ETV Bharat / health

ಮೂಲವ್ಯಾಧಿ ಸೇರಿ ಹಲವು ರೋಗಗಳಿಗೆ ಅತ್ಯುತ್ತಮ ಪರಿಹಾರ: ಆಯುರ್ವೇದದಲ್ಲಿ ಈ ಸಸ್ಯಕ್ಕಿದೆ ಉನ್ನತ ಸ್ಥಾನ! - HEALTH BENEFITS OF APAMARGA PLANT

Achyranthes aspera: ಆಯುರ್ವೇದದಲ್ಲಿ ಉತ್ತರಾಣಿ (Achyranthes aspera) ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಚಿಕ್ಕ ಮುಳ್ಳುಗಳಿರುವ ಈ ಸಸ್ಯವನ್ನು ಸ್ಥಳೀಯ ಔಷಧಿಯಾಗಿ ಬಳಸಲಾಗುತ್ತದೆ. ಉತ್ತರಾಣಿ ಸಸ್ಯದಿಂದ ಲಭಿಸುವ ಆರೋಗ್ಯದ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

APAMARGA PLANT  ACHYRANTHES ASPERA PLANT  Health benefits of apamarga plant
ಉತ್ತರಾಣಿ ಸಸ್ಯ (CANVA)
author img

By ETV Bharat Karnataka Team

Published : Oct 6, 2024, 6:01 AM IST

Health benefits of apamarga plant: ಚಿರಚಿರ, ಅಪಮಾರ್ಗ, ಅಧೋಘಂಟಾ, ಅಧ್ವಶಲ್ಯ, ಅಘಮಾರ್ಗವ್, ಅಪಂಗ್, ಸಫೇದ್ ಅಘೇದೋ, ಅಂಗಾದಿ, ಅಂಧೇದಿ, ಅಘೇದ, ಕಡಲಾಡಿ, ಕಟ್ಲಾಟಿ, ಉತ್ತರಾಣಿ ಹೀಗೆ ಹಲವು ಹೆಸರುಗಳಿಂದ ಅಚಿರಾಂಥೆಸ್ ಆಸ್ಪರ್ (Achyranthes aspera) ಸಸ್ಯವನ್ನು ಕರೆಯಲಾಗುತ್ತದೆ. ಉತ್ತರಾಣಿ ಸಸ್ಯವು ವೈದಿಕ ಸಾಹಿತ್ಯದಲ್ಲಿ ಉಲ್ಲೇಖಿಸಲಾದ ಪ್ರಮುಖ ಮತ್ತು ಸುಲಭವಾಗಿ ಲಭ್ಯವಿರುವ ಆಯುರ್ವೇದ ಮೂಲಿಕೆಯಾಗಿದೆ. ಉತ್ತರಾಣಿಯನ್ನು ಸಸ್ಯಶಾಸ್ತ್ರೀಯವಾಗಿ Achyranthes aspera Linn ಎಂದು ಕರೆಯಲಾಗುತ್ತದೆ. ಮತ್ತು ಇಂಗ್ಲಿಷ್‌ನಲ್ಲಿ ಇದನ್ನು ಪ್ರಿಕ್ಲಿ ಚಾಫ್ ಫ್ಲವರ್ ಎಂದು ಹೇಳಲಾಗುತ್ತದೆ. ಇದು ನೆಟ್ಟಗೆ, ಅನೇಕ ಕವಲೊಡೆಯುವ, ವಿವಿಧೆಡೆ ಹಬ್ಬು ಸಸ್ಯವಾಗಿದ್ದು, ಇದು ಹಲವು ವರ್ಷಗಳವರೆಗೆ ಜೀವಿಸುತ್ತದೆ.

