ಬೆಂಗಳೂರು : ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಂಚಾರ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡು ಅವಾಚ್ಯವಾಗಿ ನಿಂದಿಸಿದ್ದ ನಾಲ್ವರು ಆರೋಪಿಗಳನ್ನ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳ ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆದೇಶ್, ಅಬ್ದುಲ್, ಕಿರಣ್ ಹಾಗೂ ನವೀನ್ ಕುಮಾರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
-
ದಿ,03/02/24 ರಾತ್ರಿ ವೇಳೆ PI ಹೆಬ್ಬಾಳರವರು ಸಿಬ್ಬಂದಿಗಳ ಜೊತೆ DRINK & DRIVE ಮಾಡಿ ವಾಹನ ಚಲಾಯಿಸುವವರನ್ನು ತಪಾಸಣೆ ಮಾಡುತ್ತಿರುವ ಸಮಯದಲ್ಲಿ ಹೆಬ್ಬಾಳ ಸರ್ಕಲ್ ರಿಂಗ್ ರಸ್ತೆ ಯಲ್ಲಿ 12:10 ಗಂಟೆಯ ಸಮಯದಲ್ಲಿ KA-43-N-2149 Swift Dezire ಚಾಲಕನನ್ನು Alco meter ನಲ್ಲಿ ತಪಾಸಣೆ ಮಾಡಿದಾಗ ಚಾಲಕ ನವೀನ್ ಕುಮಾರ್ DRINK ಮಾಡಿರುವುದು..
— DCP Traffic North, Bengaluru (@DCPTrNorthBCP) February 5, 2024
ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಹೆಬ್ಬಾಳ ಸರ್ಕಲ್ ರಿಂಗ್ ರಸ್ತೆಯ ಬಳಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಕಾರಿನಲ್ಲಿ ಬಂದಿದ್ದ ನಾಲ್ವರನ್ನು ಪೊಲೀಸರು ತಡೆದಿದ್ದರು. ತಪಾಸಣೆ ಸಂದರ್ಭದಲ್ಲಿ ಕಾರಿನ ಚಾಲಕ ನವೀನ್ ಕುಮಾರ್ ಮದ್ಯಪಾನ ಮಾಡಿರುವುದು ದೃಢವಾಗಿತ್ತು. ಈ ವೇಳೆ, ನವೀನ್ ಕುಮಾರ್ ಮತ್ತು ಆತನ ಸ್ನೇಹಿತರು ಸಂಚಾರಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಬಳಿಕ ಆರೋಪಿತರನ್ನು ವಶಕ್ಕೆ ಪಡೆದ ಹೆಬ್ಬಾಳ ಸಂಚಾರಿ ಠಾಣಾ ಪೊಲೀಸರು, ಕೊಡಿಗೆಹಳ್ಳಿ ಠಾಣಾ ಪೊಲೀಸರಿಗೊಪ್ಪಿಸಿದ್ದಾರೆ.
-
ಖಚಿತದ ನಂತರ 3 ಜನ ಸ್ನೇತರಾದ ಆದೇಶ,ಅಬ್ದುಲ್,ಕಿರಣ್ ಗುಂಪು ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು , ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ PI ಹೆಬ್ಬಾಳ ದೂರು ನೀಡಿದ್ದು ಮೊಕದ್ದಮೆ NO.46/2024 U/S 353 504 506R/W 34 IPC ದಾಖಲಾಗಿ ದಸ್ತಗಿರಿ ಮಾಡಿ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ. pic.twitter.com/Uk7rpk85na
— DCP Traffic North, Bengaluru (@DCPTrNorthBCP) February 5, 2024
ಹೆಬ್ಬಾಳ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಕೋಡಿಗೇಹಳ್ಳಿ ಠಾಣಾ ಪೊಲೀಸರು ನಾಲ್ವರೂ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚನೆ ಆರೋಪ;ರಾಷ್ಟ್ರೀಯ ಹಾಕಿ ಆಟಗಾರನ ವಿರುದ್ಧ ಎಫ್ಐಆರ್