ETV Bharat / spiritual

ಉದ್ಯೋಗದಲ್ಲಿ ವರ್ಗಾವಣೆ, ಬಡ್ತಿಗಾಗಿ ಕಾಯುತ್ತಿರುವವರ ಕನಸು ಈ ವಾರ ನನಸು! - Weekly Horoscope - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ..

weekly horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Oct 6, 2024, 6:44 AM IST

ಮೇಷ : ವಾರದ ಆರಂಭದಲ್ಲಿ ನಿಮ್ಮ ಬದುಕಿನ ಪ್ರಮುಖ ಸವಾಲೊಂದು ಬಗೆಹರಿಯಲಿದೆ. ನಿಮ್ಮ ಹಿರಿಯರು ಮತ್ತು ಸಹೋದ್ಯೋಗಿಗಳಿಂದ ನೀವು ನೆರವನ್ನು ಪಡೆಯಲಿದ್ದು, ಅಗತ್ಯ ಬೆಂಬಲ ದೊರೆಯಲಿದೆ. ಅರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರ ಯೋಗಕ್ಷೇಮದಲ್ಲಿ ಸುಧಾರಣೆಯಾಗಲಿದ್ದು ಅವರು ಸಂತಸದಾಯಕ ಘಟನೆಗಳನ್ನು ಆನಂದಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಈ ವಾರವು ಮಂಗಳದಾಯವಾಗಿದ್ದು, ಯಶಸ್ಸನ್ನು ನಿರೀಕ್ಷಿಸಬಹುದು. ಈ ವಾರದ ಕೊನೆಗೆ ನೀವು ಧನಾತ್ಮಕ ಸುದ್ದಿಯನ್ನು ಪಡೆಯಲಿದ್ದು ನಿಮ್ಮ ಬದುಕಿನಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಯುವಜನರು ಹೆಚ್ಚಿನ ಸಮಯವನ್ನು ಮೋಜು ಮತ್ತು ಆನಂದಕ್ಕಾಗಿ ಮೀಸಲಿಡಲಿದ್ದಾರೆ. ದಿನ ಕಳೆದಂತೆ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಅವಕಾಶ ಲಭಿಸಲಿದೆ. ಉದ್ಯೋಗ ಅರಸುತ್ತಿರುವವರಿಗೆ ಹೊಸ ಅವಕಾಶಗಳು ಲಭಿಸಲಿದ್ದು ಅವರು ಸ್ಥಿರತೆಯನ್ನು ಸಾಧಿಸಲಿದ್ದಾರೆ. ವೈವಾಹಿಕ ಜೀವನದಲ್ಲಿ ಸಂತಸ ನೆಲೆಸಲಿದೆ. ಪ್ರಣಯ ಸಂಬಂಧದಲ್ಲಿ ಭಾವ ತೀವ್ರತೆಯು ಹೆಚ್ಚಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಂಧವು ಗಟ್ಟಿಗೊಳ್ಳಲಿದ್ದು, ನೀವು ಒಟ್ಟಿಗೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ.

