ETV Bharat / state

ದಾವಣಗೆರೆ: ಸ್ವಂತ ಖರ್ಚಿನಲ್ಲಿ ಭದ್ರಾ ನಾಲೆಗಳ ಹೂಳು ತೆಗೆಸಿದ ರೈತರು - Bhadra Canal - BHADRA CANAL

ನಾಲೆಗಳ ಹೂಳು ತೆಗೆಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್‌ನ ರೈತರು ಸ್ವಂತ ಖರ್ಚಿನಲ್ಲಿ ಹೂಳು ತೆಗೆಸುವ ಕಾರ್ಯಕ್ಕೆ ಕೈಹಾಕಿದ್ದಾರೆ.

ಸ್ವಂತ ಖರ್ಚಿನಲ್ಲಿ ಭದ್ರಾ ನಾಲೆಗಳ ಹೂಳು ತೆಗೆಸಿದ ರೈತರು
ಸ್ವಂತ ಖರ್ಚಿನಲ್ಲಿ ಭದ್ರಾ ನಾಲೆಗಳ ಹೂಳು ತೆಗೆಸಿದ ರೈತರು (ETV Bharat)
author img

By ETV Bharat Karnataka Team

Published : Aug 12, 2024, 9:43 PM IST

Updated : Aug 12, 2024, 10:37 PM IST

ಸ್ವಂತ ಖರ್ಚಿನಲ್ಲಿ ಭದ್ರಾ ನಾಲೆಗಳ ಹೂಳು ತೆಗೆಸಿದ ರೈತರು (ETV Bharat)

ದಾವಣಗೆರೆ: ಈ ಬಾರಿ ವರುಣನ ಕೃಪೆಯಿಂದ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗಿದೆ. ಪರಿಣಾಮ, ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ರೈತರ ಬೆಳೆಗಳಿಗೆ ನೀರು ಒದಗಿಸಲು ಜಲಾಶಯದಿಂದ‌ ನಾಲೆಗಳಿಗೆ ನೀರು ಹರಿಸಲಾಗಿದೆ.‌ ವಿಪರ್ಯಾಸ ಎಂದರೆ ನಾಲೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಇದರಿಂದ ಬೇಸತ್ತ ರೈತರು ಮತ್ತು ನೀರು ಬಳಕೆದಾರರ ಸಂಘದವರು ಸ್ವಂತ ಖರ್ಚಿನಲ್ಲಿಯೇ ನಾಲೆಗಳಲ್ಲಿನ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೌದು, ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದು ಇಂದಿಗೆ ಹದಿಮೂರು ದಿನ ಕಳೆದಿದೆ. ಆದರೆ ಇದೂವರೆಗೂ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ಹರಿದಿಲ್ಲ. ಭೀಮನೆರೆಯಿಂದ ಕಂದಗಲ್ಲು ಗ್ರಾಮದವರೆಗೆ 19 ಕಿಲೋ ಮೀಟರ್ ಉಪನಾಲೆ ಇದ್ದು ನಾಲೆಯ ತುಂಬೆಲ್ಲಾ ಹೂಳು ತುಂಬಿದೆ. ಇದರಿಂದಾಗಿ ಕೊನೆ ಭಾಗಕ್ಕೆ ನೀರು ಹರಿದಿಲ್ಲ. ನಾಲೆಯ ಹೂಳು ತೆಗೆಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್​ನ ರೈತರು ಹಾಗೂ ನೀರು ಬಳಕೆದಾರರ ಸಂಘದವರು ಸೇರಿಕೊಂಡು ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲೆಯ ಹೂಳು ತೆಗೆಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಕಂದಗಲ್ಲು ಗ್ರಾಮದಲ್ಲಿ ಸುಮಾರು 2,500 ಎಕರೆ ಪ್ರದೇಶಕ್ಕೆ ಉಪನಾಲೆಯಿಂದ ನೀರು ಹರಿಯಲಿದೆ. ಅಷ್ಟೇ ಅಲ್ಲದೇ, 94 ಎಕರೆ ವಿಸ್ತೀರ್ಣದ ಕೆರೆಗೂ ನೀರು ತಲುಪಿಲ್ಲ. ಆದ್ದರಿಂದ ಕಂದಗಲ್ಲು ಗ್ರಾಮದ ರೈತರು ಭತ್ತ ನಾಟಿ ಮಾಡಲು ಮತ್ತು ತೋಟಗಳಿಗೆ ನೀರು ಬಳಸಲು ಸಾಧ್ಯವಾಗಿಲ್ಲ. ನಾಲೆಯ ಹೂಳು ತೆಗೆಸಲು ಅಧಿಕಾರಿಗಳನ್ನು ಕೇಳಿದರೆ ಅನುದಾನ ಇಲ್ಲಾ ಎಂದು ಹೇಳುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ನಮ್ಮ ಗೋಳು ಕೇಳುತ್ತಿಲ್ಲ. ಇದರಿಂದಾಗಿ ರೈತರ ಬಳಿ ಚಂದಾ ವಸೂಲಿ ಮಾಡುವುದರ ಜೊತೆಗೆ ಎರಡು ನೀರ ಬಳಕೆದಾರರ ಸಂಘಗಗಳು ಸೇರಿಕೊಂಡು ನಾಲೆಯ ಹೂಳು ತೆಗೆಸಲಾಗುತ್ತಿದೆ.

ಈ ಬಗ್ಗೆ ರೈತ ಶಿವಶಂಕರ್ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, ನಾಲೆಗಳಲ್ಲಿ ಹೂಳು ತುಂಬಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳು ಹೂಳು ತೆಗೆಸಲು ಫಂಡ್ ಇಲ್ಲ ಎಂಬ ಸಬೂಬು ಹೇಳಿದ್ದರು. ಹೀಗಾಗಿ ನಾವೇ ಸ್ವಂತ ಖರ್ಚಿನಲ್ಲಿ ಹೂಳು ತೆಗೆಸಲು ಮುಂದಾಗಿದ್ದೇವೆ. ಎರಡು ಲಕ್ಷದ ವೆಚ್ಚದಲ್ಲಿ ಈ ಕೆಲಸಕ್ಕೆ ಕೈಹಾಕಿದ್ದೇವೆ. ಒಟ್ಟು ನಾಲೆ 19 ಕಿ.ಮೀ ಇದ್ದು, ನಾವು 15 ಕಿ.ಮೀ ಹೂಳನ್ನು ಎರಡು ಹಿಟಾಚಿ ಮೂಲಕ ತೆಗೆಸಲಾಗುತ್ತಿದೆ ಎಂದು ತಿಳಿಸಿದರು.

ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಕಾಂತರಾಜ್ ಮಾತನಾಡಿ, ಹೂಳು ತೆಗೆಯಲು ಫಂಡ್ ಇಲ್ಲ, ನೀವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಹೇಳಿದಾಗ ಈ ಕೆಲಸಕ್ಕೆ ಕೈ ಹಾಕಿದ್ದೇವೆ. ಇನ್ನು ಜನಪ್ರತಿನಿಧಿಗಳಿಗೆ ಕೇಳಿದರೆ ನಮಗೆ ಶಾಸಕರ ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಶಿವಮೊಗ್ಗ: ತುಂಗಾ ಜಲಾಶಯದ 8ನೇ ರೇಡಿಯಲ್ ಗೇಟ್ ಬಂದ್ - Tunga Reservoir Radial Gate

Last Updated : Aug 12, 2024, 10:37 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.