ರಸ್ತೆಬದಿಯಲ್ಲಿ ಹೆಚ್ಚು ಬೆಳೆಯುತ್ತೆ: ಉತ್ತರಾಣಿ ಸಸ್ಯವು 6 ರಿಂದ 7 ಅಡಿ ಎತ್ತರದವರೆಗೆ ಬೆಳೆಯುತ್ತದೆ. ಇದನ್ನು ಸಾಮಾನ್ಯವಾಗಿ ಚೆಫ್ ಫ್ಲವರ್, ಪ್ರಿಕ್ಲಿ ಚಾಫ್ ಫ್ಲವರ್, ಡೆವಿಲ್ಸ್ ಹಾರ್ಸ್‌ವಿಪ್ ಎಂದು ಕರೆಯಲಾಗುತ್ತದೆ. ಸಸ್ಯ ಹಾಗೂ ಅದರ ಎಲ್ಲಾ ಭಾಗಗಳಾದ ಬೇರುಗಳು, ಬೀಜಗಳು, ಎಲೆಗಳು, ಹೂವುಗಳು ಮತ್ತು ಹಣ್ಣುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದು ಮುಖ್ಯವಾಗಿ ಉಷ್ಣವಲಯದ ಏಷ್ಯನ್, ಆಫ್ರಿಕನ್, ಉಷ್ಣ ವಲಯಗಳಲ್ಲಿ ಕಂಡುಬರುತ್ತದೆ. ಇದು ಆಸ್ಟ್ರೇಲಿಯಾ ಮತ್ತು ಅಮೆರಿಕ, ಸಿಲೋನ್, ಬಲೂಚಿಸ್ತಾನ್‌ನಲ್ಲಿಯೂ ಬೆಳೆಯುತ್ತದೆ.

ಭಾರತದಲ್ಲಿ ಇದು ಮುಖ್ಯವಾಗಿ ರಸ್ತೆಬದಿಯಲ್ಲಿ ಬೆಳೆಯುತ್ತದೆ. ಉತ್ತರಾಣಿ ಆಯುರ್ವೇದದಲ್ಲಿ ಉರಿಯೂತ ನಿವಾರಕವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಪ್ರಮುಖ ಔಷಧೀಯ ಗುಣಗಳನ್ನು ಹೊಂದಿದೆ. ಕೆಮ್ಮು, ಬ್ರಾಂಕೈಟಿಸ್ ಮತ್ತು ಸಂಧಿವಾತ, ಮಲೇರಿಯಾ ಜ್ವರ, ಭೇದಿ, ಆಸ್ತಮಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಆಯುರ್ವೇದದಿಂದ ತಿಳಿದುಬರುತ್ತದೆ.

ಹಲವು ರೋಗಗಳಿಗೆ ಮದ್ದು: ಅಥರ್ವವೇದದಲ್ಲಿ, ಉತ್ತರಾಣಿ ಸಸ್ಯವನ್ನು ಭೂಮಿಯ ಮೇಲೆ ಬೆಳೆಯುವ ಎಲ್ಲಾ ಸಸ್ಯಗಳ ದೇವರು ಎಂದು ಪರಿಗಣಿಸಲಾಗಿದೆ. ಇದು ಬಂಜೆತನ, ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಉತ್ತರಾಣಿ ಸಸ್ಯವು ಆಯುರ್ವೇದದ ಪ್ರಕಾರ, ಇದು ಶಿರೋ ವಿರೇಚನ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಕಿವಿ ರೋಗಗಳು, ಹುಳುಗಳ ಸೋಂಕು ಸೇರಿದಂತೆ ಇತರ ಅನೇಕ ರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಕಫ ಮತ್ತು ವಾತ ದೋಷಗಳನ್ನು ಹೋಗಲಾಡಿಸುತ್ತದೆ. ಉತ್ತರಾಣಿ ಸಸ್ಯವು ಪುಡಿ, ಪೇಸ್ಟ್ ಮತ್ತು ತಾಜಾ ರಸ ರೂಪದಲ್ಲಿ ಬಳಸಲಾಗುತ್ತದೆ. ಉತ್ತರಾಣಿ ಸಸ್ಯದಲ್ಲಿ ಎರಡು ವಿಧಗಳಿವೆ, ಒಂದು ಬಿಳಿ ಉತ್ತರಾಣಿ ಸಸ್ಯ (ಅಚಿರಾಂಥೆಸ್ ಆಸ್ಪೆರಾ) ಮತ್ತು ಇನ್ನೊಂದು ಕೆಂಪು ಉತ್ತರಾಣಿ ಸಸ್ಯ (ಪುಪ್ಪಲಿಯಾ ಲ್ಯಾಪೆಸಿ).

