ETV Bharat / state

ಕಾರವಾರ: ಯುವಕರ ದೇಶಸೇವೆಯ ಕನಸು ನನಸಾಗಿಸಲು ಉಚಿತ ಸೇನಾ ತರಬೇತಿ - Free Army Training

ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಸರಕಾರದ ವತಿಯಿಂದ ಆರಂಭಿಸಲಾಗಿರುವ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆಪೂರ್ವ ಉಚಿತ ತರಬೇತಿ ಶಾಲೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ತರಬೇತಿ ಪಡೆದ ಅನೇಕ ಯುವಕರು ಸೇನೆ ಸೇರಿದ್ದಾರೆ.

free Army training  Army free training for youth  Uttara Kannada  Karwar
ಯುವಕರಿಗೆ ಉಚಿತ ಸೇನಾ ತರಬೇತಿ (ETV Bharat)
author img

By ETV Bharat Karnataka Team

Published : Jul 8, 2024, 7:12 AM IST

ಕಾರವಾರ: ಸೇನಾಪಡೆಗಳನ್ನು ಸೇರಿ ದೇಶಸೇವೆ ಮಾಡಬೇಕು ಎಂಬುದು ಅನೇಕ ಯುವಕರ ಕನಸು ಮತ್ತು ಗುರಿ. ಆದರೆ, ಕಠಿಣ ಆಯ್ಕೆ ಪ್ರಕ್ರಿಯೆಗಳು, ಅರ್ಹತೆ, ತರಬೇತಿ ಸೇರಿದಂತೆ ಮಾಹಿತಿ ಕೊರತೆಯಿಂದ ನೇರವಾಗಿ ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಭಾಗವಹಿಸಿ, ಆಯ್ಕೆಯಾಗುವಲ್ಲಿ ವಿಫಲರಾದವರ ಸಂಖ್ಯೆಯೇ ಅಧಿಕ.

ಯುವ ಜನತೆಯ ಈ ಸಮಸ್ಯೆಗೆ ಪರಿಹಾರವೆಂಬಂತೆ, ಉತ್ತರಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಸರಕಾರದ ವತಿಯಿಂದಲೇ ಆರಂಭಿಸಲಾಗಿರುವ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ಉಚಿತ ತರಬೇತಿ ಶಾಲೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಅನೇಕ ಯುವಕರು ಇಲ್ಲಿಂದ ತರಬೇತಿ ಪಡೆದು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ರಾಜ್ಯ ಹಿಂದುಳಿಗ ವರ್ಗಗಳ ಇಲಾಖೆಯ ವತಿಯಿಂದ ಆರಂಭಿಸಲಾಗಿರುವ ಈ ತರಬೇತಿ ಶಾಲೆಯಲ್ಲಿ, ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ ಮತ್ತು ವಸತಿ ಸೌಲಭ್ಯಗಳೊಂದಿಗೆ ನೀಡಲಾಗುತ್ತಿದೆ. ಇಲ್ಲಿನ ತರಬೇತಿ ಅವಧಿ 4 ತಿಂಗಳು. ಪ್ರತೀ ಬ್ಯಾಚ್​ನಲ್ಲಿ 100 ಜನರಂತೆ ವರ್ಷದಲ್ಲಿ 3 ಬ್ಯಾಚ್‌ಗಳಿಗೆ ತರಬೇತಿ ನೀಡಲಾಗುತ್ತಿದೆ.

ಅರ್ಹತೆಗಳೇನು?: ಸೇನಾ ತರಬೇತಿ ಶಾಲೆ ಸೇರಲು ಅಭ್ಯರ್ಥಿಯು ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ರಾಜ್ಯ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗಳ ಅಭ್ಯರ್ಥಿಯಾಗಿರಬೇಕು. 10ನೇ ತರಗತಿಯಲ್ಲಿ ಉತ್ತೀರ್ಣನಾಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಪಡೆದಿರಬೇಕು. ಸರಾಸರಿ ಶೇ 45 ಅಂಕ ಪಡೆದಿರಬೇಕು. 17ರಿಂದ 20 ವರ್ಷ ವಯೋಮಿತಿ. ಒಬ್ಬ ಅಭ್ಯರ್ಥಿಯು ಒಂದು ಬಾರಿ ಮಾತ್ರ ಈ ತರಬೇತಿ ಸೌಲಭ್ಯ ಪಡೆಯಬಹುದಾು. ಅಭ್ಯರ್ಥಿಗೆ ಆಟದ ಮೈದಾನ, ಉಚಿತ ಊಟ ಹಾಗೂ ವಸತಿ ಸೌಲಭ್ಯ, ಒಂದು ಜೊತೆ ಟ್ರ‍್ಯಾಕ್ ಸೂಟ್, ದೈಹಿಕ ತರಬೇತಿಗೆ ಅಗತ್ಯವಾದ ಒಂದು ಜೊತೆ ಸಮವಸ್ತ್ರ ಹಾಗೂ ಶೂಗಳನ್ನು ವಿತರಿಸಲಾಗುತ್ತದೆ.

