಪಕ್ಷ ನಾಯಕನಿಗೆ ದಿನೇಶ್ ಗುಂಡೂರಾವ್ ತಿರುಗೇಟು - HEALTH MINISTER DINESH GUNDU RAO

ಆರೋಗ್ಯ ಸಚಿವ ದಿನೇಶ್​​​ ಗುಂಡೂರಾವ್​​, ನಮ್ಮ ಸರ್ಕಾರ ಯಾವುದೇ ಮಾಫಿಯಾದಲ್ಲಿ ಸಿಲುಕಿಕೊಂಡಿಲ್ಲ. ಕೋವಿಡ್ ಹಗರಣದ ಕುರಿತು ಮೊದಲು ಉತ್ತರ ನೀಡಲಿ ಎಂದು ಬಿಜೆಪಿಗೆ ಟಾಂಗ್​ ನೀಡಿದ್ದಾರೆ.

HEALTH MINISTER DINESH GUNDU RAO
ಆರೋಗ್ಯ ಸಚಿವ ದಿನೇಶ್​​​ ಗುಂಡೂರಾವ್ (ETV Bharat)
author img

By ETV Bharat Karnataka Team

Published : Dec 9, 2024, 11:27 AM IST

ಬೆಳಗಾವಿ: "ಬೆಳಗಾವಿಯಲ್ಲಿ ಇವತ್ತಿನಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಇಲಾಖೆಯ ಕುರಿತು ಗಂಭೀರ ಚರ್ಚೆ ನಡೆಯಲಿ. ಅದಕ್ಕೆ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ನಡೆದ ಘಟನೆಗಳ ಕುರಿತು ಸತ್ಯಾಂಶ ಸಹಿತ ಮಾತನಾಡಲಿ" ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಬಿಜೆಪಿ ನಾಯಕರಿಗೆ ಸವಾಲು ಎಸೆದರು.

ಅವರು ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, "ರಾಜ್ಯದಲ್ಲಿ ಬಾಣಂತಿಯರ ಮರಣಗಳಾಗುತ್ತವೆ. ಅವು ವೈದ್ಯಕೀಯ ಕಾರಣದಿಂದ ಅಂತ ಹೇಳಲು ಆಗುವುದಿಲ್ಲ. ವಿರೋಧ ಪಕ್ಷಗಳು ನಿಜವಾದ ಲೋಪದೋಷಗಳ ಬಗ್ಗೆ ಮಾತನಾಡಲಿ. ದೇಶದ ಆರೋಗ್ಯ ಸೇವೆಗಳಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ಬಾಣಂತಿಯರ ಮರಣ ವೈದ್ಯಕೀಯ ಕಾರಣಗಳಿಂದ ಆಗಿರಬಹುದು. ನಮ್ಮ ಸರ್ಕಾರ ಯಾವುದೇ ಮಾಫಿಯಾದಲ್ಲಿ ಸಿಲುಕಿಕೊಂಡಿಲ್ಲ. ಕೋವಿಡ್ ಹಗರಣದ ಕುರಿತು ಮೊದಲು ಉತ್ತರ ನೀಡಲಿ" ಎಂದರು.

ದಿನೇಶ್ ಗುಂಡೂರಾವ್ ತಿರುಗೇಟು (ETV Bharat)

"ಗರ್ಭಿಣಿಯರು ಬಳ್ಳಾರಿ ಆಸ್ಪತ್ರೆಗೆ ಮತ್ತೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ವೈದ್ಯರ ಕೊರತೆಯಿದೆ. ನಾವು ವೈದ್ಯಕೀಯ ನೇಮಕಾತಿಯಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡದೆ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ವೈದ್ಯಕೀಯ ಸಿಬ್ಬಂದಿಗಳು, ಸ್ಟಾಫ್​​ ನರ್ಸ್​ಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದರು.

ಬಿಜೆಪಿಯವರು ಕತ್ತಿ ತೆಗೆದುಕೊಂಡು ಹೊಡೆದಾಡುತ್ತಾರೆ ನೋಡಿ - ಸಚಿವ ಕೆ.ಎನ್​. ರಾಜಣ್ಣ: "ಬಿಜೆಪಿಯವರು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರೆ ನಾವು ಸ್ವಾಗತ ಮಾಡುತ್ತೇವೆ. ವಿಪಕ್ಷಗಳು ಸರ್ಕಾರದ ವೈಫಲ್ಯಗಳ ಬದಲು ಜನರ ಸಮಸ್ಯೆ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಅವರು ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡಬಾರದು ಎಂದು ವಿರೋಧ ಪಕ್ಷಗಳ ನಾಯಕರು ಅರಿತುಕೊಳ್ಳಬೇಕು" ಎಂದರು.

ಸಚಿವ ಕೆ.ಎನ್​. ರಾಜಣ್ಣ ಹೇಳಿಕೆ (ETV Bharat)

"ಉತ್ತರ ಕರ್ನಾಟಕ ಸಮಸ್ಯೆ ಜೊತೆಗೆ ರಾಜ್ಯದ ಸಮಸ್ಯೆ ಬಗ್ಗೆ ಪ್ರತಿಪಕ್ಷ ನಾಯಕರು ಗಮನ ಸೆಳೆಯಬೇಕು. ನಾವು ಮೊದಲಿನಿಂದಲೂ ಚಿಂತನೆ ನಡೆಸಿ ಹಾಸನದಲ್ಲಿ ಸಮಾವೇಶ ಮಾಡಿದ್ದೇವೆ. ವಿರೋಧಪಕ್ಷಗಳು ಜನರ ಸಮಸ್ಯೆಗಳನ್ನು ಬಗೆಹರಿಸಲು ಆಸಕ್ತಿ ತೋರಿಸಬೇಕು. ನಮ್ಮಲ್ಲಿ ಆಂತರಿಕ ಕಲಹ ಸೃಷ್ಟಿಸುವ ಬದಲು ಬಿಜೆಪಿಯವರು ಅವರವರೇ ಕತ್ತಿ ಹಿಡಿದು ಹೊಡೆದಾಡಿಕೊಳ್ಳುತ್ತಾರೆ ನೋಡಿ" ಎಂದು ಬಿಜೆಪಿ ನಾಯಕರ ಕಾಲು ಎಳೆದಿದ್ದಾರೆ ಸಹಕಾರ ಸಚಿವ ಕೆ. ಎನ್​. ರಾಜಣ್ಣ.

ಇದನ್ನೂ ಓದಿ: ಮೆಡಿಕ​​​ಲ್​​​​ ಮಾಫಿಯಾದಲ್ಲಿ ಸರ್ಕಾರ ಸಿಲುಕಿಕೊಂಡಿದೆ: ಆರ್.​ ಅಶೋಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.