ETV Bharat / state

ಗೃಹ ಸಚಿವ ಪರಮೇಶ್ವರ್​ ಭೇಟಿಯಾದ ರೋಷನ್ ಬೇಗ್: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಕೇಸ್ ವಾಪಸ್​ಗೆ ಮನವಿ - ROSHAN BAIG

ಡಿ.ಜೆ‌.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರಕರಣದಲ್ಲಿ ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಗೃಹ ಸಚಿವರಿಗೆ ಮನವಿ ಮಾಡಿರುವುದಾಗಿ ಮಾಜಿ ಸಚಿವ ರೋಷನ್ ಬೇಗ್ ತಿಳಿಸಿದರು.

ಮಾಜಿ ಸಚಿವ ರೋಷನ್ ಬೇಗ್
ಮಾಜಿ ಸಚಿವ ರೋಷನ್ ಬೇಗ್ (ETV Bharat)
author img

By ETV Bharat Karnataka Team

Published : Oct 21, 2024, 8:00 PM IST

ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಅವರು ಇಂದು ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ಮಾಡಿ, ಡಿ.ಜೆ‌.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಲ್ಲಿನ ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿರುವವರ ತಂದೆ-ತಾಯಿ ನನ್ನ ಮನೆಗೆ ಭೇಟಿ ಕೊಟ್ಟಿದ್ರು. ನಾಲ್ಕು ವರ್ಷದಿಂದ ಒಳಗಿದ್ದಾರೆ. ಅವರು ಕಳ್ಳತನ‌ ಮಾಡಿಲ್ಲ, ಡಕಾಯಿತಿ ಮಾಡಿಲ್ಲ. ಹುಬ್ಬಳ್ಳಿ ಕೇಸ್ ವಾಪಸ್ ಪಡೆದ್ರು, ಈ ಬಗ್ಗೆ ಯೋಚಿಸಿ ಅಂದ್ರು. ಹಾಗಾಗಿ ಗೃಹ ಸಚಿವರ ಬಳಿ ಮಾತನಾಡಿದ್ದೇವೆ ಎಂದರು.

ಮಾಜಿ ಸಚಿವ ರೋಷನ್ ಬೇಗ್ (ETV Bharat)

ತಪ್ಪು‌ ಮಾಡಿರುವವರನ್ನು ಬಿಡಬೇಡಿ. ಬೆಂಕಿ‌ ಹಚ್ಚಿದವರನ್ನು ಬಿಡಬೇಡಿ. ಅಮಾಯಕರನ್ನು ಬಿಡಿ ಎಂದಿದ್ದೇವೆ. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಪೊಲೀಸ್ ಅಧಿಕಾರಿಗಳನ್ನು ಇಂಟರ್‌ಪೋಲ್‌ಗೆ ಕರೆದೊಯ್ದಿದ್ದೆ. ಪೊಲೀಸರು ಐಡೆಂಟಿಫೈ ಮಾಡಲಿ. ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆಯಲಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸೇರ್ಪಡೆಯ ಇಂಗಿತ: ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಪ್ರಯತ್ನವನ್ನೇನೂ ಮಾಡ್ತಿಲ್ಲ. ನನ್ನ ಮೇಲೆ ಪಕ್ಷದ ಉಚ್ಛಾಟನೆಯಿದೆ. ರಿವೋಕ್ ಆಗಲಿದೆ, ಆಮೇಲೆ ನೋಡೋಣ. ರಾಜಕಾರಣದಿಂದ ಹಿಂದೆ ಸರಿಯೋಕೆ‌ ಆಗುತ್ತಾ?. ಹಿಂದೆ ಸರಿಯೋಕೆ ಬಿಡ್ತಾರಾ?. ರಾಜಕಾರಣದಲ್ಲೇ ಇರಬೇಕಾಗುತ್ತದೆ ಎಂದು ಕಾಂಗ್ರೆಸ್​ಗೆ ಮರಳುವ ಇಂಗಿತ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ: ಅಧಿಕೃತ ದತ್ತಾಂಶ ಆಧಾರದಲ್ಲಿ ಒಳಮೀಸಲಾತಿ ಜಾರಿಗೆ ಸಹಮತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.