ETV Bharat / state

ಹಾಸನದ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್ ಪಟೇಲ್ ₹41 ಕೋಟಿ ಆಸ್ತಿ ಒಡೆಯ - Shreyas Patel Assets

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 41 ಕೋಟಿ ರೂ ಮೌಲ್ಯದ ಚರ-ಸ್ಥಿರ ಆಸ್ತಿ ಹೊಂದಿರುವುದಾಗಿ ಅಫಿಡವಿಟ್​ನಲ್ಲಿ ಘೋಷಿಸಿದ್ದಾರೆ.

hassan-congress-candidate-shreyas-patel-declared-41-crores-worth-asset
41 ಕೋಟಿ ಆಸ್ತಿ ಘೋಷಿಸಿದ ಹಾಸನ ಕ್ಷೇತ್ರ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್ ಪಟೇಲ್
author img

By ETV Bharat Karnataka Team

Published : Apr 1, 2024, 9:24 PM IST

ಹಾಸನ: ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇಂದು ನಾಮಪತ್ರ ಸಲ್ಲಿಸಿದರು. ಇವರು ತಮ್ಮ ಅಫಿಡವಿಟ್​ನಲ್ಲಿ ಘೋಷಿಸಿಕೊಂಡಿರುವಂತೆ 41 ಕೋಟಿ ರೂ. ಮೌಲ್ಯದ ಚರ-ಸ್ಥಿರ ಆಸ್ತಿ ಹೊಂದಿದ್ದಾರೆ. ಪತ್ನಿ ಅಕ್ಷತಾ ಹೆಸರಿನಲ್ಲೂ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಶ್ರೇಯಸ್ ಪಟೇಲ್ ಬಳಿ 1.25 ಲಕ್ಷ ರೂ ನಗದು, ಪತ್ನಿ ಬಳಿ 3.94 ಲಕ್ಷ ರೂ ನಗದು, ವಿವಿಧ ಬ್ಯಾಂಕ್‌ನಲ್ಲಿ 6.23 ಲಕ್ಷ ರೂ ಠೇವಣಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಶ್ರೇಯಸ್ ಪಟೇಲ್ ಪತ್ನಿಗಿಂತ ಹೆಚ್ಚು ಚಿನ್ನಾಭರಣ ಹೊಂದಿದ್ದು, 59.65 ಲಕ್ಷ‌ ಬೆಲೆ ಬಾಳುವ ಆಭರಣಗಳಿವೆ. ಪತ್ನಿ ಬಳಿ 22 ಲಕ್ಷ ಬೆಲೆ ಬಾಳುವ 450 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ಇದೆ. ಒಟ್ಟು 1 ಕೋಟಿ 40 ಲಕ್ಷದ 96 ಸಾವಿರದ 246 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 31 ಲಕ್ಷದ 14 ಸಾವಿರದ 917 ರೂ ಮೌಲ್ಯದ ಚರಾಸ್ತಿ ಇದೆ. ಶ್ರೇಯಸ್ ಅವರು ಪತ್ನಿ, ಸ್ನೇಹಿತರು ಹಾಗೂ ಬಂಧುಗಳಿಂದ 50 ಲಕ್ಷ ರೂ ಹಾಗೂ ತಾಯಿಯಿಂದ 3.64 ಲಕ್ಷ, ವ್ಯಕ್ತಿಯೊಬ್ಬರಿಂದ 88 ಲಕ್ಷ ಸಾಲ‌ ಪಡೆದಿದ್ದಾರೆ.

20 ಎಕರೆ ಕೃಷಿ ಭೂಮಿ ಒಡೆಯನಾಗಿರುವ ಶ್ರೇಯಸ್, ಬೆಂಗಳೂರು ಹಾಗೂ ಹೊಳೆನರಸೀಪುರದ ವಿವಿಧೆಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಒಟ್ಟು 39 ಕೋಟಿ 58 ಲಕ್ಷದ 6 ಸಾವಿರದ 482 ರೂ ಮೌಲ್ಯದ ಕೃಷಿಯೇತರ ಭೂಮಿ ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರಾಗಿದ್ದಾರೆ. ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ 1.36 ಕೋಟಿ ಬೆಲೆ ಬಾಳುವ ಒಂದು ನಿವೇಶನ ಹಾಗೂ ಮನೆ ಹೊಂದಿರುವ ಶ್ರೇಯಸ್ ಪಟೇಲ್, ಒಟ್ಟು 40 ಕೋಟಿ 99 ಲಕ್ಷದ 2 ಸಾವಿರದ 728 ರೂ ಮೌಲ್ಯದ ಆಸ್ತಿಯ ಒಡೆಯ.

ಪತ್ನಿ ಹೆಸರಿನಲ್ಲಿ ಒಟ್ಟು 1.68 ಕೋಟಿ ಚರ ಮತ್ತು ಸ್ಥಿರಾಸ್ತಿ ಇದೆ. ಒಂದು ಇನ್ನೋವಾ ಕಾರು, ಒಂದು ಟ್ರ್ಯಾಕ್ಟರ್ ಹೊಂದಿರುವ ಶ್ರೇಯಸ್ ತಮ್ಮ ಬಳಿ 65 ಸಾವಿರದ ಮೊಬೈಲ್ ಫೋನ್​ ಹಾಗೂ ಪತ್ನಿ ಬಳಿ 55 ಸಾವಿರದ ಮೊಬೈಲ್ ಫೋನ್​ ಹೊಂದಿರುವ ಬಗ್ಗೆ ಆಸ್ತಿ ವಿವರದಲ್ಲಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ರಾಜವಂಶಸ್ಥರಿಗೆ ಸ್ವಂತ ಕಾರಿಲ್ಲ!: ಚುನಾವಣಾ ಅಫಿಡವಿಟ್​ನಲ್ಲಿ ಯದುವೀರ್ ಸಲ್ಲಿಸಿದ ಆಸ್ತಿ ವಿವರ ಹೀಗಿದೆ - Yaduveer Asset Details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.