ಈ ಆಯುರ್ವೇದ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ: Achyranthes aspera (Chirchira) ಉತ್ತರಾಣಿ ಸಸ್ಯಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಆಯುರ್ವೇದ ಗ್ರಂಥಗಳು ಸಹ ಈ ಸಸ್ಯದ ಹೆಸರಿನ ಸಂಪೂರ್ಣ ಅಧ್ಯಾಯವನ್ನು "ಉತ್ತರಾಣಿ ತಂಡುಲಿಯಾ" ಎಂದು ಹೆಸರಿಸುತ್ತವೆ. ಇದು ಮಾನವ ದೇಹಕ್ಕೆ ಚಿಕಿತ್ಸೆ ನೀಡಲು ಬಳಸಬಹುದಾದ ಹಲವು ವಿಧಾನಗಳನ್ನು ವಿವರಿಸುತ್ತದೆ. ಆಂತರಿಕವಾಗಿ ಮತ್ತು ಬಾಹ್ಯವಾಗಿ ದೇಹದ ನಿರ್ವಿಶೀಕರಣಕ್ಕೆ ಇದು ಅತ್ಯಂತ ಪರಿಣಾಮಕಾರಿ ಮೂಲಿಕೆ ಎಂದು ಪರಿಗಣಿಸಲಾಗಿದೆ. ಉತ್ತರಾಣಿ ಸಸ್ಯ ಮತ್ತು ಬೀಜಗಳು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಫ್ಲೇವನಾಯ್ಡ್‌ಗಳು, ಟ್ಯಾನಿನ್‌ಗಳು, ಸಪೋನಿನ್‌ಗಳಂತಹ ಕೆಲವು ಅಂಶಗಳು ಸಮೃದ್ಧವಾಗಿವೆ. ಇದು ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಉತ್ತರಾಣಿ ಸಸ್ಯವನ್ನು ಈ ರೀತಿ ಬಳಸಿ: ಆಯುರ್ವೇದದ ಪ್ರಕಾರ, ಅಚೈರಾಂಥೆಸ್ ಆಸ್ಪೆರಾ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಅದರ ಹಸಿವನ್ನು ಹೆಚ್ಚಿಸುವ ಮತ್ತು ಜೀರ್ಣಕಾರಿ ಗುಣಲಕ್ಷಣಗಳಿಂದಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬೆರಳೆಣಿಕೆಯಷ್ಟು ಉತ್ತರಾಣಿ ಸಸ್ಯದ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೆಚ್ಚುವರಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುವ ಮೂಲಕ ದೇಹದ ತೂಕ ಕಡಿಮೆಯಾಗುತ್ತೆ. ಮಾಡುತ್ತೆ. ಜೊತೆಗೆ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅಚಿರಾಂಥೆಸ್ ಆಸ್ಪೆರಾ ಎಲೆಗಳ ರಸವನ್ನು ನೇರವಾಗಿ ತೊಂದರೆ ಪೀಡಿತ ಪ್ರದೇಶಕ್ಕೆ ಅನ್ವಯಿಸುವುದರಿಂದ ಅದರ ಸಂಕೋಚಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹುಣ್ಣು- ವಿರೋಧಿ ಮತ್ತು ಗ್ಯಾಸ್ಟ್ರೋಪ್ರೊಟೆಕ್ಟಿವ್ ಚಟುವಟಿಕೆಯಿಂದಾಗಿ ಹುಣ್ಣುಗಳಿಂದ ಪರಿಹಾರವನ್ನು ಒದಗಿಸಲು ಇದನ್ನು ಬಳಸಬಹುದು.

