ETV Bharat / state

ಆಸ್ತಿಗಾಗಿ ಎರಡನೇ ಪತ್ನಿಯ ಕೊಲೆ ಆರೋಪ: ಪತಿ ಸೇರಿ ನಾಲ್ವರ ಬಂಧನ - ಎರಡನೇ ಪತ್ನಿಯ ಕೊಲೆ

ಮೊದಲ ಹೆಂಡತಿಯ ಮಕ್ಕಳ ಜೊತೆಗೆ ಸೇರಿ, ಆಸ್ತಿಗಾಗಿ ತನ್ನ ಎರಡನೇ ಹೆಂಡತಿಯನ್ನು ಪತಿಯೇ ಕೊಲೆ ಮಾಡಿರುವ ಆರೋಪ ಮೈಸೂರಿನಲ್ಲಿ ಕೇಳಿಬಂದಿದೆ.

Arrested Accused
ಬಂಧಿತ ಆರೋಪಿಗಳು
author img

By ETV Bharat Karnataka Team

Published : Feb 19, 2024, 12:35 PM IST

Updated : Feb 19, 2024, 4:57 PM IST

ಮೈಸೂರು: ಮೊದಲ ಹೆಂಡತಿಯ ಮಕ್ಕಳ ಜೊತೆ ಸೇರಿ ಆಸ್ತಿಗಾಗಿ ಎರಡನೇ ಹೆಂಡತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಘಟನೆ ಸೋಮವಾರ ಮೈಸೂರಿನಲ್ಲಿ ನಡೆದಿದೆ. ಪತಿಯ ಮೊದಲ ಹೆಂಡತಿ ಮಕ್ಕಳ ಆಸ್ತಿ ವ್ಯಾಮೋಹಕ್ಕೆ ಎರಡನೇ ಪತ್ನಿ ಅಖಿಲಾ ಬಾನು (46) ಕೊಲೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪತಿ ಅಬ್ಬ ಥಾಯೂಬ್ ಹಾಗೂ ಮಕ್ಕಳಾದ ಮೊಹಮದ್ ಆಸಿಫ್, ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್ ಆರೋಪಿಗಳು.

ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಅಬ್ಬ ಥಾಯೂಬ್ 2013 ರಲ್ಲಿ ಅಖಿಲಾ ಬಾನು ಅವರನ್ನು ಎರಡನೇ ವಿವಾಹವಾಗಿದ್ದ. ಎರಡನೇ ಪತ್ನಿ ಅಖಿಲಾ ಬಾನು ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಗುಣಮುಖರಾಗಿದ್ದರು. ಮೊದಲ ಹೆಂಡತಿಗೆ ನಾಲ್ವರು ಮಕ್ಕಳಿದ್ದು, ಅಖಿಲಾ ಬಾನು ಅವರಿಗೆ ಮಕ್ಕಳಿರಲಿಲ್ಲ.

6 ತಿಂಗಳ ಹಿಂದಷ್ಟೆ ಅಖಿಲಾ ಬಾನು ಅವರು ಅಕ್ಕನ ಮಗ ಸೈಯದ್ ಇರ್ಫಾನ್, ಚಿಕ್ಕಮ್ಮಳಿಗಾಗಿ ನಾಯ್ಡು ನಗರದಲ್ಲಿ ಆರ್ಥಿಕ ನೆರವು ನೀಡಿ, ಒಂದು ಮನೆಯನ್ನು ಖರೀದಿಸಿ ಕೊಟ್ಟಿದ್ದರು. ಅಬ್ಬ ಥಾಯುಬ್ ಹಾಗೂ ಅಖಿಲಾ ಬಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ಖಾತೆ ಮಾಡಲಾಗಿತ್ತು. ಇತ್ತೀಚೆಗೆ ಮನೆಯನ್ನು ಮೊದಲ ಹೆಂಡತಿ ಮಕ್ಕಳಿಗೆ ಬರೆದು ಕೊಡಲು ಅಬ್ಬ ಥಾಯುಬ್ ಪ್ರಯತ್ನಿಸಿದ್ದ. ಈ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಆಗಾಗ ಗಲಾಟೆಯೂ ನಡೆದಿತ್ತು.

ಫೆ.16 ರ ಬೆಳಗ್ಗೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ಅಬ್ಬ ಥಾಯೂಬ್ ಕಣ್ಣೀರಿಡುತ್ತಾ ಅಖಿಲಾ ಬಾನು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದ. ರಾಜೇಂದ್ರ ನಗರದ ಮನೆಯಲ್ಲಿ ಇರಿಸಲಾಗಿದ್ದ ಅಖಿಲಾ ಬಾನು ಶವವನ್ನು ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತಿರುಚಿದ ಗಾಯಗಳು ಕಂಡು ಬಂದಿತ್ತು. ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್ ತಮ್ಮ ಚಿಕ್ಕಮ್ಮನ ಸಹಜ ಸಾವಲ್ಲ, ಕೊಲೆ ಎಂದು ಪತಿ ಮತ್ತು ಮಕ್ಕಳ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಅಬ್ಬ ಥಾಯುಬ್ ಹಾಗೂ ಮೊದಲ ಹೆಂಡತಿ ಮಕ್ಕಳಾದ ಮಹಮದ್ ಥೋಸಿಫ್, ಮಹಮದ್ ಆಸಿಫ್ ಹಾಗೂ ಮಹಮದ್ ಹೈದರ್ ಮೇಲೆ ಕೊಲೆ ಆರೋಪ ಹೊರೆಸಿ ಪ್ರಕರಣ ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಸದ್ಯ ಎನ್.ಆರ್.ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕಡೂರು: ಕತ್ತು ಸೀಳಿ ಯುವಕನ ಭೀಕರ ಹತ್ಯೆ ಪ್ರಕರಣ, ನಾಲ್ವರ ಬಂಧನ

Last Updated : Feb 19, 2024, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.