ಬೆಂಗಳೂರು: ಕೆಎಂಎಫ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲಿನ ಸಂಗ್ರಹಣೆ 1 ಕೋಟಿ ಲೀಟರ್ ದಾಟಿದೆ. ರಾಜ್ಯಾದ್ಯಂತ ಒಂದೇ ದಿನ ಇಷ್ಟೊಂದು ಹಾಲಿನ ಹೊಳೆ ಹರಿದಿರುವುದು ಇದೇ ಮೊದಲು. ಈ ಮೂಲಕ ಕೆಎಂಎಫ್ ಹೊಸ ದಾಖಲೆ ಬರೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿ ಕೆಎಂಎಫ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈನುಗಾರರಿಂದ ಖರೀದಿಸುವ ಹಾಲಿಗೆ 3 ರೂ. ಹೆಚ್ಚಳ ನೀಡುತ್ತಿರುವುದು, ಉತ್ತಮ ಮುಂಗಾರಿನಿಂದಾಗಿ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿರುವ ಕಾರಣದಿಂದಾಗಿ ಕಳೆದ ವರ್ಷ ನಿತ್ಯ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇಂದು ಒಂದು ಕೋಟಿ ಲೀಟರ್ಗೆ ತಲುಪಿದೆ ಎಂದಿದ್ದಾರೆ.
ಯಾವ ಕೆಎಂಎಫ್ ಸಂಸ್ಥೆಯನ್ನು ಹಿಂದಿನ ಬಿಜೆಪಿ ಸರ್ಕಾರ ನಷ್ಟದ ಹಾದಿಗೆ ತಳ್ಳಿ ಗುಜರಾತ್‌ನ ಅಮೂಲ್ ಜೊತೆ ವಿಲೀನ ಮಾಡುವ ಕುತಂತ್ರ ನಡೆಸಿತ್ತೋ, ಕನ್ನಡಿಗ ರೈತರು ದಶಕಗಳ ಕಾಲ ಶ್ರಮದಿಂದ ಕಟ್ಟಿದ ಸಂಸ್ಥೆಯನ್ನು ಯಾರದೋ ಮರ್ಜಿಗೆ ಒಳಗಾಗಿ ವಿಲೀನದ ಹೆಸರಲ್ಲಿ ಮುಳುಗಿಸಲು ಹೊರಟಿತ್ತೋ, ಅದೇ ಕೆಎಂಎಫ್ ಇಂದು ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಿ, ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಈ ಶ್ರೇಯ ನಾಡಿನ ಪ್ರತಿಯೊಬ್ಬ ಶ್ರಮಜೀವಿ ಹೈನುಗಾರನಿಗೂ ಸಲ್ಲಬೇಕು ಎಂದಿದ್ದಾರೆ.
ಇದನ್ನೂ ಓದಿ: ಹೆಚ್ಚುವರಿ ಹಾಲಿಗೆ 2 ರೂಪಾಯಿ ನಿಗದಿಪಡಿಸಲಾಗಿದೆಯೇ ಹೊರತು ಹಾಲಿನ ಬೆಲೆ ಏರಿಸಿಲ್ಲ: ಸಿಎಂ - CM Siddaramaiah