ವೃಷಭ : ವೃಷಭ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಅನಗತ್ಯ ಸಂಘರ್ಷಕ್ಕೆ ಕೈ ಹಾಕಬಾರದು. ವಾರದ ಅರಂಭದಲ್ಲಿ, ಕೆಲಸದ ಸ್ಥಳದಲ್ಲಿ ನಿಮಗೆ ಸಾಕಷ್ಟು ವಿರೋಧ ಎದುರಾಗಬಹುದು. ಕೆಲವರು ನಿಮ್ಮ ಗಮನಭಂಗ ಮಾಡುವ ಸಾಧ್ಯತೆ ಇದ್ದು, ಈ ಕಾರಣಕ್ಕಾಗಿ ಹೆಚ್ಚಿನ ಸಮರ್ಪಣಾಭಾವ ಮತ್ತು ಶ್ರಮದ ಅಗತ್ಯವಿದೆ. ಪ್ರಣಯ ಸಂಬಂಧದಲ್ಲಿ ಸಂಘರ್ಷವು ಎದುರಾಗಬಹುದು. ಇನ್ನಷ್ಟು ಕಲಹ ಉಂಟಾಗುವುದನ್ನು ತಪ್ಪಿಸುವುದಕ್ಕಾಗಿ ಸಂಘರ್ಷದ ಬದಲಿಗೆ ಸಂವಹನ ನಡೆಸಲು ಸಲಹೆ ನೀಡಲಾಗಿದೆ. ವಾರದ ನಡುವೆ, ಮನೆಯ ದುರಸ್ತಿ ಅಥವಾ ಅಗತ್ಯ ವಸ್ತುಗಳ ಖರೀದಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಯಾವುದೇ ಆಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವಿವಾದಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿದರೆ ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ವಹಿವಾಟು ನಡೆಸುವಾಗ ಎಚ್ಚರಿಕೆ ವಹಿಸಬೇಕು. ಅಲ್ಲದೆ ವೃಷಭ ರಾಶಿಯವರು ಈ ವಾರದಲ್ಲಿ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ವಾರದ ಕೊನೆಗೆ, ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗೆ ನೀವು ತುತ್ತಾಗಬಹುದು.

ಮಿಥುನ : ಮುಂಬರುವ ವಾರವು ಮಿಥುನ ರಾಶಿಯಲ್ಲಿ ಹುಟ್ಟಿದವರಿಗೆ ಸಂತಸ, ಸಂಪತ್ತು ಮತ್ತು ಸಾಧನೆಯ ಭರವಸೆಯನ್ನು ಕರುಣಿಸುತ್ತದೆ. ವಾರದ ಆರಂಭದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಧನಾತ್ಮಕ ಸುದ್ದಿಯನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ವರ್ಗಾವಣೆ ಅಥವಾ ಬಡ್ತಿಗಾಗಿ ಕಾತರದಿಂದ ಕಾಯುತ್ತಿರುವವರ ಕನಸು ಈ ವಾರದಲ್ಲಿ ನನಸಾಗಲಿದೆ. ನಿರುದ್ಯೋಗಿಗಳಿಗೆ ಅನುಕೂಲಕರ ಉದ್ಯೋಗವು ದೊರೆಯಲಿದೆ. ಕೆಲಸದಲ್ಲಿ ಸಂತುಲನ ಕಾಪಾಡುವ ವೇಳೆ ಜೀರ್ಣಕ್ರಿಯೆಯ ಸಮಸ್ಯೆ ಬರದಂತೆ ನೋಡಿಕೊಳ್ಳುವುದಕ್ಕಾಗಿ ಆರೋಗ್ಯದಾಯಕ ಅಹಾರಕ್ರಮವನ್ನು ಕಾಪಾಡುವುದು ಒಳ್ಳೆಯದು. ವಾರದ ಕೊನೆಯಲ್ಲಿ, ಕೌಟುಂಬಿಕ ಅಸ್ತಿಗೆ ಸಂಬಂಧಿಸಿದಂತೆ ಎದುರಾಗಿರುವ ಯಾವುದೇ ಸಂಘರ್ಷವು ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ಬಗೆಹರಿಯಲಿದ್ದು, ನಿಮಗೆ ನೆಮ್ಮದಿ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ಕಾಣಬೇಕಾದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಪರಿಗಣಿಸುವುದು ಮತ್ತು ಒಟ್ಟಿಗೆ ಸಮಯ ಕಳೆಯುವುದು ಅಗತ್ಯ. ಗೆಳತಿಯೊಬ್ಬರ ಸಹಾಯದಿಂದ ಪ್ರಣಯ ಸಂಬಂಧದಲ್ಲಿ ಎದುರಾಗಿರುವ ಸಂಘರ್ಷಗಳನ್ನು ಬಗೆಹರಿಸಬಹುದು.

