ETV Bharat / state

ವಾಣಿಜ್ಯ ನಗರಿಯಲ್ಲಿ ಕಳೆಗಟ್ಟಿದ ಒಣ ಮೆಣಸಿನಕಾಯಿ ಮೇಳ: ಮೊದಲ ದಿನವೇ ಉತ್ತಮ ಸ್ಪಂದನೆ - ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ

ಹುಬ್ಬಳ್ಳಿಯಲ್ಲಿ ನಡೆದ 12ನೇ ಒಣಮೆಣಸಿನಕಾಯಿ ಮೇಳಕ್ಕೆ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ವಿದ್ಯುಕ್ತ ಚಾಲನೆ ನೀಡಿದರು.

Minister Santosh Lad received information from the farmers.
ರೈತರಿಂದ ಸಚಿವ ಸಂತೋಷ್ ಲಾಡ್ ಮಾಹಿತಿ ಪಡೆದರು.
author img

By ETV Bharat Karnataka Team

Published : Feb 2, 2024, 8:16 PM IST

ವಾಣಿಜ್ಯ ನಗರಿಯಲ್ಲಿ ಕಳೆಗಟ್ಟಿದ ಒಣ ಮೆಣಸಿನಕಾಯಿ ಮೇಳ: ಮೊದಲ ದಿನವೇ ಉತ್ತಮ ಸ್ಪಂದನೆ

ಹುಬ್ಬಳ್ಳಿ: ಮೂರು ಸಾವಿರ ಮಠದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 12ನೇ ಒಣಮೆಣಸಿನಕಾಯಿ ಮೇಳಕ್ಕೆ ಮೊದಲ ದಿನವೇ ಕಳೆಗಟ್ಟಿತ್ತು. ಮೊದಲ ದಿನದ ಒಣ ಮೆಣಸಿನಕಾಯಿ ಮೇಳಕ್ಕೆ ಇಂದು ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರು ವಿದ್ಯುಕ್ತ ಚಾಲನೆ ನೀಡಿದರು.

ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಹಾಗೂ ಅಮರಗೋಳದ ಉಳುವ ಯೋಗಿ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಮೇಳ ಆಯೋಜಿಸಿದ್ದು, ಮೇಳದಲ್ಲಿ ವಿವಿಧ ಜಿಲ್ಲೆ ಸೇರಿದಂತೆ ಅವಳಿ ನಗರದ ಅಪಾರ ಜನರು ಭಾಗವಹಿಸಿದ್ದರು.

ವಿವಿಧ ತಳಿ ಒಣಮೆಣಸಿನಕಾಯಿ ಪ್ರದರ್ಶನ: ಕುಂದಗೋಳ, ಬ್ಯಾಡಗಿ ಭಾಗದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಬೆಳೆದ ಮೆಣಸಿನಕಾಯಿಗೆ ದೇಶಾದ್ಯಂತ ಅಪಾರ ಬೇಡಿಕೆ‌ ಇದೆ. ಈ ಭಾಗದ ಉತ್ಪನ್ನಗಳನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಕೆಲಸವನ್ನು ಸಾಂಬಾರು ಮಂಡಳಿ ಮಾಡುತ್ತಿರುವುದು ವಿಶೇಷವಾಗಿದೆ. ಧಾರವಾಡ, ಹಾವೇರಿ, ಗದಗ ಸೇರಿದಂತೆ ಸುತ್ತಲಿನ ತಾಲೂಕುಗಳ ರೈತರು ಮೇಳದಲ್ಲಿ ಭಾಗವಹಿಸಿದ್ದು, ಸುಮಾರು ನೂರು ಮಳಿಗೆಗಳಲ್ಲಿ ವಿವಿಧ ತಳಿಯ ಒಣಮೆಣಸಿನ ಕಾಯಿ ಮಾರಾಟಕ್ಕೆ ತೆರೆಯಲಾಗಿತ್ತು.

ಗುಣಮಟ್ಟದ ಒಣಮೆಣಸಿನಕಾಯಿ: ವರ್ಷದಿಂದ ವರ್ಷಕ್ಕೆ ವಾಣಿಜ್ಯ ನಗರಿಯಲ್ಲಿ ಆಯೋಜಿಸುತ್ತಿರುವ ಒಣಮೆಣಸಿನಕಾಯಿ ಮೇಳಕ್ಕೆ ಗ್ರಾಹಕರು,ರೈತರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇನ್ನು ಗ್ರಾಹಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಖರೀದಿಗೆ ಮುಗಿ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಈ ಮೇಳದಲ್ಲಿ ರೈತರಿಗೆ ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕುತ್ತಿದ್ದರೆ, ಗ್ರಾಹಕರಿಗೆ ಗುಣಮಟ್ಟದ ಒಣಮೆಣಸಿನ ಕಾಯಿ ಸಿಗುತ್ತಿರುವುದು ಖುಷಿ ತರಿಸಿದೆ. ಒಣಮೆಣಸಿನ ಕಾಯಿ ಬೆಲೆ‌ಯಲ್ಲಿ ಹೆಚ್ಚು ಕಡಿಮೆ ಇದ್ದರೂ, ರೈತರು ಹಾಗೂ ಗ್ರಾಹಕರನ್ನೂ ಒಂದು ಕಡೆ ಸೇರಿಸಿ ಸಂಪರ್ಕ ಸೇತುವೆ ಆಗಿ ಕಾರ್ಯ ನಿರ್ವಹಿಸುತ್ತಿರುವ ಈ ಮೇಳ ಸಹಕಾರಿಯಾಗಿದೆ.

ಮೇಳದಿಂದ ರೈತರು ಗ್ರಾಹಕರಿಗೆ ಅನುಕೂಲ: ಮೇಳಕ್ಕೆ ಚಾಲನೆ ನೀಡಿದ ಬಳಿಕ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಒಣ ಮೆಣಸಿನಕಾಯಿ ಮೇಳ ಆಯೋಜನೆಯಿಂದ ರೈತರು ಗ್ರಾಹಕರು ಅನುಕೂಲವಾಗಿದೆ. ನಾವೂ ಹಾಗೂ ಶಾಸಕ ಪ್ರಸಾದ ಅಬ್ಬಯ್ಯನವರು ಸಹ ಎಲ್ಲ ಮಳಿಗೆಗಳನ್ನು ನೋಡಿದೆವು, ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.

ಇದನ್ನೂಓದಿ:ದೇಶ ವಿಭಜನೆಯ ಬಗ್ಗೆ ಡಿಕೆಶಿ ಹೇಳಿಕೆ: ಮತದ ಆಸೆಗೆ ದೇಶ ಬೇರ್ಪಡಿಸುವ ಹೇಳಿಕೆ ನೀಡಿದ್ದಾರೆ: ಬೆಲ್ಲದ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.