ಆಯ್ಕೆ ಹೇಗೆ?: ಈ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ದೈಹಿಕ ಅರ್ಹತೆಗಳಾದ, ಕನಿಷ್ಠ 50 ಕೆಜಿ ತೂಕ, 166 ಸೆಂ.ಮೀ ಎತ್ತರ, ಎದೆಯ ಸುತ್ತಳತೆ (77+5) ಹಾಗೂ 1.6 ಕಿಮೀ ದೂರವನ್ನು 6 ನಿಮಿಷದಲ್ಲಿ ಪೂರ್ಣಗೊಳಿಸುವ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದರಿಗೆ 4 ತಿಂಗಳ ಸೇನಾ ಪೂರ್ವ ಆಯ್ಕೆ ಕುರಿತು ಮಾಜಿ ಸೈನಿಕರಿಂದ ದೈಹಿಕ ಸಹಿಷ್ಣುತಾ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನುರಿತ ತರಬೇತುದಾರಿಂದ ಸೇನಾ ಲಿಖಿತ ಪರೀಕ್ಷೆಗೆ ತರಬೇತಿ ಸೇರಿದಂತೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ವೃತ್ತಿ ಮಾರ್ಗದರ್ಶನ ನೀಡಲಾಗುತ್ತದೆ.

free Army training  Army free training for youth  Uttara Kannada  Karwar
ಯುವಕರಿಗೆ ಉಚಿತ ಸೇನಾ ತರಬೇತಿ (ETV Bharat)

ಅಭ್ಯರ್ಥಿಗಳಿಗೆ ಲಿಖಿತ ತರಬೇತಿಯ ಬೋಧನೆಯಲ್ಲಿ ಜನರಲ್ ಇಂಗ್ಲಿಷ್, ಸಾಮಾನ್ಯ ಜ್ಞಾನ, ಅಂಕಗಣಿತ ಮತ್ತು ದೈಹಿಕ ಸಹಿಷ್ಣುತಾ ತರಬೇತಿಯ ಬೋಧನೆಯಲ್ಲಿ, ರನ್ನಿಂಗ್, ಚೈನ್ ಅಪ್‌ಬಾರ್, ಲಾಂಗ್‌ಜಂಪ್, ಎದೆ ಉಬ್ಬಿಸುವುದು, ಪುಶ್‌ಅಪ್, ಫುಲ್ ಅಪ್, ಶಾರ್ಟ್​ರನ್​, 5ಎಂ ಸಟಲ್, ತರಬೇತಿಯನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ 3 ಬಾರಿ ಪರೀಕ್ಷೆಗಳನ್ನು ನಡೆಸಿ, ಅಭ್ಯರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.

2022-23ನೇ ಸಾಲಿನಲ್ಲಿ 2 ಬ್ಯಾಚ್‌ಗಳಲ್ಲಿ ತರಬೇತಿ ನೀಡಿದ 147 ಅಭ್ಯರ್ಥಿಗಳಲ್ಲಿ 31 ಅಭ್ಯರ್ಥಿಗಳು ಅಗ್ನಿವೀರ್ ಹುದ್ದೆಗೆ ನೇಮಕಗೊಂಡಿದ್ದು, ಇದರಲ್ಲಿ 6 ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. 2023-24ನೇ ಸಾಲಿನಲ್ಲಿ 84 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 27 ಅಭ್ಯರ್ಥಿಗಳು ಅಗ್ನಿವೀರ್ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, ದೈಹಿಕ ಸಹಿಷ್ಣುತಾ ಪರೀಕ್ಷೆಯ ನಿರೀಕ್ಷೆಯಲ್ಲಿರುತ್ತಾರೆ. ಇದರಲ್ಲಿ 8 ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿರುತ್ತಾರೆ.

ಈ ಕೇಂದ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಭಾರತೀಯ ಸೇನಾ ಪಡೆ ಮಾತ್ರವಲ್ಲದೇ, ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಶಸ್ತ್ರ ಸೀಮಾ ಬಲ್ ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ರಾಜ್ಯ ಪೊಲೀಸ್ ಸೇವೆಗಳು ಸೇರಿದಂತೆ ಇತರೆ ಎಲ್ಲಾ ಯೂನಿಫಾರ್ಮ್ ಸೇವೆಗಳಿಗೆ ಸೇರ್ಪಡೆಯಾಗಲು ಅಗತ್ಯವಿರುವ ಸಮಗ್ರ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ: ಉತ್ತರಕನ್ನಡಲ್ಲಿ ವರುಣಾರ್ಭಟ: ಕರಾವಳಿ ತಾಲೂಕುಗಳ ಶಾಲೆಗಳಿಗೆ ಸೋಮವಾರವೂ ರಜೆ - Rain In Uttara Kannada

ETV Bharat Logo

Copyright © 2024 Ushodaya Enterprises Pvt. Ltd., All Rights Reserved.