ಕರ್ಕಾಟಕ : ಈ ವಾರದಲ್ಲಿ ಕೆಲಸದ ಸ್ಥಳದಲ್ಲಿ ಒಂದಷ್ಟು ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಭಾವನೆಗಳು, ಮಾತುಗಳು ಮತ್ತು ಕ್ರಿಯೆಗಳ ಮೇಲೆ ನಿಯಂತ್ರಣವಿರಿಸಿಕೊಳ್ಳುವುದು ಒಳ್ಳೆಯದು. ನೀವು ಕೆಲಸವನ್ನು ಬದಲಾಯಿಸಲು ಇಚ್ಛಿಸುವುದಾದರೆ, ಈ ವಾರದಲ್ಲಿ ನಿಮಗೆ ಅದ್ಭುತ ಅವಕಾಶಗಳು ಲಭಿಸಲಿವೆ. ಸರ್ಕಾರ ಅಥವಾ ಅಧಿಕಾರಿಗಳಿಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವಾಗ ನಿಮ್ಮ ಮಾತು ಮತ್ತು ಕ್ರಿಯೆಗಳ ಮೇಲೆ ನಿಯಂತ್ರಣವಿರಿಸುವುದು ಅಗತ್ಯ. ವಾರದ ಕೊನೆಗೆ ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಲಿದ್ದೀರಿ. ಇದು ಅಲ್ಪಕಾಲದ ಅಥವಾ ದೀರ್ಘಕಾಲದ ಪ್ರಯಾಣವಾಗಿರಬಹುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಒತ್ತು ನೀಡಬೇಕು. ಏಕೆಂದರೆ ಅವರ ಮನಸ್ಸಿನಲ್ಲಿ ವಿರಾಮದ ಕಲ್ಪನೆಗಳು ಕಾಣಿಸಿಕೊಳ್ಳಬಹುದು. ಈ ವಾರವು ಪ್ರಯಣ ಸಂಬಂಧಕ್ಕೆ ಅಷ್ಟೊಂದು ಅನುಕೂಲಕರವಾಗಿಲ್ಲ. ನಿಮ್ಮ ಸಂಗಾತಿಯಿಂದ ನೀವು ಬೇರ್ಪಟ್ಟಿದ್ದಲ್ಲಿ ಅಥವಾ ಅವರನ್ನು ನೋಡಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮಲ್ಲಿ ನಿರಾಸೆಯ ಭಾವನೆ ಕಾಣಿಸಿಕೊಳ್ಳಬಹುದು.

ಸಿಂಹ : ಮುಂಬರುವ ವಾರವು ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ ಸಂತಸ, ಸಂಪತ್ತು ಮತ್ತು ಸಾಧನೆಯ ಭರವಸೆಯನ್ನು ಕರುಣಿಸುತ್ತದೆ. ವಾರದ ಆರಂಭದಿಂದಲೇ ಉದ್ಯೋಗದಲ್ಲಿರುವವರು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಯಶಸ್ಸನ್ನು ಕಾಣಲಿದ್ದಾರೆ. ಉದ್ಯೋಗದಲ್ಲಿರುವವರು ಉದ್ಯೋಗದ ಹೊಸ ಮೂಲವನ್ನು ಪಡೆಯಲಿದ್ದು ಅವರು ಸಾಮಾಜಿಕ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಅನಿರೀಕ್ಷಿತ ಆರ್ಥಿಕ ಲಾಭ ಉಂಟಾಗಲಿದ್ದು, ನಿಮ್ಮ ವ್ಯವಹಾರದ ವೃದ್ಧಿಯ ಕನಸು ನನಸಾಗಲಿದೆ. ಹಿರಿಯ ಮತ್ತು