ಉತ್ತರಾಣಿ ಸಸ್ಯದಿಂದ ಪೈಲ್ಸ್​ಗೆ ಚಿಕಿತ್ಸೆ: ಉತ್ತರಾಣಿ ಸಸ್ಯದ 6 ಎಲೆಗಳು ಮತ್ತು 5 ಕರಿಮೆಣಸನ್ನು ಪುಡಿಮಾಡಿ ನೀರಿನೊಳಗೆ ಬೆರೆಸಿ ಕುಡಿಯಬೇಕು. ಇದನ್ನು ಬೆಳಗ್ಗೆ ಮತ್ತು ಸಂಜೆ ಸೇವಿಸುವುದರಿಂದ ಪೈಲ್ಸ್‌ಗೆ ಪರಿಹಾರ ದೊರೆಯುತ್ತದೆ. ಇದರಿಂದ ರಕ್ತಸ್ರಾವ ನಿಲ್ಲುತ್ತದೆ. ಉತ್ತರಾಣಿ ಸಸ್ಯದ ಬೀಜಗಳನ್ನು ನುಣ್ಣಗೆ ಪುಡಿ ಮಾಡಿ. ಅದಕ್ಕೆ ಸಮಾನ ಪ್ರಮಾಣದ ಕಲ್ಲು ಸಕ್ಕರೆಯ ಮಿಶ್ರಣ ಸೇರಿಸಿ. ಇದನ್ನು 3ರಿಂದ 6 ಗ್ರಾಂ ನೀರಿನೊಂದಿಗೆ ಬೆಳಗ್ಗೆ ಮತ್ತು ಸಂಜೆ ಸೇವಿಸಿ. ಇದು ಪೈಲ್ಸ್‌ನಲ್ಲಿ ಪ್ರಯೋಜನಕಾರಿಯಾಗಿದೆ. 10ರಿಂದ 20 ಗ್ರಾಂ ಉತ್ತರಾಣಿ ಸಸ್ಯದ ಬೇರಿನ ಪುಡಿಯನ್ನು ಮಾಡಿ ಮತ್ತು ಫಿಲ್ಟರ್ ಮಾಡಿ. ಅದರಲ್ಲಿ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಪೈಲ್ಸ್ ರೋಗಕ್ಕೆ ಪರಿಹಾರ ಲಭಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಮೂತ್ರಪಿಂಡದ ಕಾಯಿಲೆ ಪ್ರಯೋಜನಕಾರಿ: 5-10 ಗ್ರಾಂನಷ್ಟು ಉತ್ತರಾಣಿ ಸಸ್ಯ ತಾಜಾ ಬೇರನ್ನು ನೀರಿನಲ್ಲಿ ಪುಡಿ ಮಾಡಿ. ಇದನ್ನು ನೀರಿನೊಂದಿಗೆ ಕುಡಿಯುವುದರಿಂದ ಕಿಡ್ನಿ ಸ್ಟೋನ್​ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ಈ ಔಷಧ ಕಿಡ್ನಿ ಸ್ಟೋನ್​ಗಳನ್ನು ದೇಹದಿಂದ ತೆಗೆದುಹಾಕುತ್ತದೆ. ಮೂತ್ರಪಿಂಡದ ನೋವಿಗೆ ಈ ಔಷಧಿ ತುಂಬಾ ಪರಿಣಾಮಕಾರಿ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ಸಂಪರ್ಕಿಸಬಹುದು:

https://ijpsr.com/bft-article/achyranthes-aspera-a-potent-immunostimulating-plant-for-traditional-medicine/

https://www.scholarsresearchlibrary.com/articles/achyranthes-asperaan-important-medicinal-plant-a-review.pdf

https://www.sciencedirect.com/topics/agricultural-and-biological-sciences/achyranthes-aspera

https://www.ncbi.nlm.nih.gov/pmc/articles/PMC4655238/

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.