ETV Bharat / state

ಕಾವೇರಿದ ನಗರಸಭೆ ಚುನಾವಣೆ: 28 ಜನ ಸದಸ್ಯರು ಗುಪ್ತ ಸ್ಥಳಕ್ಕೆ - Municipal Council Election - MUNICIPAL COUNCIL ELECTION

ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆಯಾಗಿದ್ದು, ಅಧ್ಯಕ್ಷ ಗಾದಿಯನ್ನು ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ನಡೆಸಿವೆ. ಮೊದಲ ಬಾರಿಗೆ ಬಿಜೆಪಿ ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎಂಬ ಕಾರಣಕ್ಕೆ ಹಲವು ತಂತ್ರಗಳನ್ನು ಹೆಣೆದಿದೆ.

GANGAVATI MUNICIPAL  ELECTION IN GANGAVATI  MAYOR ELECTION  KOPPAL
28 ಜನ ಸದಸ್ಯರು ಗುಪ್ತ ಸ್ಥಳಕ್ಕೆ (ETV Bharat)
author img

By ETV Bharat Karnataka Team

Published : Aug 20, 2024, 1:50 PM IST

ಗಂಗಾವತಿ (ಕೊಪ್ಪಳ): ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ. ಅಧ್ಯಕ್ಷ ಗಾದಿಯನ್ನು ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ನಡೆಸಿವೆ. ಮೊದಲ ಬಾರಿಗೆ ಬಿಜೆಪಿ ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎಂಬ ಕಾರಣಕ್ಕೆ ಹಲವು ತಂತ್ರಗಳನ್ನು ಹೆಣೆದಿದೆ. ಶಾಸಕ ಜಿ. ಜನಾರ್ದನರೆಡ್ಡಿ ನೇತೃತ್ವದಲ್ಲಿ ಬಿಜೆಪಿ ನಾಯಕರು ತಂತ್ರಗಾರಿಕೆ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿದಂತೆ ನಗರಸಭೆಯ ಒಟ್ಟು 28ಕ್ಕೂ ಹೆಚ್ಚು ಸದಸ್ಯರನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಒಟ್ಟು 35 ಸದಸ್ಯರ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 17, ಬಿಜೆಪಿಯಿಂದ 14, ಜೆಡಿಎಸ್ ಪಕ್ಷದಿಂದ ಇಬ್ಬರು ಮತ್ತು ಪಕ್ಷೇತರ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ನಗರಸಭೆಯ ಆಡಳಿತದ ಕೊನೆಯ ಹದಿನೆಂಟು ತಿಂಗಳ ಅಧಿಕಾರಕ್ಕಾಗಿ ಇದೀಗ ಎರಡೂ ಪಕ್ಷಗಳು ಭಾರಿ ಕಸರತ್ತು ನಡೆಸಿವೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕ ರೆಡ್ಡಿಯ ಜೊತೆ ಬಿಜೆಪಿಯ ಐವರು, ಕಾಂಗ್ರೆಸ್ ಪಕ್ಷ ಆರು ಜನ ಮತ್ತು ಜೆಡಿಎಸ್ ಪಕ್ಷದ ಇಬ್ಬರು ಮತ್ತು ಪಕ್ಷೇತರ ಸದಸ್ಯ ಒಬ್ಬರು ಸೇರಿದಂತೆ ಒಟ್ಟು 14 ಜನ ಸದಸ್ಯರು ಗುರುತಿಸಿಕೊಂಡಿದ್ದರು. ಶಾಸಕ ಜನಾರ್ದರೆಡ್ಡಿ ಬಿಜೆಪಿ ಸೇರಿದ ಬಳಿಕ ಇದೀಗ ಬಿಜೆಪಿಯ 14, ಜೆಡಿಎಸ್, ಪಕ್ಷೇತರ ತಲಾ ಇಬ್ಬರು ಸದಸ್ಯರು ರೆಡ್ಡಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಹತ್ತು ಸದಸ್ಯರು ರೆಡ್ಡಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹೀಗಾಗಿ ಒಟ್ಟು 28 ಜನ ಸದಸ್ಯರನ್ನು ಬಿಜೆಪಿಯ ನಾಯಕರು ಗಂಗಾವತಿಯಿಂದ ಶಿಫ್ಟ್ ಮಾಡಿದ್ದು, ಬೆಂಗಳೂರಿನ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆ.26ರಂದು ಚುನಾವಣೆ ಘೋಷಣೆಯಾಗಿದ್ದು, ಬಹುಶಃ ಅದೇ ದಿನ ನೇರವಾಗಿ ಸದಸ್ಯರು ನಗರಕ್ಕೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ.

ಅಧ್ಯಕ್ಷ ಸ್ಥಾನದ ಅಕಾಂಕ್ಷಿಗಳು: ಬಿಜೆಪಿಯಲ್ಲಿ ಈಗಾಗಲೇ 28 ಜನ ಸದಸ್ಯರಿದ್ದಾರೆ ಎಂದು ಗೊತ್ತಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೂಲ ಬಿಜೆಪಿ ಸದಸ್ಯರಾದ ಪರಶುರಾಮ ಮಡ್ಡೇರ, ಅಜಯ್ ಬಿಚ್ಚಾಲಿ, ಕಟ್ಟಿಮನಿ ನೀಲಕಂಠ, ಹೀರಾಬಾಯಿ ನಾಗರಾಜ್ ಅವರ ಹೆಸರು ಕೇಳಿ ಬರುತ್ತಿವೆ. ಅಲ್ಲದೇ ರೆಡ್ಡಿಯನ್ನೆ ನಂಬಿಕೊಂಡು ಬಂದಿರುವ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಸದಸ್ಯರಾದ ಮುಸ್ತಾಕ್ ಅಲಿ, ಮೌಲಸಾಬ್, ಜೆಡಿಎಸ್ ಪಕ್ಷದ ಸದಸ್ಯರಾದ ಉಸ್ಮಾನ್ ಬಿಚ್ಚುಗತ್ತಿ ಹಾಗೂ ಜಬ್ಬಾರ್ ಬಿಚ್ಚುಗತ್ತಿ ಅವರ ಹೆಸರು ಪ್ರಸ್ತಾಪವಾಗುತ್ತಿವೆ ಎಂದು ಗೊತ್ತಾಗಿದೆ.

17 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆಯಿಂದಾಗಿ ಆಡಳಿತ ಕೈತಪ್ಪುವ ಭೀತಿ ಎದುರಾಗಿದೆ. ಕಳೆದ ಎರಡು ದಶಕಗಳ ಕಾಲದಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರ ಹಿಡಿತದಲ್ಲಿರುವ ನಗರಸಭೆ ಈ ಬಾರಿ ಕೈ ತಪ್ಪುವ ಆತಂಕ ಸದಸ್ಯರಿಗೆ ಎದುರಾಗಿದೆ.

ಓದಿ: ಗಂಗಾವತಿ: ಬೆಟ್ಟದಿಂದ ಉರುಳಿದ ಕಲ್ಲುಬಂಡೆ, 20ಕ್ಕೂ ಹೆಚ್ಚು ಜನರ ಜೀವ ಉಳಿಸಿತು ಪೈಪ್​ಲೈನ್! - boulder rolled down

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.