ಪ್ರಭಾವಿ ವ್ಯಕ್ತಿಯ ಜೊತೆಗಿನ ಭೇಟಿಯು ಭವಿಷ್ಯದ ಯೋಜನೆಗಳಿಗೆ ಅನುಕೂಲಕರ ಎನಿಸಲಿದೆ. ಯುವ ಜನಾಂಗವು ತಮ್ಮ ಹೆಚ್ಚಿನ ಸಮಯವನ್ನು ಮೋಜು ಮತ್ತು ಮಸ್ತಿಯಲ್ಲಿ ಕಳೆಯಲಿದೆ. ಆಸ್ತಿಯನ್ನು ಖರೀದಿಸಿ ಕಟ್ಟಡವನ್ನು ನಿರ್ಮಿಸುವ ಇಚ್ಛೆಯು ಈಡೇರಲಿದೆ. ಈ ವಾರದಲ್ಲಿ ಮಕ್ಕಳ ಬದುಕಿನಲ್ಲಿ ಉಂಟಾಗುವ ಪ್ರಮುಖ ಮೈಲಿಗಲ್ಲೊಂದು ನಿಮ್ಮ ಸಂತಸ ಮತ್ತು ಅಭಿಮಾನವನ್ನು ಹೆಚ್ಚಿಸಲಿದೆ. ಪ್ರೇಮ ಸಂಬಂಧವು ಬೆಳೆಯಲಿದ್ದು, ನಿಮ್ಮ ಸಂಗಾತಿಯ ಜೊತೆಗೆ ನಗು ಮತ್ತು ಸಂತಸವನ್ನು ಹಂಚಿಕೊಳ್ಳಲಿದ್ದೀರಿ. ವೈವಾಹಿಕ ಬದುಕು ಸಂತಸದಿಂದ ಮುಂದುವರಿಯಲಿದ್ದು ನಿಮ್ಮ ಜೀವನ ಸಂಗಾತಿಯಿಂದ ಅಚ್ಚರಿಯ ಉಡುಗೊರೆಯೊಂದನ್ನು ನೀವು ಪಡೆಯಲಿದ್ದೀರಿ. ಒಟ್ಟಾರೆಯಾಗಿ ಆರೋಗ್ಯವು ಚೆನ್ನಾಗಿರಲಿದೆ.

ಕನ್ಯಾ : ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಹೊಸ ವಾರವು ಏರುಪೇರಿನಿಂದ ಕೂಡಿರಲಿದೆ. ವಾರದ ಆರಂಭದಲ್ಲಿ, ಕೆಲಸದ ಸ್ಥಳದಲ್ಲಿ ಪ್ರಮುಖ ಸಮಸ್ಯೆಯೊಂದನ್ನು ಬಗೆಹರಿಸುವುದರಲ್ಲಿಯೇ ಮಗ್ನರಾಗಲಿದ್ದೀರಿ. ಹೀಗಾಗಿ ನಿಮ್ಮ ಗುರಿಯನ್ನು ಈಡೇರಿಸಲು ಸಾಕಷ್ಟು ಪ್ರಯತ್ನದ ಅಗತ್ಯ ಬೀಳಲಿದೆ. ಉದ್ಯೋಗ ಹುಡುಕುವುದು ಸವಾಲಿನ ಕೆಲಸ ಎನಿಸಲಿದ್ದು, ಅಡಚಣೆಗಳು ಎದುರಾಗಲಿವೆ. ವಾರದ ಮಧ್ಯದಲ್ಲಿ, ನಿಮ್ಮ ಯೋಗಕ್ಷೇಮ ಮತ್ತು ಸಂಬಂಧಕ್ಕೆ ಒತ್ತು ನೀಡುವುದು ಒಳ್ಳೆಯದು. ನೀವು ಆರ್ಥಿಕ ಅಡಚಣೆಗಳು ಹಾಗೂ ಆಸ್ತಿ ಮತ್ತು ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ ನಿಮ್ಮ ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಈ ವಾರದಲ್ಲಿ ವೈಯಕ್ತಿಕ ಮತ್ತು ಪ್ರಣಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಂವಹನವನ್ನು ಒಂದು ಸಾಧನವಾಗಿ ಬಳಸಿಕೊಂಡರೆ ಒಳ್ಳೆಯದು. ಮುಕ್ತ ಮನಸ್ಸಿನೊಂದಿಗೆ ಸಂವಹನ ನಡೆಸಿದರೆ ನಿಮ್ಮ ಸಂಗಾತಿಯೊಂದಿಗಿನ ತಪ್ಪು ಗ್ರಹಿಕೆಗಳು ದೂರಗೊಳ್ಳಲಿವೆ.

