ರಾಮನಗರ: ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಪಿತೃ ವಿಯೋಗವಾಗಿದೆ. 90 ವರ್ಷ ವಯಸ್ಸಿನ ಪುಟ್ಟಮಾದೇಗೌಡ ಅವರು ಭಾನುವಾರ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಮೃತರು ಪತ್ನಿ ನಾಗರತ್ನಮ್ಮ, ಮೂರು ಮಂದಿ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಸಿ.ಪಿ. ಯೋಗೀಶ್ವರ್ , ಸಿ.ಪಿ. ಗಂಗಾಧರ್, ಸಿ.ಪಿ. ರಾಜೇಶ್, ಸಿ. ಪಿ. ಪುಷ್ಪ, ಸಿ.ಪಿ. ಭಾಗ್ಯ ಸೇರಿದಂತೆ ಅಪಾರ ಬಂಧುಗಳನ್ನ ಅಗಲಿದ್ದಾರೆ.
ಮೃತ ಪುಟ್ಟಮಾದೇಗೌಡ ಅವರು ಚನ್ನಪಟ್ಟಣ, ರಾಮನಗರ ತಾಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಪುಟ್ಟಮಾದೇಗೌಡ ಅವರ ಸಾವಿನಿಂದ ಚಕ್ಕೆರೆಯಲ್ಲಿ ನೀರವ ಮೌನ ಅವರಿಸಿದೆ. ಮೃತದೇಹವನ್ನು ಭಾನುವಾರ ರಾತ್ರಿ ಸ್ವಗ್ರಾಮ ಚಕ್ಕೆರೆಗೆ ತರಲಾಗಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ: ಅಪೋಲೋ ಆಸ್ಪತ್ರೆಗೆ ದಾಖಲು - HD KUMARASWAMY HOSPITALISED