ETV Bharat / state

ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ: ಸಿಎಂ ಸಿದ್ದರಾಮಯ್ಯ‌ - cm siddaramaiah - CM SIDDARAMAIAH

ಬಿಜೆಪಿಯಲ್ಲಿರುವ ಭ್ರಷ್ಟಾಚಾರಿಗಳ ವಿರುದ್ಧ ಮೊದಲು ಪ್ರಧಾನಿ ಮೋದಿಯವರು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ‌
ಸಿಎಂ ಸಿದ್ದರಾಮಯ್ಯ‌ (ETV Bharat)
author img

By ETV Bharat Karnataka Team

Published : Sep 28, 2024, 1:58 PM IST

Updated : Sep 28, 2024, 2:24 PM IST

ಮೈಸೂರು: "ಬಿಜೆಪಿಯಲ್ಲಿಯೇ ಬಹಳ ಭ್ರಷ್ಟಾಚಾರಿಗಳಿದ್ದು, ಪ್ರಧಾನಿ ಮೋದಿಯವರು ಅವರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರಧಾನಿ ಮೋದಿಯವರು ಹರಿಯಾಣದ ಪ್ರಚಾರ ಭಾಷಣದಲ್ಲಿ ರಾಜ್ಯದ ಮುಡಾ ವಿಚಾರವನ್ನು ಪ್ರಸ್ತಾಪಿಸಿದಕ್ಕೆ ಎಂಬುದಕ್ಕೆ ಪ್ರತಿಕ್ರಿಯಿಸಿ, "ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಮೋದಿಯವರು ಮಣಿಪುರದ ಹಿಂಸೆಯ ಬಗ್ಗೆ ಮಾತನಾಡಿಲ್ಲ. ಅಲ್ಲಿಗೆ ಭೇಟಿಯೂ ನೀಡಲಿಲ್ಲವೇಕೆ..? ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ‌ (ETV Bharat)

ಸುಳ್ಳು ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ: ಕುಮಾರಸ್ವಾಮಿ ಇಂದು ಮಾಧ್ಯಮಗೋಷ್ಟಿಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, "ಕುಮಾರಸ್ವಾಮಿಯವರ ಎಲ್ಲ ಹೇಳಿಕೆಗಳು ಸುಳ್ಳಿನಿಂದ ಕೂಡಿದ್ದು, ಅವರ ಎಲ್ಲ ಮಾತಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆಯಿಲ್ಲ" ಎಂದರು. ಬಳಿಕ ಪೊನ್ನಣ್ಣ ಅವರು ನನ್ನ ಕಾನೂನು ಸಲಹೆಗಾರ ಆಗಿರುವುದರಿಂದ, ಪ್ರತಿದಿನ ಅವರಿಂದ ಕಾನೂನಿನ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ಸಿಎಂ ನಿವಾಸಕ್ಕೆ ಸಚಿವರು, ಕಾನೂನು ಸಲಹೆಗಾರ ಭೇಟಿ: ಮೈಸೂರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಎಫ್​ಐ ಆರ್​ ದಾಖಲು ಆದ ಬಳಿಕ ಇಂದು ಬೆಳಗ್ಗೆಯೇ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್‌ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಮೈಸೂರಿನ ಟಿ.ಕೆ. ಲೇಔಟ್​ನಲ್ಲಿರುವ ಸಿಎಂ ನಿವಾಸಕ್ಕೆ ದಿಢೀರ್‌ ಭೇಟಿ ನೀಡಿದ್ದಾರೆ.

ಸಚಿವ ಭೈರತಿ ಸುರೇಶ್‌ (ETV Bharat)

ಸಚಿವ ಭೈರತಿ ಸುರೇಶ್‌ ಮುಖ್ಯಮಂತ್ರಿಗಳ ಜತೆ ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಬೆಳಗ್ಗೆಯೇ ಮುಖ್ಯಮಂತ್ರಿಗಳ ಮನೆಗೆ ಆಗಮಿಸಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಿಎಂ ಜತೆ ಅವರ ಮನೆಯಲ್ಲಿ ಗುಪ್ತ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಭೈರತಿ ಸುರೇಶ್,​ "ಯಾವುದೋ ತಲೆ ನೋವು ಇತ್ತು ಅದಕ್ಕೆ ಬಂದಿದ್ವಿ. ಮುಡಾ ವಿಚಾರದಲ್ಲಿ ಅಲ್ಲ ತಲೆ ನೋವಿನ ವಿಚಾರ. ನಮ್ಮದು ಯಾವುದೋ ಒಂದು ಬೇರೆ ವಿಚಾರದಲ್ಲಿ ತಲೆ ನೋವಿತ್ತು. ಅದಕ್ಕೆ ಸಿಎಂ ಸಾಹೇಬರನ್ನು ಭೇಟಿ ಮಾಡಲು ಬಂದಿದ್ದೆವು. ನಾನು ಹಾಗೂ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಕೊಡಗಿಗೆ ಹೊರಟಿದ್ದೇವೆ. ಮಾರ್ಗ ಮಧ್ಯೆ ಸಿಎಂ ಭೇಟಿ ಮಾಡಿದ್ದೇವೆ ಅಷ್ಟೇ. ಬೇರೆ ಏನು ಚರ್ಚೆ ನಡೆದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಚುನಾವಣಾ ಬಾಂಡ್ ಪ್ರಕರಣದಲ್ಲಿ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡ್ತಾರಾ?: ಸಿದ್ದರಾಮಯ್ಯ - CM Siddaramaiah

Last Updated : Sep 28, 2024, 2:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.