ತುಲಾ : ತುಲಾ ರಾಶಿಯಲ್ಲಿ ಹುಟ್ಟಿದವರು ವಾರದ ಆರಂಭದಲ್ಲಿ ತನ್ನ ವೃತ್ತಿಪರ ಮತ್ತು ವ್ಯಾವಹಾರಿಕ ಬದುಕಿನಲ್ಲಿ ಸವಾಲುಗಳನ್ನು ಎದುರಿಸಲಿದ್ದಾರೆ. ಅಲ್ಲದೆ ವಿಪರೀತ ಕೆಲಸದ ಒತ್ತಡವು ಎದುರಾಗಲಿದ್ದು, ಅಡಚಣೆಗಳು ಉಂಟಾಗಬಹುದು. ಈ ಅವಧಿಯಲ್ಲಿ ಕೌಟುಂಬಿಕ ಸಮಸ್ಯೆಗಳು ಸಹ ಕಾಣಿಸಿಕೊಳ್ಲಲಿದ್ದು, ಒತ್ತಡ ಉಂಟಾಗಲಿದೆ. ನಿಮ್ಮ ಸಂಗಾತಿಯ ಜೊತೆಗಿನ ಸಂಘರ್ಷದಿಂದಾಗಿ ನೀವು ಕ್ಷೋಭೆಗೆ ಒಳಗಾಗಬಹುದು. ಆದರೆ ವಾರದ ಮಧ್ಯದಲ್ಲಿ ಪಾಲುಗಾರಿಕೆ ವ್ಯವಹಾರದಲ್ಲಿರುವವರು ಧನಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ಅಲ್ಲದೆ ವ್ಯವಹಾರವನ್ನು ವಿಸ್ತರಿಸಲು ಬಯಸುವವರ ಯೋಜನೆಯು ಯಶಸ್ವಿಯಾಗಲಿದೆ. ನೀವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಕ್ಕೆ ನಿಮ್ಮ ಕುಟುಂಬದ ಸದಸ್ಯರ ಬೆಂಬಲ ವ್ಯಕ್ತವಾಗಲಿದೆ. ವಾರದ ಕೊನೆಯಲ್ಲಿ ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಲಿದ್ದು, ನಿಮ್ಮ ಸಂಗಾತಿಯ ಜೊತೆಗಿನ ಸಂವಹನದಲ್ಲಿ ಸುಧಾರಣೆ ಉಂಟಾಗಲಿದೆ.

ವೃಶ್ಚಿಕ : ಈ ವಾರವು ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರಿಗೆ ಸವಾಲುಗಳಿಂದ ಕೂಡಿರಲಿದೆ. ಆದರೆ ಹೆದರಿ ಹಿಂಜರಿಯುವ ಬದಲಿಗೆ ಈ ಸವಾಲುಗಳನ್ನು ನೀವು ಎದುರಿಸಿದರೆ ಒಳ್ಳೆಯದು. ಅವು ವೃತ್ತಿಪರ ಅಥವಾ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿರಬಹುದು. ಜಾಣ್ಮೆ ಮತ್ತು ಜಾಗರೂಕತೆಯ ಯೋಜನೆಯ ಮೂಲಕ ನೀವು ಅವುಗಳನ್ನು ಮೆಟ್ಟಿ ನಿಲ್ಲಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ತಮ್ಮ ಗುರಿ ಸಾಧಿಸಲು ಕಠಿಣ ಶ್ರಮ ಪಡಬೇಕು. ನಿಮ್ಮ ಗುಪ್ತ ಶತ್ರುಗಳು ಈ ವಾರದಲ್ಲಿ ಸಮಸ್ಯೆಯನ್ನುಂಟು ಮಾಡಲಿದ್ದು, ಎಚ್ಚರದಿಂದ ಇರುವ ಅಗತ್ಯವಿದೆ. ವಾರದ ಕೊನೆಗೆ, ನೀವು ವ್ಯವಹಾರಕ್ಕಾಗಿ ದೂರದ ಊರಿಗೆ ಪ್ರಯಾಣವನ್ನು ಬೆಳೆಸಲಿದ್ದು, ಸಾಕಷ್ಟು ಎಚ್ಚರಿಕೆಯ ಅಗತ್ಯವಿದೆ. ಆರ್ಥಿಕ ವ್ಯವಹಾರದಲ್ಲಿ ಜಾಗರೂಕತೆ ವಹಿಸಬೇಕು. ಮಿತಿ ಮೀರಿ ಖರ್ಚು ಮಾಡಿದರೆ ಆರ್ಥಿಕ ಹಿನ್ನಡೆ ಉಂಟಾದೀತು. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ಅದರೆ ವೈವಾಹಿಕ ಬದುಕಿನಲ್ಲಿ ಸಂತೃಪ್ತಿ ನೆಲೆಸಲಿದೆ.

ಧನು : ಧನು ರಾಶಿಯಲ್ಲಿ ಹುಟ್ಟಿದವರು ಮುಂದಿನ ವಾರದಲ್ಲಿ ಪ್ರಯಾಣಕ್ಕೆ ಕೈ ಹಾಕಲಿದ್ದು, ಇದರಿಂದ ಸಂತಸ ಮತ್ತು ಮೋಜನ್ನು ಆನಂದಿಸಲಿದ್ದಾರೆ. ವಾರದ ಆರಂಭದಲ್ಲಿ ನಿಮ್ಮ ಕನಸಿನ ಕೆಲಸ ಅಥವಾ ಹುದ್ದೆ ನಿಮಗೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಅಥವಾ ನಿಮ್ಮ ಪ್ರಸ್ತುತ ವ್ಯವಹಾರವನ್ನು ಬೆಳೆಸಲು ನೀವು ಕನಸು ಕಾಣುತ್ತಿದ್ದರೆ, ಇದು ನಿಮ್ಮ ಕನಸುಗಳು ನನಸಾಗುವ ವಾರವಾಗಿರಬಹುದು. ಅಲ್ಲದೆ ನಿಮ್ಮ ಗೌರವ ಮತ್ತು ಘನತೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಮಕ್ಕಳಿಂದ ನೀವು ಕೆಲವು ಸಕಾರಾತ್ಮಕ ಸುದ್ದಿಗಳನ್ನು ಪಡೆಯಬಹುದು. ವಾರವು ಮುಂದುವರೆದಂತೆ, ನಿಮ್ಮ ಕುಟುಂಬದ ಸದಸ್ಯರೊಂದಿಗಿನ ಯಾವುದಾದರೂ ಘರ್ಷಣೆಯು ಬಗೆಹರಿಯುವ ಸಾಧ್ಯತೆಯಿದೆ ಮತ್ತು ಅವರ ಬಗ್ಗೆ ನಿಮ್ಮ ಪ್ರೀತಿಯು ಗಾಢವಾಗುತ್ತದೆ. ಈ ಅವಧಿಯು ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಅನುಕೂಲಕರವಾಗಿದೆ. ಮದುವೆಯ ಮೂಲಕ ನಿಮ್ಮ ಸಂಬಂಧವನ್ನು ಔಪಚಾರಿಕಗೊಳಿಸಲು ನಿಮ್ಮ ಕುಟುಂಬವು ನಿರ್ಧರಿಸಬಹುದು. ಇದು ಸಂತೋಷದಾಯಕ ವೈವಾಹಿಕ ಜೀವನಕ್ಕೆ ಕಾರಣವಾಗುತ್ತದೆ ಮಾತ್ರವಲ್ಲದೆ ನಿಮ್ಮ ಸಂಗಾತಿಯೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆಯುವ ಅವಕಾಶ ನಿಮಗೆ ದೊರೆಯುತ್ತದೆ.

ಮಕರ : ಈ ವಾರದಲ್ಲಿ, ಮಕರ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ತಮ್ಮ ಉದ್ದೇಶಗಳ ಮೇಲೆ ಗಮನ ನೀಡಬೇಕು. ನಿಮ್ಮ ಬದುಕಿನ ಸವಾಲುಗಳನ್ನು ಸಹನೆಯಿಂದ ಮತ್ತು ಒಂದೊಂದಾಗಿ ಬಗೆಹರಿಸಲು ಯತ್ನಿಸಿ. ಇದರಿಂದ ನಿಮ್ಮ ಬದುಕಿನ ಪಯಣದಲ್ಲಿ ಯಶಸ್ಸು ದೊರೆಯಲಿದೆ. ಯಾವುದೇ ಹೂಡಿಕೆಯಲ್ಲಿ ಕೈ ಹಾಕುವ ಮೊದಲು ವೃತ್ತಿಪರ ಮಾರ್ಗದರ್ಶನವನ್ನು ಪಡೆಯಲು ಹಾಗೂ ನಂಬಿಕಸ್ಥ ಗೆಳೆಯರು ಮತ್ತು ಕುಟುಂಬದ ಸದಸ್ಯರ ಸಲಹೆಯನ್ನು ಶಿಫಾರಸ್ಸು ಮಾಡಲಾಗಿದೆ. ಈ ಅವಧಿಯಲ್ಲಿ ಮನೆಯ ನಿರ್ವಹಣೆ ಅಥವಾ ಅಗತ್ಯ ಸರಬರಾಜುಗಳಿಗಾಗಿ ಖರ್ಚು ಉಂಟಾಗಲಿದ್ದು, ನಿಮ್ಮ ಆರ್ಥಿಕ ಯೋಜನೆಯ ಮೇಲೆ ಪರಿಣಾಮ ಉಂಟಾಗಲಿದೆ. ವಾರವು ಮುಂದುವರೆದಂತೆ, ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ಮನೆ ಮತ್ತು ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಸವಾಲುಗಳನ್ನು ಎದುರಿಸಲಿದ್ದಾರೆ. ವಿವಾಹಿತ ಜೋಡಿಗಳು ಸಂತಸ ಅನುಭವಿಸಲಿದ್ದಾರೆ. ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರೇಮ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಇತರ ಆನ್ಲೈನ್‌ ವೇದಿಕೆಗಳಲ್ಲಿ ವಿಪರೀತವಾಗಿ ಹಂಚಿಕೊಳ್ಳದೆ ಇದ್ದರೆ ಒಳ್ಳೆಯದು.

ಕುಂಭ : ಕುಂಭ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದ ಅನುಕೂಲಕರವಾಗಿದೆ. ನಿಮ್ಮ ವ್ಯವಹಾರವನ್ನು ಬೆಳೆಸಲು ನೀವು ಇಚ್ಛಿಸುವುದಾದರೆ, ನಿಮ್ಮ ಹಿತೈಷಿಗಳ ನೆರವಿನ ಕಾರಣ ನಿಮ್ಮ ಕನಸು ನನಸಾಗಲಿದೆ. ಅಲ್ಲದೆ ಈಗಾಗಲೇ ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಇನ್ನಷ್ಟು ಲಾಭ ಉಂಟಾಗಲಿದ್ದು, ಹೆಚ್ಚುವರಿ ಆದಾಯದ ಅವಕಾಶಗಳು ತೆರೆಯಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಧನಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ವಾರವು ಮುಂದುವರಿದಂತೆ, ಆಸ್ತಿಯ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ನಿಮ್ಮ ಪೋಷಕರ ಸಂಪೂರ್ಣ ಬೆಂಬಲ ಮತ್ತು ನೆರವು ನಿಮಗೆ ಲಭಿಸಲಿದೆ. ಪ್ರೇಮ ಸಂಬಂಧವು ಈ ವಾರದಲ್ಲಿ ಇನ್ನಷ್ಟು ಚಿಗುರಲಿದೆ. ನಿಮ್ಮ ಪ್ರೇಮ ಕಥೆಯನ್ನು ಹಂಚಿಕೊಳ್ಳಲು ನೀವು ಇಚ್ಛಿಸುವುದಾದರೆ, ಈ ನಿಟ್ಟಿನಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈಗಾಗಲೇ ಪ್ರೇಮ ಸಂಬಂಧದಲ್ಲಿರುವ ವ್ಯಕ್ತಿಗಳಿಗೆ ವೈವಾಹಿಕ ಜೀವನದಲ್ಲಿ ಕಾಲಿಡುವುದಕ್ಕಾಗಿ ಅವರ ಪೋಷಕರ ಹಸಿರು ನಿಶಾನೆ ಲಭಿಸಲಿದೆ.

ಮೀನ : ಈ ವಾರದಲ್ಲಿ ಮೀನ ರಾಶಿಯವರ ಬದುಕಿನಲ್ಲಿ ಪ್ರಗತಿ ಹಾಗೂ ಸಂಭ್ರಮ ನೆಲೆಸಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಪರಿಸ್ಥಿತಿಯು ಅನುಕೂಲಕರವಾಗಿದ್ದು ಸರ್ಕಾರಿ ಉಪಕ್ರಮಗಳ ಅನುಕೂಲತೆಯನ್ನು ಆನಂದಿಸಲಿದ್ದಾರೆ. ವಿದೇಶದಲ್ಲಿ ಕಲಿಯಲು ಅಥವಾ ಕೆಲಸ ಮಾಡಲು ನೀವು ಇಚ್ಛಿಸುವುದಾದರೆ ನಿಮ್ಮ ಕನಸು ಈ ವಾರದಲ್ಲಿ ನನಸಾಗಲಿದೆ. ವಾರವು ಮುಂದುವರಿದಂತೆ ಭೂಮಿ, ಕಟ್ಟಡ ಮತ್ತು ಕೌಟುಂಬಿಕ ಪರಂಪರೆಗೆ ಸಂಬಂಧಿಸಿದ ಸಂಘರ್ಷ ಮತ್ತು ಸಮಸ್ಯೆಗಳು ಬಗೆಹರಿಯಲಿವೆ. ಆದರೆ ನಿಮ್ಮ ಆರೋಗ್ಯದ ಮೇಲೆ ಗಮನ ನೀಡಬೇಕಾದ ಅವಶ್ಯಕತೆ ಇದೆ. ಏಕೆಂದರೆ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆ ಎದುರಾಗಬಹುದು. ನೀವು ಕಾನೂನಿನ ವಿಷಯದಲ್ಲಿ ಒಳಗೊಂಡಿದ್ದರೆ ತೀರ್ಪು ನಿಮ್ಮ ಪರವಾಗಿ ಬರಲಿದ್ದು, ನಿಮ್ಮ ವ್ಯವಹಾರದಲ್ಲಿ ನಿರೀಕ್ಷಿತ ಆರ್ಥಿಕ ಯಶಸ್ಸು ಮತ್ತು ಪ್ರಗತಿ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿ ನೀವು ಕ್ಷಿಪ್ರವಾಗಿ ಮುಂದೆ ಸಾಗಲಿದ್ದು, ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದೀರಿ. ನಿಮ್ಮ ಪ್ರಣಯ ಸಂಬಂಧವು ಗಟ್ಟಿಗೊಳ್ಳಲಿದೆ. ಅಲ್ಲದೆ ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.